ನವದೆಹಲಿ: ಪಕ್ಷದ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಳ್ಳದೇ, ಪ್ರಚಾರಕ್ಕೂ ಬರದೇ, ಚುನಾವಣೆಯಲ್ಲಿ ಮತದಾನವನ್ನೂ ಮಾಡದ ಕೇಂದ್ರ ಸಚಿವ ಜಯಂತ್ ಸಿನ್ಹಾ ಅವರಿಗೆ ಬಿಜೆಪಿ ಶೋಕಾಸ್ ನೋಟಿಸ್ ನೀಡಿದ್ದು ಇದೀಗ ಜಯಂತ್ ಸಿನ್ಹಾ ಅವರಿ ಬಿಜೆಪಿ ನೀಡಿದ ಶೋಕಾಸ್ ನೋಟಿಸ್ ಗೆ ಉತ್ತರ ನೀಡಿದ್ದಾರೆ.
ಹಜಾರಿಬಾಗ್ ಕ್ಷೇತ್ರದಿಂದ ಮನೀಶ್ ಜೈಸ್ವಾಲ್ ಅವರನ್ನು ಅಭ್ಯರ್ಥಿ ಎಂದು ಘೋಷಿಸಿದ ನಂತರ ನೀವು ಚುನಾವಣಾ ಪ್ರಚಾರದಲ್ಲಿ ಅಥವಾ ಸಂಘಟನೆಯ ಕೆಲಸದಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಪಕ್ಷವು ಹೊರಡಿಸಿದ ನೋಟಿಸ್‌ನಲ್ಲಿ ಹೇಳಲಾಗಿದೆ. ಈ ನೋಟಿಸ್‌ಗೆ ಎರಡು ದಿನಗಳಲ್ಲಿ ಉತ್ತರ ನೀಡುವಂತೆ ಬಿಜೆಪಿ ಜಯಂತ್‌ಗೆ ಸೂಚಿಸಿತ್ತು. ಈ ನೋಟಿಸ್‌ಗೆ ಮಾಜಿ ಕೇಂದ್ರ ಸಚಿವ ಜಯಂತ್ ಸಿನ್ಹಾ ಪ್ರತಿಕ್ರಿಯೆ ನೀಡಿದ್ದಾರೆ.
ನಾನು ಚುನಾವಣಾ ಚಟುವಟಿಕೆಗಳಲ್ಲಿ ಭಾಗವಹಿಸಲು ಪಕ್ಷ ಬಯಸಿದರೆ, ನೀವು ನನ್ನನ್ನು ಸಂಪರ್ಕಿಸಬಹುದಿತ್ತು ಎಂದು ಹೇಳಿದ್ದಾರೆ. ಮಾರ್ಚ್ 2, 2024 ರಂದು ನನ್ನ ಘೋಷಣೆಯ ನಂತರ, ಪಕ್ಷದ ಯಾವುದೇ ಹಿರಿಯ ಅಧಿಕಾರಿ ಅಥವಾ ಜಾರ್ಖಂಡ್‌ನ ಸಂಸದ ಅಥವಾ ಶಾಸಕರು ನನ್ನನ್ನು ಸಂಪರ್ಕಿಸಲಿಲ್ಲ. ಪಕ್ಷದ ಯಾವುದೇ ಕಾರ್ಯಕ್ರಮ, ರ್ಯಾಲಿ ಅಥವಾ ಸಂಘಟನೆ ಸಭೆಗೆ ತಮ್ಮನ್ನು ಆಹ್ವಾನಿಸಿಲ್ಲ ಎಂದೂ ಜಯಂತ್ ಹೇಳಿದ್ದಾರೆ. ಬಾಬುಲಾಲ್ ಮರಾಂಡಿ ಅವರು ಕಾರ್ಯಕ್ರಮಗಳಲ್ಲಿ ನನ್ನನ್ನು ಸೇರಿಸಿಕೊಳ್ಳಲು ಬಯಸಿದ್ದರೆ ಅವರು ನನ್ನನ್ನು ಆಹ್ವಾನಿಸಬಹುದಿತ್ತು ಆದರೆ ಅವರು ಹಾಗೆ ಮಾಡಲಿಲ್ಲ ಎಂದು ಹೇಳಿದರು.
ಮೇ 10ರಂದು ವೈಯಕ್ತಿಕ ಬದ್ಧತೆಗಳಿಗಾಗಿ ವಿದೇಶಕ್ಕೆ ತೆರಳಿರುವುದಾಗಿಯೂ ಸಿನ್ಹಾ ಹೇಳಿದ್ದಾರೆ. ಪಕ್ಷವು ನನ್ನನ್ನು ಯಾವುದೇ ಕಾರ್ಯಕ್ರಮಕ್ಕೆ ಆಹ್ವಾನಿಸಲಿಲ್ಲ, ನಂತರ ನನಗೆ ಅಲ್ಲಿ ಉಳಿಯುವ ಅಗತ್ಯವಿಲ್ಲ ಎಂದು ನಾನು ಭಾವಿಸಿದೆ. ಅಲ್ಲದೆ ಮತದಾನ ಮಾಡಿಲ್ಲ ಎಂಬ ಆರೋಪ ಸುಳ್ಳು, ವಿದೇಶಕ್ಕೆ ತೆರಳುವ ಮುನ್ನ ಅಂಚೆ ಮತಪತ್ರದ ಮೂಲಕ ಮತದಾನ ಮಾಡಿದ್ದೆ, ಹೀಗಾಗಿ ಮತದಾನದ ಕರ್ತವ್ಯ ನಿರ್ವಹಿಸಿಲ್ಲ ಎಂದು ಆರೋಪಿಸಿರುವುದು ತಪ್ಪು ಎಂದು ಹೇಳಿದ್ದಾರೆ.
ಇದನ್ನೂ ಓದಿ: ಡ್ರಾ ಮಾಡಿದ್ದು 5000 ಬಂದಿದ್ದು 4040; ಇಂಡಿಯಾ ATM ನಲ್ಲಿ ಹಣ ಡ್ರಾ ಮಾಡಿದ ಶಿಕ್ಷಕಿಗೆ ಶಾಕ್