Advertisement
ಅರೆ ಬರೆ ಕಾಮಗಾರಿಯ ಪರಿಣಾಮ ಈ ರಸ್ತೆಯಲ್ಲಿ ವಾಹನ ಸವಾರರಿಗೆ ನಿತ್ಯ ಟ್ರಾಫಿಕ್ ಜಾಮ್ ಬಿಸಿ ತಪ್ಪುತ್ತಿಲ್ಲ. ಈಗಾಗಲೇ ಪೂರ್ಣಗೊಳ್ಳಬೇಕಿದ್ದ ಈ ರಸ್ತೆ ಕಾಮಗಾರಿ ಆರಂಭದಿಂದಲೇ ಆಮೆಗತಿಯಲ್ಲಿ ನಡೆದಿತ್ತು. ನಾಗುರಿ ಬಳಿ ಪೈಪ್‌ಲೈನ್ ಅಳವಡಿಕೆ ಬಾಕಿ ಇರುವ ಕಾರಣ ಈ ಕಾಮಗಾರಿ ಪೂರ್ಣಗೊಳ್ಳಲು ಇನ್ನೂ ಕೆಲವು ತಿಂಗಳುಗಳು ಬೇಕು.
ನಗರದಲ್ಲಿ ಸುಮಾರು 50 ವರ್ಷ ಹಳೆಯ ನೀರಿನ ಪೈಪ್‌ಲೈನ್ ಇದ್ದು, ಇದರಿಂದ ಹಲವು ಕಡೆಗಳಲ್ಲಿ ಸೋರಿಕೆಯಾಗುತ್ತಿದೆ. ತುಂಬೆಯಿಂದ ಬೆಂದೂರು ಹಾಗೂ ಪಣಂಬೂರಿಗೆ ತೆರಳುವ ಮುಖ್ಯ ಕೊಳವೆಯು ನಾಗುರಿ ಸಮೀಪದಲ್ಲಿ ಶಿಥಿಲಾವಸ್ಥೆಯಲ್ಲಿದೆ. ಇದರಿಂದ ನೀರು ಪೋಲಾಗುತ್ತಿದೆ. ಒಂದೊಮ್ಮೆ ಕಾಂಕ್ರೀಟ್ ಕಾಮಗಾರಿ ನಡೆದಲ್ಲಿ ಮತ್ತೆ ಕಾಂಕ್ರೀಟ್ ಅಗೆಯುವ ಪ್ರಸಂಗ ಎದುರಾಗುವ ಸಾಧ್ಯತೆ ಇದೆ. ಈ ಹಿನ್ನೆಲೆ ಪೈಪ್‌ಲೈನ್ ದುರಸ್ತಿಗೆ ಮುಂದಾಗಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Related Articles
Advertisement
ಪೈಪ್ ಅಳವಡಿಕೆ ಆರಂಭನಾಗುರಿ ಭಾಗದಲ್ಲಿ ಪೈಪ್‌ಲೈನ್ ಅಳವಡಿಕೆ ಬಾಕಿ ಉಳಿದಿರುವ ಕಾರಣದಿಂದಾಗಿ ರಸ್ತೆ ಕಾಮಗಾರಿ ಅಪೂರ್ಣವಾಗಿದೆ. ಇದೀಗ ಪಾಲಿಕೆ ಪೈಪ್ ಅಳವಡಿಕೆಗೆ ಮುಂದಾಗಿದ್ದು, ಗುತ್ತಿಗೆ ನೀಡಲಾಗಿದೆ. ಕೆಲವು ದಿನಗಳಲ್ಲಿ ಕಾಮಗಾರಿ ಆರಂಭಗೊಳ್ಳಲಿದ್ದು, ಈಗಾಗಲೇ ಕೊಳವೆಗಳನ್ನು ತರಿಸಿಕೊಳ್ಳಲಾಗಿದೆ. ಪಂಪ್‌ವೆಲ್ ಸಮೀಪದಲ್ಲೂ ಹೊಂಡ ಗುಂಡಿ
