Advertisement

ಜಯದೇವಶ್ರೀಗಳ 62ನೇ ಸ್ಮರಣೋತ್ಸವ

10:07 AM Jan 04, 2019 | Team Udayavani |

ದಾವಣಗೆರೆ: ಬಸವಚೇತನ ಶ್ರೀ ಜಯದೇವ ಮುರುಘರಾಜೇಂದ್ರ ಮಹಾಸ್ವಾಮಿಗಳವರ 62ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವ ದಾವಣಗೆರೆಯ ಶಿವಯೋಗಿ ಮಂದಿರದಲ್ಲಿ ಜ.18 ರಿಂದ 20ರ ವರೆಗೆ ನಡೆಯಲಿದೆ ಎಂದು ಚಿತ್ರದುರ್ಗ ಬೃಹನ್ಮಠದ ಡಾ| ಶಿವಮೂರ್ತಿ ಮುರುಘಾ ಶರಣರು ತಿಳಿಸಿದ್ದಾರೆ.

Advertisement

ಜಯದೇವಶ್ರೀಗಳ 62ನೇ ಸ್ಮರಣೋತ್ಸವ ಮತ್ತು ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸಹಜ ಶಿವಯೋಗ, ಉಚಿತ ಆರೋಗ್ಯ, ನೇತ್ರ ತಪಾಸಣಾ ಶಿಬಿರ, ವಿವಿಧ ಪ್ರಶಸ್ತಿ ಪ್ರದಾನ, ಸಾಧಕರ, ಮಹಿಳಾ, ಸರ್ವಧರ್ಮ ಸಮಾವೇಶ ನಡೆಯಲಿವೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಜ.18ರ ಮೊದಲ ದಿನ ಶುಕ್ರವಾರ 7.30ಕ್ಕೆ ಮಂಡ್ಯ ಜಿಲ್ಲೆಯ ಚೆಕ್‌ಡ್ಯಾಂ ನಿರ್ಮಾತೃ, ಬಸವಶ್ರೀ ಪ್ರಶಸ್ತಿ ಪುರಸ್ಕೃತ ಕಾಮೇಗೌಡ ಬಸವತತ್ವ ಧ್ವಜಾರೋಹಣ ನೆರವೇರಿಸುವರು. 7.45ಕ್ಕೆ ನಡೆಯುವ ಸಹಜ ಶಿವಯೋಗದಲ್ಲಿ ಖಜೂರಿಯ ಶ್ರೀ ಮುರುಘೇಂದ್ರ ಕೋರಣೇಶ್ವರ ಸ್ವಾಮೀಜಿ, ಚನ್ನಗಿರಿಯ ಶ್ರೀ ಜಯದೇವ ಸ್ವಾಮೀಜಿ, ಗುರುಕಲ್‌ವುಠದ ಶ್ರೀ ಶಾಂತವೀರ ಸ್ವಾಮೀಜಿ, ಮಾಜಿ ಶಾಸಕ ಮೋತಿ ವೀರಣ್ಣ ಇತರರು ಭಾಗವಹಿಸುವರು ಎಂದು ತಿಳಿಸಿದರು.

