ಹುಬ್ಬಳ್ಳಿ: ಶ್ರೀ ರಾಜರಾಜೇಶ್ವರ ಶ್ರೀ ಸಹಸ್ರಾರ್ಜುನ ಮಹಾರಾಜರ ಜಯಂತಿ ಉತ್ಸವದ ಸಮಾರೋಪ ಸಮಾರಂಭ ಗುರುವಾರ ಇಲ್ಲಿನ ದಾಜಿಬಾನ ಪೇಟೆಯ ಶ್ರೀ ಸಹಸ್ರಾರ್ಜುನ ವೃತ್ತದಲ್ಲಿ ನಡೆಯಿತು. ಸೋಮವಂಶ ಸಹಸ್ರಾರ್ಜುನ ಕ್ಷತ್ರಿಯ ಶ್ರೀ ತುಳಜಾಭವಾನಿ ದೇವಸ್ಥಾನ ಕೇಂದ್ರ ಪಂಚ ಸಮಿತಿ ಹುಬ್ಬಳ್ಳಿ-ಧಾರವಾಡ ಇವರಿಂದ ಹಮ್ಮಿಕೊಂಡಿದ್ದ ಸಮಾರಂಭವನ್ನು ಆಚಾರ್ಯ ಶ್ರೀ ನರಹರಿ ವಾಳ್ವೆಕರ ಉದ್ಘಾಟಿಸಿದರು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಕಿಮ್ಸ್‌ನ ನಿರ್ದೇಶಕ ಡಾ| ರಾಮಲಿಂಗಪ್ಪ ಅಂಟರತಾನಿ, ಎಸ್‌ಎಸ್‌ಕೆ ಸಮಾಜದವರು ಹು-ಧಾ ಅವಳಿನಗರಕ್ಕೆ ಹೆಮ್ಮೆ ಹಾಗೂ ಒಂದು ಶಕ್ತಿ ಆಗಿದ್ದಾರೆ. ಅವರು ಒಗ್ಗಟ್ಟು ಪ್ರದರ್ಶಿಸುವ ಮೂಲಕ ಸಮಾಜದ ಏಳ್ಗೆಗೆ ಶ್ರಮಿಸುತ್ತಿದ್ದಾರೆ. ಕೋವಿಡ್-19ರ ಸಂದರ್ಭದಲ್ಲಿ ಸಮಾಜದ ಬಹುತೇಕರು ಕಿಮ್ಸ್‌ಗೆ ಸಹಾಯ-ಸಹಕಾರ ಮಾಡಿದ್ದಾರೆ. ಕಿಮ್ಸ್ ನ ವೈದ್ಯರು ಹಾಗೂ ವೈದ್ಯಕೀಯ ತಂಡ ಸೇರಿದಂತೆ ಎಲ್ಲ ಸಿಬ್ಬಂದಿ ಕೋವಿಡ್ ಸಂದರ್ಭದಲ್ಲಿ ಉತ್ತಮ ಕಾರ್ಯ ಮಾಡಿದರು.
ಹೀಗಾಗಿ ರಾಜ್ಯದಲ್ಲೇ ಒಳ್ಳೆಯ ಹೆಸರು ಪಡೆಯಿತು. ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಈ ವೇಳೆ ಕಿಮ್ಸ್‌ನಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳಾದವು. ಉನ್ನತೀಕರಣಗೊಂಡಿತು. 10 ವರ್ಷಗಳಷ್ಟು ಆಗಬಹುದಾದ ಮೂಲಸೌಕರ್ಯಗಳಾದವು ಎಂದರು.
ಮಹೇಂದ್ರ ಸಿಂಘಿ ಮಾತನಾಡಿ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದವರನ್ನು ಗುರುತಿಸಿ ಪಕ್ಷಭೇದ ಮರೆತು ಸನ್ಮಾನಿಸುತ್ತಿರುವುದು ಶ್ಲಾಘನೀಯ. ಎಸ್‌ಎಸ್‌ಕೆ ಸಮಾಜಕ್ಕೆ ನನ್ನ ಕೈಲಾದ ಸೇವೆ ಮಾಡುವೆ ಎಂದರು.
