Advertisement

ಜಾಂವೊಯ್‌ ನಂ.1 ಕೊಂಕಣಿ ಚಲನ ಚಿತ್ರದ ಮುಹೂರ್ತ

06:10 AM Jul 20, 2017 | Team Udayavani |

ಮಂಗಳೂರು: “ಸಾಂಗಾತಿ ಕ್ರಿಯೇಶನ್ಸ್‌’ ಆರ್ಪಿಸುವ ಹೆರಿ ಫೆರ್ನಾಂಡಿಸ್‌ (ಬಾಕೂìರ್‌) ನಿರ್ದೇಶನದ “”ಜಾಂವೊಯ್‌ ನಂ. 1” ಕೊಂಕಣಿ ಚಲನ ಚಿತ್ರದ ಮುಹೂರ್ತ ಸಮಾರಂಭ ಬುಧವಾರ ನಗರದ ಕೊಡಿಯಾಲ್‌ಬೈಲ್‌ನ ದೀಪ ಕಂಫರ್ಟ್ಸ್ ಹೊಟೇಲ್‌ ಸಭಾಂಗಣದಲ್ಲಿ ನೆರವೇರಿತು.

Advertisement

ಮುಂಬಯಿಯ ಉದ್ಯಮಿಗಳಾದ ವಾಲ್ಟರ್‌ ಡಿ’ಸೋಜಾ, ಲಿಯೋ ಫೆರ್ನಾಂಡಿಸ್‌ ಮತ್ತು ಸಿರಿಲ್‌ ಕ್ಯಾಸ್ತಲಿನೊ ಅವರು ಜತೆಗೂಡಿ “ಸಾಂಗಾತಿ ಕ್ರಿಯೇಶನ್ಸ್‌’ ರಚಿಸಿಕೊಂಡಿದ್ದು, ಇದರ ಬ್ಯಾನರನ್ನು ಮಾಂಡ್‌ ಸೊಭಾಣ್‌ ಸಂಸ್ಥೆಯ ಗುರ್ಕಾರ್‌ ಎರಿಕ್‌ ಒಝೇರಿಯೊ ಮತ್ತು ಉದ್ಯಮಿ ವಿ.ಪಿ. ಲೋಬೋ ಅವರು ಹಾಗೂ ಲಾಂಛನವನ್ನು ವಾಲ್ಟರ್‌ ನಂದಳಿಕೆ ಅವರು ಅನಾವರಣ ಮಾಡಿದರು. ಚಿತ್ರದ ಲಾಂಛನವನ್ನು ಮಿಲಾಗ್ರಿಸ್‌ ಚರ್ಚ್‌ನ ಧರ್ಮಗುರು ವಂ| ವಲೇರಿಯನ್‌ ಡಿ’ಸೋಜಾ ಅವರು ಬಿಡುಗಡೆ ಮಾಡಿದರು. ಬೋಂದೆಲ್‌ ಸಂತ ಲಾರೆನ್ಸ್‌ ಚರ್ಚ್‌ನ ಧರ್ಮಗುರು ವಂ| ಆ್ಯಂಡ್ರು ಡಿ’ಸೋಜಾ ಅವರು ಆಶೀರ್ವಚನ ಮತ್ತು ಪ್ರಾರ್ಥನೆಯನ್ನು ನೆರವೇರಿಸಿದರು. ಮುಂಬಯಿಯ ಖ್ಯಾತ ಚಲನಚಿತ್ರ ನಿರ್ಮಾಪಕ ಲಾರೆನ್ಸ್‌ ಡಿ’ಸೋಜಾ ಅವರು “”ಜಾಂವೊಯ್‌ ನಂ. 1” ಚಿತ್ರದ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಿದರು.

ಹೆರಿ ಫೆರ್ನಾಂಡಿಸ್‌ ಅವರ ನೂತನ ಚಿತ್ರ “”ಜಾಂವೊಯ್‌ ನಂ.1”ಕ್ಕೆ ಶುಭ ಕೋರಿ ಗೋವಾದ ಚಲನಚಿತ್ರ ಕಲಾವಿದ ಪ್ರಿನ್ಸ್‌ ಜೇಕಮ್‌ ಅವರು ಕಳುಹಿಸಿದ ಸಂದೇಶವನ್ನು ವಾಚಿಸಲಾÀತು.

ಹೊಸ ಕಲಾವಿದರಿಗೆ ಅವಕಾಶ
ಹೊಸ ನಟ ನಟಿಯರನ್ನು ಸೇರಿಸಿಕೊಂಡು ಚಿತ್ರ ನಿರ್ಮಾಣ ಮಾಡುವ ಮೂಲಕ ಹೊಸ ಕಲಾವಿದರನ್ನು ಬೆಳಕಿಗೆ ತರಬೇಕು ಎಂದು ವಿ.ಪಿ. ಲೋಬೋ ಸಲಹೆ ಮಾಡಿದರು.

