ಆರ್‌ಸಿಬಿ ನಾಯಕ ವಿರಾಟ್ ಕೊಹ್ಲಿ, 360 ಡಿಗ್ರಿ ಬ್ಯಾಟ್ಸ್‌ಮನ್ ಎಬಿ ಡಿ ವಿಲಿಯರ್, ಯಶಸ್ವಿ ನಾಯಕರಲ್ಲಿ ಒಬ್ಬರಾದ ಮಹೇಂದ್ರ ಸಿಂಗ್ ಧೋನಿ ಮಧ್ಯಮ ಕ್ರಮಾಂಕದ ಪ್ರಮುಖರು. ಆಲ್‌ರೌಂಡರ್‌ಗಳ ಸ್ಥಾನ ಕೈರನ್ ಪೊಲಾರ್ಡ್ ಹಾಗೂ ರವೀಂದ್ರ ಜಡೇಜ ಪಾಲಾಗಿದೆ.
Advertisement
ಪ್ರಧಾನ ವೇಗಿಗಳಾಗಿ ಕಾಣಿಸಿ ಕೊಂಡವರು ಲಸಿತ ಮಾಲಿಂಗ, ಜಸ್‌ಪ್ರೀತ್ ಬುಮ್ರಾ ಮತ್ತು ಭುವನೇಶ್ವರ್ ಕುಮಾರ್. ಸ್ಪಿನ್ ಜಾಗದಲ್ಲಿರುವವರು ಹರ್ಭಜನ್ ಸಿಂಗ್. ತಂಡದಲ್ಲಿರುವವರೆಲ್ಲರೂ ಅಂತಾರಾಷ್ಟ್ರೀಯ ಖ್ಯಾತಿಯ ಆಟಗಾರರೆಂಬುದು ವಿಶೇಷ.
ಜಾಸ್ ಬಟ್ಲರ್, ರೋಹಿತ್ ಶರ್ಮ, ವಿರಾಟ್ ಕೊಹ್ಲಿ, ಎಬಿ ಡಿ ವಿಲಿಯರ್, ಮಹೇಂದ್ರ ಸಿಂಗ್ ಧೋನಿ, ಕೈರನ್ ಪೊಲಾರ್ಡ್, ರವೀಂದ್ರ ಜಡೇಜ, ಹರ್ಭಜನ್ ಸಿಂಗ್, ಭುವನೇಶ್ವರ್ ಕುಮಾರ್, ಜಸ್‌ಪ್ರೀತ್ ಬುಮ್ರಾ, ಲಸಿತ ಮಾಲಿಂಗ.