■ ಉದಯವಾಣಿ ಸಮಾಚಾರ
ನರಗುಂದ: ಸಮಾಜದಲ್ಲಿ ದೇವಸ್ಥಾನಗಳು ಜ್ಞಾನ, ವೈರಾಗ್ಯ ಭಕ್ತಿಯ ಸಂಗಮವಾಗಿವೆ. ಜಾತ್ರೆ, ಧಾರ್ಮಿಕ ಉತ್ಸವಗಳ ಜೊತೆಗೆ ಸಾಮೂಹಿಕ ವಿವಾಹಗಳನ್ನು ಏರ್ಪಡಿಸುವ ಮೂಲಕ ಹಾಲುಮತ ಸಮಾಜದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಭಕ್ತರು ಸಮಾಜಕ್ಕೆ ಆದರ್ಶವಾಗಿ ಮತ್ತೂಬ್ಬರಿಗೆ ಪ್ರೇರಣೆಯಾಗಿದ್ದಾರೆ ಎಂದು ಶಿರೋಳ ತೋಂಟದಾರ್ಯ ಮಠದ ಶ್ರೀ ಶಾಂತಲಿಂಗ ಸ್ವಾಮೀಜಿ ಹೇಳಿದರು.
ತಾಲೂಕಿನ ಶಿರೋಳದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದ ಜಾತ್ರೋತ್ಸವ ಅಂಗವಾಗಿ ಪಲ್ಲಕ್ಕಿ ಉತ್ಸವ ಮತ್ತು ಸಾಮೂಹಿಕ ವಿವಾಹಗಳ ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿ ಶ್ರೀಗಳು ಮಾತನಾಡಿದರು.
ಜಾಲಿಕಟ್ಟಿ ಪೂರ್ಣಾನಂದ ಮಠದ ಶ್ರೀ ಕೃಷ್ಣಾನಂದ ಸ್ವಾಮೀಜಿ ಮಾತನಾಡಿ, ಸಮಾಜದಲ್ಲಿ ಶ್ರೀಮಂತ, ಬಡವ ಎನ್ನದೆ ಜಾತ್ಯಾತೀತವಾಗಿ ಸಾಮೂಹಿಕ ವಿವಾಹಗಳ ಮೂಲಕ ಜನರು ಒಂದೆಡೆ ಸೇರುವ ಮೂಲಕ ಸಾಮರಸ್ಯದಿಂದ ಮದುವೆಗಳನ್ನು ಮಾಡುತ್ತಿರುವುದು ಬಡವರಿಗೆ ವರದಾನವಾಗಿದೆ ಎಂದರು.
ಶಿರೋಳ ಶಿವಯೋಗಾಶ್ರಮದ ಅಕ್ಕಮಹಾದೇವಿ ಶರಣಮ್ಮನವರು ಮಾತನಾಡಿದರು. ಶಿರೋಳ ಯಚ್ಚರಸ್ವಾಮಿ ಗವಿಮಠದ ಶ್ರೀ ಅಭಿನವ ಯಚ್ಚರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.
ಗ್ರಾಮದ ಅಪ್ಪಯ್ಯ ಹಿರೇಮಠ, ವೀರಯ್ಯ ಹಿರೇಮಠ, ರುದ್ರಯ್ಯ ಹಿರೇಮಠ ಇವರ ಪೌರೋಹಿತ್ಯದಲ್ಲಿ 15 ಜೋಡಿ ಸಾಮೂಹಿಕ ವಿವಾಹ ಜರುಗಿದವು. ಈ ಸಂದರ್ಭ ಮುರನಾಳದ ಗುರುನಾಥ ಸ್ವಾಮೀಜಿ, ಡಿ.ವೈ. ಕಾಡಪ್ಪನವರ, ಪ್ರಕಾಶಗೌಡ ತಿರಕನಗೌಡ್ರ, ಬಸಯ್ಯ ಮಠದ, ರವೀಂದ್ರ ಹಿರೇಮಠ, ಲಾಲಸಾಬ್ ಅರಗಂಜಿ, ಸಂಬಾಜಿ ಕಲಾಲ, ದೇವಿಂದ್ರಪ್ಪ ಶಾಂತಗೇರಿ, ಬಾಪುಗೌಡ್ರ ತಿಮ್ಮನಗೌಡ್ರ, ಪ್ರಭಾಕರ ಉಳ್ಳಾಗಡಿr, ಶರಣಪ್ಪ ಕಾಡಪ್ಪನವರ, ಜಾತ್ರೋತ್ಸವ ಸಮಿತಿ ಗೌರವಾಧ್ಯಕ್ಷ ದ್ಯಾಮಣ್ಣ ತೆಗ್ಗಿ, ಅಧ್ಯಕ್ಷ ಶಂಕರಪ್ಪ ಕಾಡಪ್ಪನವರ, ಉಪಾಧ್ಯಕ್ಷ ಮುತ್ತಪ್ಪ ಕುರಿಯವರ, ಕಾರ್ಯದರ್ಶಿ ಬಸವರಾಜ ಕಂಬಳಿ ಹಾಗೂ ಬೀರಲಿಂಗೇಶ್ವರ ದೇವಸ್ಥಾನದ ಟ್ರಸ್ಟ್ ಕಮಿಟಿ ವ್ಯವಸ್ಥಾಪಕರು, ಶಿರೋಳ ಗ್ರಾಮಸ್ಥರು ಇದ್ದರು.