“ನಶಿಭಾಂಚೊ ಖೆಳ್‌’ ಮತ್ತು “ಸೋಫಿಯಾ’ ಕೊಂಕಣಿ ಚಿತ್ರಗಳನ್ನು ನಿರ್ಮಾಣ ಮಾಡಿರುವ ಹೆರಿ ಫೆರ್ನಾಂಡಿಸ್‌ ಇದೀಗ ಇನ್ನೊಂದು ಚಿತ್ರವನ್ನು ಜನರಿಗೆ ಒದಗಿಸಲು ಮುಂದಾಗಿದ್ದಾರೆ. ತಮ್ಮ ಪ್ರತಿಭೆಯನ್ನು ಸದುಪಯೋಗಪಡಿಸಿ
ಕೊಳ್ಳುವ ಮೂಲಕ ಸಮಾಜಕ್ಕೆ ಕೊಡುಗೆಯನ್ನು ನೀಡುತ್ತಿದ್ದಾರೆ ಎಂದು ವಂ| ವಲೇರಿಯನ್‌ ಡಿ’ಸೋಜಾ ಅವರು ಹೇಳಿದರು.

Advertisement

ಡಿಸೆಂಬರ್‌ ವೇಳೆಗೆ ಇನ್ನೆರಡು ಕೊಂಕಣಿ ಚಿತ್ರ
ಇದೇ 2017 ಡಿಸೆಂಬರ್‌ ವೇಳೆಗೆ ಇನ್ನೆರಡು ಕೊಂಕಣಿ ಚಲನಚಿತ್ರಗಳನ್ನು ನಿರ್ಮಾಣ ಮಾಡುವ ಉದ್ದೇಶ ಹೊಂದಲಾಗಿದೆ ಎಂದು ಲಾರೆನ್ಸ್‌ ಡಿ’ಸೋಜಾ ಹೇಳಿದರು. ತಾನು ಕಳೆದ 44 ವರ್ಷಗಳಿಂದ ಮುಂಬಯಿಯಲ್ಲಿ ಚಿತ್ರೋದ್ಯಮ ದಲ್ಲಿದ್ದು, 25 ಚಿತ್ರಗಳಿಗೆ ಛಾಯಾಚಿತ್ರಗ್ರಹಣ, 23 ಚಿತ್ರಗಳಿಗೆ ನಿರ್ದೇಶನ ಮತ್ತು ಛಾಯಾಚಿತ್ರಗ್ರಹಣ, 1 ಚಿತ್ರ ನಿರ್ಮಾಣ ಮತ್ತು ಸಂಯೋಜನೆ ಮಾಡಿದ್ದೇನೆ ಎಂದವರು ವಿವರಿಸಿದರು.

ಹಾಸ್ಯಮಯ ಚಿತ್ರ
“”ಜಾಂವೊಯ್‌ ನಂ.1” ಅತ್ತೆ ಸೊಸೆಯ ಜಗಳಕ್ಕೆ ಸಂಬಂಧಿಸಿದ ಹಾಸ್ಯಮಯ ಚಿತ್ರ ಆಗಿರುತ್ತದೆ. ನಟರಾದ ಎಲ್ಟನ್‌, ರಂಜಿತಾ ಲೂವಿಸ್‌ ಇದ್ದು, ಉಳಿದಂತೆ ನಟ ನಟಿಯರು ಅಂತಿಮಗೊಂಡಿಲ್ಲ ಎಂದು ವಿವರಿಸಿದರು.

ಎರಿಕ್‌ ಒಝೇರಿಯೋ, ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ರೋಯ್‌ ಕ್ಯಾಸ್ತೆಲಿನೊ, ವಾಲ್ಟರ್‌ ನಂದಳಿಕೆ, ನಿರ್ದೇಶಕ ಹೆರಿ ಫೆರ್ನಾಂಡಿಸ್‌ ಮೊದಲಾದವರು ಮಾತನಾಡಿದರು.

ವೇದಿಕೆಯಲ್ಲಿ ಸಿ| ಸೆವರಿನ್‌, ನಟ ಎಲ್ಟನ್‌, ಲುವಿ ಜೆ. ಪಿಂಟೊ, ಸ್ಟಾ Âನಿ ಅಲ್ವಾರಿಸ್‌, “ಸಾಂಗಾತಿ ಕ್ರಿಯೇಶನ್ಸ್‌’ ನ ವಾಲ್ಟರ್‌ ಡಿ’ಸೋಜಾ, ಲಿಯೋ ಫೆರ್ನಾಂಡಿಸ್‌ ಮತ್ತು ಸಿರಿಲ್‌ ಕ್ಯಾಸ್ತಲಿನೊ ಮತ್ತು ಇತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next