ಎಸ್‌ಎಸ್‌ಕೆ ಸಮಾಜದ ಮುಖ್ಯ ಧರ್ಮದರ್ಶಿ ನೀಲಕಂಠಸಾ ಜಡಿ ಅಧ್ಯಕ್ಷತೆ ವಹಿಸಿದ್ದರು. ಗುರುಮಾತೆ ವಿಜಯಾ ಬದ್ದಿ, ಎಸ್‌ಎಸ್‌ಕೆ ಸಮಾಜದ ರಾಜ್ಯಾಧ್ಯಕ್ಷ ಅಶೋಕ ಕಾಟವೆ, ಉಪಾಧ್ಯಕ್ಷ ಸತೀಶ ಮೆಹರವಾಡೆ, ಹುಡಾ ಮಾಜಿ ಅಧ್ಯಕ್ಷ ಬಾಳು ಮಗಜಿಕೊಂಡಿ, ಎನ್‌ಜಿಇಎಫ್ ಮಾಜಿ ಅಧ್ಯಕ್ಷ ರಂಗಾ ಬದ್ದಿ, ಶ್ರೀಕಾಂತ ಹಬೀಬ, ಹನಮಂತಸಾ ನಿರಂಜನ, ಶಂಕರಸಾ ಲದವಾ, ಕೆ.ಟಿ. ಪವಾರ, ಕೆ.ಪಿ. ಪೂಜಾರಿ, ಕಿಮ್ಸ್ ಅಧೀಕ್ಷಕ ಡಾ|ಅರುಣಕುಮಾರ ಸಿ., ಡಾ|ಸಚಿನ ಹೊಸಕಟ್ಟಿ, ಕೈಗಾರಿಕೋದ್ಯಮಿ ನಾರಾಯಣಸಾ ನಿರಂಜನ, ಯೋಗೇಶ ಹಬೀಬ, ಅಶೋಕ ಹಬೀಬ, ವಸಂತ ಲದವಾ, ಭಾಸ್ಕರ ಜಿತೂರಿ, ಎ.ಟಿ. ಪವಾರ, ಸರಳಾ ಭಾಂಡಗೆ, ರಾಜಶ್ರೀ ಜಡಿ, ರೂಪಾ ಬುರಬುರೆ, ರತ್ನಮಾಲಾ ಬದ್ದಿ, ಸುನಿತಾ ಬುರಬುರೆ ಇದ್ದರು.
ಇದೇ ಸಂದರ್ಭದಲ್ಲಿ ಕೋವಿಡ್-19ರ ವೇಳೆ ನಿಸ್ವಾರ್ಥ ಸೇವೆ ಸಲ್ಲಿಸಿದ ವೈದ್ಯರು ಹಾಗೂ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಮಾಜದ ಲೆಕ್ಕ ಪರಿಶೋಧಕರು, ನಿವೃತ್ತ ಸೈನಿಕರು, ಶಿಕ್ಷಕರು, ಪತ್ರಿಕಾ ಛಾಯಾಗ್ರಾಹಕರು, ನೂತನ ಪಾಲಿಕೆ ಸದಸ್ಯರನ್ನು ಸನ್ಮಾನಿಸಲಾಯಿತು. ಉತ್ಸವ ನಿಮಿತ್ತ ನಡೆದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಪ್ರಭಾವತಿ ಪೂಜಾರ ಪ್ರಾರ್ಥಿಸಿದರು. ನಾರಾಯಣಸಾ ಖೋಡೆ ಸ್ವಾಗತಿಸಿದರು. ಪುಷ್ಪಾ ಧೋಂಗಡಿ ನಿರೂಪಿಸಿದರು.