Advertisement

ಇಬ್ಬರು ಜಪಾನಿ ಕುಸ್ತಿಪಟುಗಳಿಗೆ ಕೋವಿಡ್ 19

10:50 PM Apr 10, 2020 | Sriram |

ಟೋಕಿಯೊ: ಸ್ಪೇನ್‌ನ ಕ್ಲಬ್‌ ಫ‌ುಟ್‌ಬಾಲ್‌ ಆಟಗಾರರಲ್ಲಿ ಒಂದು ರಾಶಿ ಕೋವಿಡ್ 19 ಪ್ರಕರಣಗಳು ಬೆಳಕಿಗೆ ಬಂದು ಆತಂಕ ಸೃಷ್ಟಿಯಾಗಿತ್ತು. ಇದೀಗ ಜಪಾನಿನ ಇಬ್ಬರು ಸುಮೊ ಕುಸ್ತಿಪಟುಗಳಲ್ಲೂ ಕೋವಿಡ್ 19 ವೈರಸ್‌ ಕಂಡು ಬಂದಿರುವುದನ್ನು ಜಪಾನ್‌ ಸುಮೊ ಸಂಸ್ಥೆ ಖಚಿತಪಡಿಸಿದೆ.

Advertisement

ಕೆಳ ಶ್ರೇಯಾಂಕಿತ ಸುಮೊ ಕುಸ್ತಿಪಟುಗಳು ವಾರದ ಹಿಂದೆ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಪರೀಕ್ಷೆ ಮಾಡಿದ ಬಳಿಕ ಅವರಲ್ಲಿ
ಕೋವಿಡ್ 19 ವೈರಸ್‌ ಇರುವುದು ಖಾತ್ರಿಯಾಗಿತ್ತು ಎಂದು ಸಂಸ್ಥೆ ತಿಳಿಸಿದೆ. ಆಟಗಾರರ ಹೆಸರನ್ನು ಬಹಿರಂಗಪಡಿಸಲು ಸಂಸ್ಥೆ ನಿರಾಕರಿಸಿದೆ.

ಸದ್ಯ ಅನಾರೋಗ್ಯಕ್ಕೀಡಾದವರಿಬ್ಬರೂ ಚೇತರಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲೇ ದಿಗ್ಬಂಧನಕ್ಕೆ ಒಳಗಾಗಿದ್ದಾರೆ, ಇವರ ಸಂಪರ್ಕದಲ್ಲಿದ್ದ ಉಳಿದ ಕುಸ್ತಿಪಟುಗಳ ಬಗ್ಗೆಯೂ ತೀವ್ರ ನಿಗಾ ವಹಿಸಲಾಗಿದೆ ಎಂದು ಜಪಾನ್‌ ಸುಮೊ ಸಂಸ್ಥೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next