ಅಂದು ಸಂಜೆ 6.30ಕ್ಕೆ ನಡೆಯುವ ಸಾಧಕರ ಸಮಾವೇಶದಲ್ಲಿ ವಿಶ್ರಾಂತ ನ್ಯಾಯಮೂರ್ತಿ ಎಚ್‌. ಎನ್‌. ನಾಗಮೋಹನ್‌ದಾಸ್‌ ಅವರಿಗೆ ಜಯದೇವಶ್ರೀ, ಖ್ಯಾತ ಸಾಹಿತಿ ಡಾ| ಕುಂ. ವೀರಭದ್ರಪ್ಪ ಅವರಿಗೆ ಶೂನ್ಯಪೀಠ ಚನ್ನಬಸವ, ಧಾರವಾಡದ ಹಿರಿಯ ಸಾಹಿತಿ ಡಾ| ಸಿ.ಆರ್‌. ಯರವಿನತೆಲಿಮಠಗೆ ಶೂನ್ಯಪೀಠ ಅಲ್ಲಮ ಹಾಗೂ ತುಮಕೂರು ಜಿಲ್ಲೆಯ ಸಮಾಜ ಸೇವಕಿ ಭವ್ಯಾರಾಣಿಗೆ ಶೂನ್ಯಪೀಠ ಅಕ್ಕನಾಗಮ್ಮ ಪ್ರಶಸ್ತಿ ಪ್ರದಾನ ಮಾಡಲಾಗುವುದು. ಇಳಕಲ್‌ನ ಶ್ರೀ ಗುರುಮಹಾಂತ ಸ್ವಾಮೀಜಿ, ಗೃಹ ಸಚಿವ ಎಂ.ಬಿ. ಪಾಟೀಲ್‌, ಸಹಕಾರ ಸಚಿವ ಬಂಡೆಪ್ಪ ಕಾಶೆಂಪುರ ಇತರರು ಭಾಗವಹಿಸುವರು. 

ಲಿಂಗಾಯತ ಧರ್ಮಕ್ಕೆ ಜಯದೇವಶ್ರೀಗಳವರ ಕೊಡುಗೆ… ವಿಷಯದ ಚಿಂತನ ಮಂಥನ ನಡೆಯಲಿದೆ. ಮಿಮಿಕ್ರಿ ಗೋಪಿ, ಕಲರ್ಸ್‌ ಕನ್ನಡ ಕೋಗಿಲೆ ಪ್ರಶಸ್ತಿ ಪುರಸ್ಕೃತ ಕರಿಬಸವ, ಕನ್ನಡ ಸರಿಗಮಪ ಪ್ರಶಸ್ತಿ ವಿಜೇತ ಜ್ಞಾನೇಶ್‌… ಸಾಂಸ್ಕೃತಿಕ ಸಂಭ್ರಮ ನಡೆಸಿಕೊಡುವರು. ಎಂದು ತಿಳಿಸಿದರು.

Advertisement

ಶನಿವಾರ 7.30ಕ್ಕೆ ಸಹಜ ಶಿವಯೋಗ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಮಹಿಳಾ ಸಮಾವೇಶದಲ್ಲಿ ಮಧುರೆಯ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ, ಲಾಲನಹಳ್ಳಿ ಬಸವಕೇಂದ್ರದ ಜಯದೇವ ತಾಯಿ ಸಾನ್ನಿಧ್ಯ ವಹಿಸುವರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಮಾಜ ಕಲ್ಯಾಣ ಸಚಿವ ಪ್ರಿಯಾಂಕ ಖರ್ಗೆ, ಶಾಸಕರಾದ ಎಸ್‌.ಎ. ರವೀಂದ್ರನಾಥ್‌, ವಿ. ಸೋಮಣ್ಣ, ಮೇಯರ್‌ ಶೋಭಾ ಪಲ್ಲಾಗಟ್ಟೆ, ಡಾ| ಪ್ರಭಾ ಮಲ್ಲಿಕಾರ್ಜುನ್‌, ಡಾ| ಶಶಿಕಲಾ ಕೃಷ್ಣಮೂರ್ತಿ, ಡಾ| ಮೈತ್ರೇಯಿ ಗದಿಗೆಪ್ಪಗೌಡರ್‌ ಇತರರು ಭಾಗವಹಿಸುವರು. ಬಸವಾದಿಶರಣರ ಚಿಂತನೆಗಳು ಮತ್ತು ಮಹಿಳಾಪರ ಧೋರಣೆಗಳು… ವಿಷಯ ಚಿಂತನೆ ನಡೆಯಲಿದೆ. ದೊಡ್ಡಪ್ಪ ಮಾದರ್‌, ಅಖೀಲಾ ಪಜಿಮಣ್ಣು ಸಾಂಸ್ಕೃತಿಕ ಸಂಭ್ರಮ ನಡೆಸಿಕೊಡುವರು. ಶ್ರೀ ಜಯದೇವ ಪ್ರತಿಭಾವಂತ ವಿದ್ಯಾರ್ಥಿ-ವಿದ್ಯಾರ್ಥಿನಿ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದು ತಿಳಿಸಿದರು. 

