Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 2018ರಲ್ಲಿ ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸುವಾಗ ಬಿಜೆಪಿ ಹೊರತುಪಡಿಸಿ ರಾಷ್ಟ್ರದ ಜಾತ್ಯತೀತ ಪಕ್ಷಗಳ ಬಹುತೇಕ ನಾಯಕರು ಭಾಗಿಯಾಗಿದ್ದರು. ಅನಂತರ ಕುಮಾರಸ್ವಾಮಿ ಅವರ ಸರಕಾರ ತೆಗೆದವರೂ ಕಾಂಗ್ರೆಸ್‌ನವರೇ ಎಂದು ದೂರಿದರು.
ಜೆಡಿಎಸ್ ಅನ್ನು ಮುಗಿಸಲು ವ್ಯವಸ್ಥಿತ ತಂತ್ರವನ್ನು ಕಾಂಗ್ರೆಸ್ ಮಾಡುತ್ತಿದ್ದಾಗ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಜೆಡಿಎಸ್‌ನ್ನು ಎನ್‌ಡಿಎಗೆ ಸ್ವಾಗತಿಸಿದರು. ಮೋದಿ ಬಗ್ಗೆ ವೈಯಕ್ತಿಕವಾಗಿ ಗೌರವ ಇಟ್ಟುಕೊಂಡಿದ್ದೇನೆ. ಅವರೂ ನನ್ನ ಬಗ್ಗೆ ಗೌರವ ಇಟ್ಟುಕೊಂಡಿದ್ದಾರೆ. ಮುಂದಿನ ದಿನಗಳಲ್ಲಿ ಬಿಜೆಪಿ ಜತೆ ಕೈ ಜೋಡಿಸಿ, ಕಾಂಗ್ರೆಸ್ ವಿರುದ್ಧ ಹೋರಾಡುತ್ತೇವೆ ಎಂದು ತಿಳಿಸಿದರು. ಭವಾನಿ ಪ್ರಕರಣವನ್ನು ದೊಡ್ಡದು ಮಾಡಬೇಡಿ
ಭವಾನಿ ರೇವಣ್ಣ ಅವರ ಕಾರು ಅಪಘಾತದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಭವಾನಿಗೆ ಎರಡು ಮಂಡಿಗಳ ಆಪರೇಷನ್ ಆಗಿದ್ದು, ಆರೋಗ್ಯ ಸರಿಯಿಲ್ಲ. ಅದನ್ನೇ ದೊಡ್ಡದು ಮಾಡೋದು ಬೇಡ ಎಂದು ಹೆಚ್ಚು ಪ್ರತಿಕ್ರಿಯಿಸಲು ನಿರಾಕರಿಸಿದರು.