Advertisement

ಕೊನೆಯ ಪಂದ್ಯಕ್ಕೆ ಬುಮ್ರಾ ಇಲ್ಲ : ವೈಯಕ್ತಿಕ ಕಾರಣ, ತಂಡದಿಂದ ಬಿಡುಗಡೆ

03:15 AM Feb 28, 2021 | Team Udayavani |

ಅಹ್ಮದಾಬಾದ್: ಟೀಮ್‌ ಇಂಡಿಯಾದ ಯಾರ್ಕರ್‌ ಸ್ಪೆಷಲಿಸ್ಟ್‌ ಜಸ್‌ ಪ್ರೀತ್‌ ಬುಮ್ರಾ ವೈಯಕ್ತಿಕ ಕಾರಣಗಳಿಂದ ಇಂಗ್ಲೆಂಡ್‌ ಎದುರಿನ ಅಂತಿಮ ಟೆಸ್ಟ್‌ ಪಂದ್ಯದಿಂದ ಹೊರಗುಳಿ ಯಲು ನಿರ್ಧರಿಸಿದ್ದಾರೆ. ಅವರನ್ನು ಬಿಸಿಸಿಐ ತಂಡದಿಂದ ಬಿಡುಗಡೆಗೊಳಿಸಿದೆ.

Advertisement

“ಜಸ್‌ಪ್ರೀತ್‌ ಬುಮ್ರಾ ಅವರ ಕೋರಿಕೆ ಮೇರೆಗೆ ಇಂಗ್ಲೆಂಡ್‌ ವಿರು ದ್ಧದ 4ನೇ ಟೆಸ್ಟ್‌ ಪಂದ್ಯದಿಂದ ಬಿಡು ಗಡೆಗೊಳಿಸಲಾಗಿದೆ. ಅವರು ವೈಯ ಕ್ತಿಕ ಕಾರಣಗಳಿಂದ ಈ ನಿರ್ಧಾರಕ್ಕೆ ಬಂದಿದ್ದಾರೆ’ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್‌ ಶಾ ತಿಳಿಸಿದರು.

ಬುಮ್ರಾ ಅವರನ್ನು ಈಗಾಗಲೇ ಇಂಗ್ಲೆಂಡ್‌ ಎದುರಿನ ಸೀಮಿತ ಓವರ್‌ಗಳ ಸರಣಿಗಾಗಿ ಆರಿಸದೆ ವಿಶ್ರಾಂತಿ ನೀಡಲಾಗಿದೆ. ಇದೀಗ ಅಂತಿಮ ಟೆಸ್ಟ್‌ ಪಂದ್ಯದಿಂದಲೂ ಹೊರ ಗುಳಿಯಲಿದ್ದಾರೆ. ಆಗಸ್ಟ್‌ನಿಂದ ಜೈವಿಕ ಸುರಕ್ಷಾ ವಲಯದಲ್ಲೇ ಇದ್ದ ಬುಮ್ರಾ ಅವರು ಇದರಿಂದ ಬಿಡುಗಡೆ ಹೊಂದಲು ನಿರ್ಧರಿಸಿರಬಹುದು ಎಂದು ಊಹಿಸಲಾಗಿದೆ.

ಇಂಗ್ಲೆಂಡ್‌ ಎದುರಿನ ಮೊದಲ ಟೆಸ್ಟ್‌ ಪಂದ್ಯದಲ್ಲಿ ಆಡಿದ್ದ ಬುಮ್ರಾ 4 ವಿಕೆಟ್‌ ಉರುಳಿಸಿದ್ದರು. ದ್ವಿತೀಯ ಟೆಸ್ಟ್‌ ಪಂದ್ಯದಲ್ಲಿ ಇವರಿಗೆ ವಿಶ್ರಾಂತಿ ನೀಡಲಾಯಿತು. ಅಹ್ಮದಾಬಾದ್‌ನಲ್ಲಿ ನಡೆದ 3ನೇ ಟೆಸ್ಟ್‌ನಲ್ಲಿ ಕಣಕ್ಕಿಳಿದರೂ ಯಾವುದೇ ವಿಕೆಟ್‌ ಪಡೆದಿರಲಿಲ್ಲ. ಇಲ್ಲಿ ಭಾರತದ ಸಿನ್ನರ್ 19 ವಿಕೆಟ್‌ ಉರುಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next