Dharwad: ಕಟಾವಿಗೆ ಬಂದಿದ್ದ 50 ಎಕರೆ ಕಬ್ಬು ಬೆಂಕಿಗಾಹುತಿ… ಕಂಗಾಲಾದ ರೈತರು
Team Udayavani, Jan 15, 2025, 8:46 PM IST
ಧಾರವಾಡ: ಕಟಾವಿಗೆ ಬಂದು ನಿಂತಿದ್ದ 50-60 ಎಕರೆಯ ಕಬ್ಬು ಬೆಳೆ ಬೆಂಕಿಯ ಕೆನ್ನಾಲಿಗೆಗೆ ಆಹುತಿಯಾದ ಘಟನೆ ತಾಲೂಕಿನ ದೇವಗಿರಿ ಗ್ರಾಮದಲ್ಲಿ
ಬುಧವಾರ ನಡೆದಿದೆ.
ಶಾರ್ಟ್ ಸರ್ಕೀಟ್‌ನಿಂದ ಮಧ್ಯಾಹ್ನದ ಹೊತ್ತಿಗೆ ಬೆಟಗೇರಿ ಕುಟುಂಬದ ಹೊಲದ ಕಬ್ಬಿಗೆ ಬೆಂಕಿ ಹೊತ್ತಿಕೊಂಡಿದೆ. ಇದಾದ ಬಳಿಕ ಅಕ್ಕ-ಪಕ್ಕದ ಹೊಲಗಳಿಗೂ ಬೆಂಕಿ ಹರಡಿಸಿದ್ದು, ಹೀಗಾಗಿ ಬೆಂಕಿ ನಿಯಂತ್ರಣಕ್ಕೆ ಗ್ರಾಮಸ್ಥರು ಮಾಡಿದ ಎಲ್ಲ ಪ್ರಯತ್ನಗಳು ವಿಫಲಗೊಂಡವು. ಕೊನೆಗೆ 50-60 ಎಕರೆಗೂ ವಿಸ್ತರಿಸಿದ ಬೆಂಕಿಯು ಕಟಾವಿಗೆ ಬಂದಿದ್ದ ಇಡೀ ಕಬ್ಬನ್ನು ಆಹುತಿ ಪಡೆದಿದೆ.
ಈ ಬೆಂಕಿ ಅನಾಹುತದಲ್ಲಿ ಬೆಟಗೇರಿ, ಧಾರವಾಡ, ರಾಥೋಳ್ಳಿ, ಕುರ್ತಿಕೋಟಿ ಸೇರಿದಂತೆ ವಿವಿಧ ಕುಟುಂಬಗಳ ಕಬ್ಬು ಸಂಪೂರ್ಣ ಬೆಂಕಿಗಾಹುತಿಯಾಗಿದೆ.
ಪ್ರತಿ ಎಕರೆಗೆ 40 ಟನ್ ಕಬ್ಬು ಸಾಮರ್ಥ್ಯದಂತೆ 50-60 ಎಕರೆಯ 2000 ಟನ್‌ಗಳೂ ಹೆಚ್ಚು ಕಬ್ಬು ಹಾಳಾಗಿದ್ದು, ಈ ಮೂಲಕ ಕಬ್ಬು ಬೆಳೆಗಾರರ ಆರ್ಥಿಕ ಸ್ಥಿತಿಗೆ ನೇರ ಹೊಡೆತ ಬಿದ್ದಾಂತಾಗಿದೆ. ಈ ಮೂಲಕ 50 ಲಕ್ಷಕ್ಕೂ ಅಧಿಕ ಮೌಲ್ಯದ ಕಬ್ಬು ಬೆಂಕಿಗೆ ಆಹುತಿಯಾದಂತಾಗಿದೆ. ಶಾರ್ಟ್ ಸರ್ಕೀಟ್‌ನಿಂದ ತಗುಲಿದ ಬೆಂಕಿಯಿಂದ ನಮ್ಮ 10 ಎಕರೆಯ ಕಬ್ಬು ಹಾಳಾಗಿದ್ದು, 400 ಟನ್ ಕಬ್ಬು ನಮ್ಮ ಎದುರೇ ಬೆಂಕಿಯ ಪಾಲಾಗಿದೆ. ಆದಷ್ಟು ಬೇಗ ಪರಿಹಾರ ನೀಡಬೇಕು. ಶೇ.25 ರಷ್ಟು ಪರಿಹಾರ ಕಡಿತ ಮಾಡದೇ ಶೇ.100 ರಷ್ಟು ಪರಿಹಾರ ನೀಡಬೇಕೆಂದು ದೇವಗಿರಿಯ ರೈತ ನಾರಾಯಣ ಬೆಟಗೇರಿ ಆಗ್ರಹಿಸಿದ್ದಾರೆ.
ಇದನ್ನೂ ಓದಿ: Los Angeles Wildfires: ಇನ್ನೂ 60 ಲಕ್ಷ ಜನರಿಗೆ ಸಂಕಷ್ಟ, ಸಾವಿನ ಸಂಖ್ಯೆ 25ಕ್ಕೇರಿಕೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hubballi: ಪತ್ನಿಯ ಕಿರುಕುಳದಿಂದ ಬೇಸತ್ತಿದ್ದೇನೆಂದು ಡೆತ್‌ನೋಟ್ ಬರೆದು ಪತಿ ಆತ್ಮಹ*ತ್ಯೆ!
Run Away: ಗ್ರಾಮಸ್ಥರ ಹೆಸರಲ್ಲಿ 50 ಲಕ್ಷ ರೂ.ಸಾಲ ಪಡೆದು ದಂಪತಿ ಪರಾರಿ!
MUDA; ಸಿದ್ದರಾಮಯ್ಯ ಪತ್ನಿ, ಬೈರತಿ ಸುರೇಶ್ ಗೆ ರಿಲೀಫ್: ಇಡಿ ನೋಟಿಸ್‌ಗೆ ಹೈಕೋರ್ಟ್ ತಡೆ
Republic Day Tableau: ರಾಜ್ಯದ ‘ಲಕ್ಕುಂಡಿ’ ಸ್ತಬ್ಧಚಿತ್ರಕ್ಕೆ ವೋಟ್ ಮಾಡಿ ಗೆಲ್ಲಿಸಿ
MUDA Case: ಸಿಬಿಐಗೆ ವಹಿಸುವ ಅರ್ಜಿ ವಿಚಾರಣೆ: ತೀರ್ಪು ಕಾಯ್ದಿರಿಸಿದ ಧಾರವಾಡ ಹೈಕೋರ್ಟ್