Advertisement

ಜೆಡಿಎಸ್‌- ಕಾಂಗ್ರೆಸ್‌ ಕಾರ್ಯಕರ್ತರ ಗಲಾಟೆ

05:49 AM Jul 07, 2020 | Lakshmi GovindaRaj |

ಶ್ರೀರಂಗಪಟ್ಟಣ: ಪಿಕಾರ್ಡ್‌ ಬ್ಯಾಂಕ್‌ ವಾಣಿಜ್ಯ ಮಳಿಗೆಗಳ ಉದ್ಘಾಟನಾ ಸಮಾರಂಭದಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ಕಾರ್ಯಕರ್ತರ ನಡುವೆ ಗಲಾಟೆ ನಡೆದು ಕೈ ಕೈ ಮಿಲಾಯಿಸುವ ಹಂತ ತಲುಪಿದ ಘಟನೆ ಶ್ರೀರಂಗಪಟ್ಟಣದಲ್ಲಿ  ನಡೆದಿದೆ. ಬ್ಯಾಂಕ್‌ ಮುಂಭಾಗದಲ್ಲಿ ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರನ್ನು ಆಹ್ವಾನಿಸಿಲ್ಲ ಎಂದು ಜೆಡಿಎಸ್‌ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮಕ್ಕೆ ಯಾರನ್ನೂ ಕರೆದಿಲ್ಲ ಎಂದು ಪಿಕಾರ್ಡ್‌ ಬ್ಯಾಂಕಿನ ಆಡಳಿತ ಮಂಡಳಿ ಸದಸ್ಯರು ಹೇಳುವ, ಸಮಯಕ್ಕೆ ಕಾಂಗ್ರೆಸ್‌ ಮುಖಂಡ ಎ.ಬಿ. ರಮೇಶ ಬಂಡಿಸಿದ್ದೇಗೌಡ ಸ್ಥಳಕ್ಕೆ ಆಗಮಿಸಿದರು. ಇದರಿಂದ ಕೆರಳಿದ ಜೆಡಿಎಸ್‌ ಕಾರ್ಯಕರ್ತರು ಬ್ಯಾಂಕ್‌ ಆಡಳಿತ ಮಂಡಳಿ  ವಿರುದ್ಧ ಘೋಷಣೆ ಕೂಗಿ, ಕಾರ್ಯ ಕ್ರಮ ಮುಂದೂಡಬೇಕು ಎಂದು ಆಗ್ರಹಿಸಿದರು.

ಜೆಡಿಎಸ್‌ನ ಬಿ.ಎಸ್‌.ತಿಲಕ್‌ ಕುಮಾರ್‌, ಕೃಷ್ಣಪ್ಪ, ನೆಲಮನೆ ದಯಾನಂದ, ಎಸ್‌.ಪ್ರಕಾಶ್‌, ಕಾಯಿ ವೆಕಟೇಶ್‌ ಹಾಗೂ ಕಾಂಗ್ರೆಸ್‌ನ ಪುರಸಭಾ ಸದಸ್ಯ  ಎಂ.ಎಲ್‌. ದಿನೇಶ್‌, ಎಸ್‌.ಎನ್‌.ದಯಾನಂದ್‌, ಸೋಮಸುಂದರ್‌, ಆರ್‌.ಎನ್‌.ಗುರುಪ್ರಸಾದ್‌ ಇತರರು ಪರಸ್ಪರ ಆರೋಪ ಮಾಡಿ, ತಳ್ಳಾಟ, ನೂಕಾಟವೂ ನಡೆದು ಕೈಕೈ ಮಿಲಾಯಿಸುವ ಹಂತ ತಲುಪಿತು.

ಪೊಲೀಸರು ಮಧ್ಯ ಪ್ರವೇಶಿಸಿ ಸಮಾಧಾನಪಡಿಸಿದರು. ಪಿಕಾರ್ಡ್‌ ಬ್ಯಾಂಕ್‌ ಅಧ್ಯಕ್ಷ ಟಿ.ಆರ್‌.ಶಂಕರ್‌ ಮಾತನಾಡಿ, ಕೊರೊನಾ ಭೀತಿಯಿಂದ ವಾಣಿಜ್ಯ ಮಳಿಗೆಗಳ ಉದ್ಘಾಟನೆಗೆ ಯಾರನ್ನು ಕರೆದಿಲ್ಲ. ಆಹ್ವಾನ ಪತ್ರಿಕೆಯನ್ನೂ ಮುದ್ರಿಸಿಲ್ಲ. ಮಾಜಿ ಶಾಸಕ ರಮೇಶ ಬಂಡಿಸಿದ್ದೇಗೌಡ ಆಚಾನಕ್ಕಾಗಿ ಈ ಮಾರ್ಗವಾಗಿ ಬಂದು ಹೋಗಿದ್ದಾರೆ, ಅಷ್ಟೆ. ಎಂದು ಹೇಳಿದರು. ನಂತರ ಆಡಳಿತ ಮಂಡಳಿಯವರೇ ವಾಣಿಜ್ಯ ಮಳಿಗೆಗಳನ್ನು ಉದ್ಘಾಟಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next