Advertisement
ಜಾವಳಿ ಹೇಮಾವತಿ ನದಿಯ ಉಗಮಸ್ಥಾನ. ಹೆಮ್ಮೆಯ ಮಡಿಲಲ್ಲಿ ಈ ಗ್ರಾಮ ಶೋಭಿಸುತ್ತಿದೆ. ಸರ್ಕಾರದ ಅನುದಾನಗಳನ್ನು ಹಸಿರು ತಾಣದಲ್ಲಿ ಸಮರ್ಪಕವಾಗಿ ಬಳಸಿ ಸೌಲಭ್ಯದಿಂದ ಜನ ವಂಚಿತರಾಗಬಾರದೆಂಬ ಉತ್ತಮ ಉದ್ದೇಶದಿಂದ ಜಾವಳಿ ಗ್ರಾಮ ಸಂಪತ್ಬರಿತವಾಗಿ ಬೆಳೆಯಲು ಸಹಕಾರಿಯಾಗಿದೆ.
Related Articles
Advertisement
ಮಲೆನಾಡಿನಲ್ಲಿ ಗ್ರಾಮ ಪಂಚಾಯತ್ ಗಳು ಸೌಲಭ್ಯ ಒದಗಿಸುವ ನಿಟ್ಟಿನಲ್ಲಿ ಹಿಂದೆ ಬಿದ್ದಿಲ್ಲ. ಆದರೂ ಸೇವೆ ನೀಡಿದ ಶೇಕಡಾವಾರು ಲೆಕ್ಕಾಚಾರದ ವಿಷಯದಲ್ಲಿ ಗಣನೀಯ ಅಂಕ ಪಡೆದು ಈ ಬಾರಿ ಮೂಡಿಗೆರೆ ತಾಲೂಕಿನ ಜಾವಳಿ ಗ್ರಾ.ಪಂ. ಗಾಂಧಿ ಗ್ರಾಮದ ಪುರಸ್ಕಾರದ ಪುಕ್ಕ ತನ್ನ ಮಡಿಲಿಗೆ ಸೆಳೆದಿದೆ.
ಪುರಸ್ಕಾರದ ಸಾಧನೆಗೆ ಕಚೇರಿ ಸಿಬ್ಬಂದಿ ಹಾಗೂ ಅಧಿಕಾರಿ ವರ್ಗ, ಗ್ರಾಮ ಪಂಚಾಯಿತಿ ಸದಸ್ಯರ ಶ್ರಮ, ಗ್ರಾಮಸ್ಥರ ಸರ್ವ ಸಹಕಾರದಿಂದ ಇವೆಲ್ಲ ಸಾಧ್ಯವಾಗಿದೆ.
ಒಂದು ಕೈಯಿಂದ ಚಪ್ಪಾಳೆ ತಟ್ಟಲು ಸಾಧ್ಯವಿಲ್ಲ ಹೇಗೋ ಹಾಗೆ ಎಲ್ಲಾ ಕಾರ್ಯಗಳು ಒಬ್ಬರಿಂದ ನಿರ್ವಹಿಸಲು ಸಾಧ್ಯವಿಲ್ಲ. ಸಂಘಟಿತರಾಗಿ ಮಾಡಿದ ಕಾರ್ಯ ಈ ಭಾರಿ ಫಲಭರಿತವಾಗಿದೆ. ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. – ಎಂ.ಪಿ. ಪ್ರದೀಪ್, ಗ್ರಾ.ಪಂ.ಅಧ್ಯಕ್ಷ
ನಮ್ಮ ಗ್ರಾಮ ಪಂಚಾಯಿತಿಗೆ ಪುರಸ್ಕಾರ ಬಂತೆಂದರೆ ಎಲ್ಲರ ಸಹಕಾರದ ಫಲ. ಪ್ರಶಸ್ತಿ ಬಂದರೆ ಜವಾಬ್ದಾರಿ ಮತ್ತಷ್ಟು ಹೆಚ್ಚುತ್ತಿದೆ ಎಂದರ್ಥ. ಇನ್ನಷ್ಟು ಕಾರ್ಯ ಸಾಧನೆ ಮಾಡಲು ಹುಮ್ಮಸ್ಸು ಇಮ್ಮಡಿಯಾಗುತ್ತದೆ.ಪರೋಕ್ಷ ಹಾಗೂ ಪ್ರತ್ಯಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು. –ಬಿ.ಆರ್.ಯತೀಶ್ ಕುಮಾರ್, ಗ್ರಾ.ಪಂ. ಪಿಡಿಒ.