ಸೂರತ್: ಮುಂಬರುವ ಮಹತ್ವದ ಸರಣಿಗಾಗಿ ಪೂರ್ಣವಾಗಿ ಚೇತರಿಸಿಕೊಳ್ಳುವ ಉದ್ದೇಶದಿಂದ ಜಸ್‌ಪ್ರೀತ್ ಬುಮ್ರಾ ರಣಜಿ ಪಂದ್ಯಗಳಲ್ಲಿ ಆಡಲು ಭಾರತೀಯ ತಂಡ ವ್ಯವಸ್ಥಾಪಕರು ಬಯಸಿದ್ದರು. ಅದರಂತೆ ರಾಷ್ಟ್ರೀಯ ಆಯ್ಕೆಗಾರರು ದಿನದಲ್ಲಿ ಬುಮ್ರಾ ಅವರು 4ರಿಂದ 8 ಓವರ್ ಬೌಲಿಂಗ್ ನಡೆಸಲಿ ಎಂದು ಗುಜರಾತ್ ತಂಡ ವ್ಯವಸ್ಥಾಪಕರಿಗೆ ಸಲಹೆ ಮಾಡಿದ್ದರು. ಆದರೆ ಇದನ್ನು ಗುಜರಾತ್ ತಂಡ ಒಪ್ಪದೇ ಇದ್ದಾಗ ಮಧ್ಯ ಪ್ರವೇಶಿಸಿದ ಭಾರತೀಯ ಕ್ರಿಕೆಟ್ ಮಂಡಳಿ ಅಧ್ಯಕ್ಷ ಸೌರವ್ ಗಂಗೂಲಿ ಅವರು ಬುಮ್ರಾ ಅವರ ವಿಶ್ರಾಂತಿ ಅವಧಿ ಮುಂದುವರಿಸಲು ಅವಕಾಶ ನೀಡಿದರು.
ಅವಸರವಿಲ್ಲ
ನ್ಯೂಜಿಲ್ಯಾಂಡ್ ವಿರುದ್ಧದ ಟೆಸ್ಟ್ ಸರಣಿ ಆರಂಭವಾಗಲು ಬಹಳಷ್ಟು ಸಮಯವಿದೆ. ಫೆ. 21ಕ್ಕೆ ಮೊದಲ ಟೆಸ್ಟ್ ಆರಂಭವಾಗುತ್ತಿದೆ. ಅಷ್ಟರವರೆಗೆ ಬುಮ್ರಾ ಕೆಂಪು ಚೆಂಡಿನಲ್ಲಿ ಕ್ರಿಕೆಟ್ ಆಡುವುದಿಲ್ಲ. ಹಾಗಾಗಿ ಯಾವುದೇ ರೀತಿಯ ಅವಸರವಿಲ್ಲ. ಸದ್ಯ ಅವರು ಟಿ20 ಪಂದ್ಯದಲ್ಲಿ ನಾಲ್ಕು ಓವರ್ ಬೌಲಿಂಗ್ ಮಾಡಲು ಆರಂಭಿಸಲಿ ಮತ್ತು ನ್ಯೂಜಿಲ್ಯಾಂಡಿಗೆ ತೆರಳುವ ಸ್ವಲ್ಪ ಮೊದಲು ರಣಜಿ ಪಂದ್ಯದಲ್ಲಿ ಆಡಿದರೆ ಸಾಕು ಎಂದು ಗಂಗೂಲಿ ಹೇಳಿದ್ದಾರೆ.