ಬೆಂಗಳೂರು: ಪ್ರಧಾನಿ ಮೋದಿಯವರನ್ನು ಮಾಜಿ ಪ್ರಧಾನಿ ದೇವೇಗೌಡರು ಭೇಟಿಯಾದ ಬಗ್ಗೆ ವಿಪಕ್ಷ ನಾಯಕ ಸಿದ್ದ ರಾಮಯ್ಯ ಟೀಕಾ ಪ್ರಹಾರ ನಡೆಸಿದ್ದಾರೆ. “ಜೆಡಿಎಸ್ ಬಿಜೆಪಿಯ ಬಿ ಟೀಂ’ ಎಂದು ಸಿದ್ದರಾಮಯ್ಯ ಟೀಕಿಸಿದ್ದರೆ, “ಪ್ರಧಾನಿ ಭೇಟಿಗೆ ಯಾವ ದೊಣ್ಣೆ ನಾಯಕನ ಅಪ್ಪಣೆ ಬೇಕಾಗಿಲ್ಲ’ ಎಂದು ದೇವೇಗೌಡರು ತಿರುಗೇಟು ನೀಡಿದ್ದಾರೆ.
ದೇವೇಗೌಡರದ್ದು ಅನುಕೂಲ ರಾಜ ಕಾರಣ. ಎಲ್ಲಿ ಲಾಭ ಇದೆಯೋ ಅಲ್ಲಿಗೆ ಹೋಗುತ್ತಾರೆ. ನಾವು ಅಧಿಕಾರದಲ್ಲಿ ಇಲ್ಲ ದಿದ್ದರೂ ಸಿದ್ಧಾಂತ ಬಿಟ್ಟಿಲ್ಲ. ಗೋಹತ್ಯೆ ವಿಚಾರದಲ್ಲಿ ಜೆಡಿಎಸ್ ವರಿಷ್ಠರು ಮಾತ ನಾಡಲಿಲ್ಲ. ಪರಿಷತ್ ಚುನಾವಣೆಯಲ್ಲಿ ಬಿ.ಎಸ್. ಯಡಿ ಯೂರಪ್ಪ – ಕುಮಾರ ಸ್ವಾಮಿ ಮಾತನಾಡಿ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂದು ಗೌಡರೇ ಬಹಿರಂಗವಾಗಿ ಹೇಳಿದ್ದಾರೆ ಎಂದು ಸಿದ್ದರಾಮಯ್ಯ ಕುಟುಕಿದ್ದಾರೆ.
ಹಾಸನ ಜಿಲ್ಲೆ, ರಾಜ್ಯ-ರಾಷ್ಟ್ರದ ಅಭಿವೃದ್ಧಿ ಗಾಗಿ ಪ್ರಧಾನಿಯನ್ನು ಈಗಾಗಲೇ ಐದು ಬಾರಿ ಭೇಟಿ ಮಾಡಿದ್ದೇನೆ, ಅಗತ್ಯ ಬಿದ್ದಾಗ ಮುಂದೆಯೂ ಮಾಡುತ್ತೇನೆ. ಯಾವ ದೊಣ್ಣೆ ನಾಯಕನ ಅಪ್ಪಣೆ ಕೇಳಬೇಕಿಲ್ಲ ಎಂದು ಗೌಡರು ತಿರು ಗೇಟು ನೀಡಿದ್ದಾರೆ. ದೇವೇಗೌಡ ಬದುಕಿ ರುವ ತನಕ ರಾಜ ಕೀಯವಾಗಿ ಬಿಜೆಪಿ, ಕಾಂಗ್ರೆಸ್ ಜತೆಗೆ ಸಮಾನ ಅಂತರ ಕಾಪಾ ಡುತ್ತೇನೆ, ಕಾರ್ಯಕರ್ತರ ಶ್ರಮ ವ್ಯರ್ಥ ವಾಗಲು ಬಿಡುವುದಿಲ್ಲ.
ಇದನ್ನೂ ಓದಿ:ಪ್ರಧಾನಿ ಮೋದಿ ನಡತೆ ನೋಡಿ ಸಿದ್ದು ಕಲಿಯಲಿ: ಈಶ್ವರಪ್ಪ
ಮೋದಿ ಭೇಟಿ ಮಾಡಿದ್ದೇನೆಂದರೆ ಪಕ್ಷ ಅಡವಿರಿಸಿಲ್ಲ, ವಿಲೀನ ಮಾಡಲೂ ಹೋಗಿಲ್ಲ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡಲು ಅಡ್ಡಗಾಲು ಹಾಕಿದ ಸಿದ್ದರಾಮಯ್ಯ ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಅಪಪ್ರಚಾರ ಮಾಡಿ, ಪಕ್ಷದ ಬಗ್ಗೆ ಜನರಲ್ಲಿ ಗೊಂದಲದ ವಾತಾವರಣ ಸೃಷ್ಟಿಸಿ ರಾಜಕೀಯವಾಗಿ ಲಾಭ ಪಡೆಯಲು ಹೊರಟಿದ್ದಾರೆ. ಅದು ಫಲಿಸುವುದಿಲ್ಲ ಎಂದಿದ್ದಾರೆ.
ನೇತು ಹಾಕಿಕೊಳ್ಳಲಿ
ಸಿದ್ದರಾಮಯ್ಯ ಸ್ಲೇಟಿನಲ್ಲಿ “ಜೆಡಿಎಸ್ ಬಿಜೆಪಿಯ ಬಿ ಟೀಂ’ ಎಂದು ಬರೆದು ಕಟ್ಟು ಹಾಕಿಸಿ ಕುತ್ತಿಗೆಗೆ ನೇತುಹಾಕಿ ತಿರುಗಾಡಲಿ. ಹಾಗೆಯೇ ಪ್ರಚಾರ ಮಾಡಿಕೊಂಡು ಪ್ರತಿ ದಿನ ಓಡಾಡಲಿ ಎಂದು ಎಚ್. ಡಿ. ಕುಮಾರಸ್ವಾಮಿ ಹೇಳಿದರು.