ಪಡೀಲ್ ಪಂಪ್‌ವೆಲ್ ರಸ್ತೆಯ ಪಂಪವೆಲ್ ಫ್ಲೈ ಓವರ್ ಸಮೀಪದಲ್ಲಿ ರಸ್ತೆಯಲ್ಲಿ ಹೊಂಡಗುಂಡಿಗಳಿದ್ದು ಅಪಘಾತಕ್ಕೆ ಕಾರಣವಾಗುತ್ತಿದೆ. ಆ ಪ್ರದೇಶದಲ್ಲಿ ಕಳೆದ ಹಲವು ಸಮಯದಿಂದ ಹೊಂಡಗಳು ನಿರ್ಮಾಣವಾಗಿದ್ದರೂ ಪಾಲಿಕೆಯಾಗಲಿ, ಸ್ಮಾರ್ಟ್ ಸಿಟಿ ಅಧಿಕಾರಿಗಳಾಗಿ ದುರಸ್ತಿಗೊಳಿಸುವ ಗೋಜಿಗೆ ಹೋಗದಿರುವ ಕಾರಣ ಸವಾರರಿಗೆ ಸಮಸ್ಯೆಯಾಗಿದೆ. ಮುಂದಿನ ಕೆಲವು ತಿಂಗಳು ಸಮಸ್ಯೆ
ಪಾಲಿಕೆಯ ಮೂಲಕ ಪೈಪ್ ಲೈನ್ ಅಳವಡಿಕೆಗೆ ಸುಮಾರು ಒಂದು ತಿಂಗಳ ಕಾಲಾವಕಾಶ ಬೇಕಿದೆ. ಬಳಿಕ ಪೈಪ್ ಅಳವಡಿಸಿದ ಜಾಗವನ್ನು ಹಿಂದಿನ ಹಂತಕ್ಕೆ ತರಲು ಕೆಲವು ದಿನಗಳು ಬೇಕಾಗುತ್ತಿದೆ. ಅನಂತರ ಕಾಂಕ್ರೀಟ್ ಕಾಮಗಾರಿ ನಡೆಸಿ ಕ್ಯೂರಿಂಗ್‌ಗೆ ಮತ್ತಷ್ಟು ದಿನಗಳು ಅಗತ್ಯವಿರುವ ಕಾರಣದಿಂದ ಪ್ರಯಾಣಿಕರು ಸಮಸ್ಯೆ ಅನುಭವಿಸಲೇ ಬೇಕು. ಹಳೆ ಕೊಳವೆಯನ್ನು ತೆರವುಗೊಳಿಸಿ ಹೊಸ ಕೊಳವೆ ಅಳವಡಿಸುವ ಸಂದರ್ಭ ನಗರಕ್ಕೆ ಕೆಲವು ದಿನಗಳ ಕಾಲ ನೀರು ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ ಎನ್ನಲಾಗಿದೆ. ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಸುಮಾರು 44 ಕೋ. ರೂ. ವೆಚ್ಚದಲ್ಲಿ ರಸ್ತೆ ನಿರ್ಮಾಣ ಕಾರ್ಯ ನಡೆಯುತ್ತಿದ್ದು, 40 ಕೋ. ರೂ.ನ ಕಾಮಗಾರಿ ಪೂರ್ಣಗೊಂಡಿದೆ. ಬಹುತೇಕ ಕಾಂಕ್ರೀಟ್ ಅಳವಡಿಸಲಾಗಿದೆ. ಕೆಲವು ಕಡೆಗಳಲ್ಲಿ ಡಿವೈಡರ್, ಚರಂಡಿ, ತಡೆಗೋಡೆ ನಿರ್ಮಿಸಲಾಗಿದೆ. ಫುಟ್‌ಪಾತ್ ಹಾಗೂ ಇತರ ಅನೇಕ ಕಾಮಗಾರಿಗಳು ಬಾಕಿ ಉಳಿದಿದ್ದು, ಶೀಘ್ರ ಪೂರ್ಣಗೊಳ್ಳುವ ವಿಶ್ವಾಸವನ್ನು ಸ್ಥಳೀಯ ರಿಕ್ಷಾ ಚಾಲಕರು ವ್ಯಕ್ತಪಡಿಸಿದ್ದಾರೆ. –ಸಂತೋಷ್ ಮೊಂತೇರೊ