ಭಾನುವಾರ 7.30ಕ್ಕೆ ಸಹಜ ಶಿವಯೋಗ, 10.30ಕ್ಕೆ ಉಚಿತ ಆರೋಗ್ಯ ತಪಾಸಣೆ ಹಾಗೂ ಔಷಧಿ ವಿತರಣೆ, 10.30ಕ್ಕೆ ರಾಜ್ಯ ಮಟ್ಟದ ಚದುರಂಗ ಸ್ಪರ್ಧೆ ಶ್ರೀ ಜಯದೇವ ಟ್ರೋಫಿ ಉದ್ಘಾಟನೆ ನಡೆಯಲಿದೆ. ಸಂಜೆ 6.30ಕ್ಕೆ ನಡೆಯುವ ಸರ್ವಧರ್ಮ ಸಮಾವೇಶದಲ್ಲಿ ಬಹುತ್ವದ ಭಾರತ: ಆತಂಕಗಳು ಮತ್ತು ಸವಾಲುಗಳು… ವಿಷಯ ಕುರಿತು ಚಿಂತನೆ ನಡೆಯಲಿದೆ. ಶಿವಮೊಗ್ಗದ ಧರ್ಮಾಧ್ಯಕ್ಷ ಡಾ| ಎಸ್‌.ಟಿ. ಫ್ರಾನ್ಸಿಸ್‌ ಸೆರಾವೋ, ನಂದಿಗುಡಿ ಶ್ರೀ ಜಗದ್ಗರು ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಆರ್‌. ಶ್ರೀನಿವಾಸ್‌(ವಾಸು), ಸಂಸದ ಜಿ.ಎಂ. ಸಿದ್ದೇಶ್ವರ್‌, ಶಾಸಕರಾದ ಶಾಮನೂರು ಶಿವಶಂಕರಪ್ಪ, ಪ್ರೊ. ಎನ್‌. ಲಿಂಗಣ್ಣ, ಸಾಹಿತಿ ರಂಜಾನ್‌ ದರ್ಗಾ, ನಿಕೇತ್‌ರಾಜ್‌ ಭಾಗವಹಿಸುವರು. ಹುಬ್ಬಳ್ಳಿಯ ಡಾ| ರಾಮಚಂದ್ರ ಕಾರಟಗಿ ಅವರಿಗೆ ಗೌರವಾರ್ಪಣೆ ಮಾಡಲಾಗುವುದು. ಚನ್ನಪ್ಪ ಹುದ್ದಾರ್‌, ವಿಶ್ವಪ್ರಸಾದ್‌ ಮಲ್ಲಿಕಾರ್ಜುನ ಗಾಣಿಗ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಡುವರು ಎಂದು ತಿಳಿಸಿದರು.

ವಿರಕ್ತ ಮಠದ ಶ್ರೀ ಬಸವಪ್ರಭು ಸ್ವಾಮೀಜಿ, ಅಥಣಿಯ ಶ್ರೀ ಶಿವಬಸವ ಸ್ವಾಮೀಜಿ, ಬ್ಯಾಡಗಿಯ ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ತಿಳುವಳ್ಳಿಯ ಶ್ರೀ ನಿರಂಜನ ಸ್ವಾಮೀಜಿ, ಡಿ. ಬಸವರಾಜ್‌, ಎಂ. ಜಯಕುಮಾರ್‌, ಎಂ.ಕೆ. ಬಕ್ಕಪ್ಪ, ಎಸ್‌. ಓಂಕಾರಪ್ಪ ಇತರರು ಸುದ್ದಿಗೋಷ್ಠಿಯಲ್ಲಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next