Advertisement

Japan Airport: 2ನೇ ಮಹಾಯುದ್ಧದ 226 ಕೆ.ಜಿ. ಬಾಂಬ್‌ ಈಗ ಸ್ಫೋಟ!

09:09 AM Oct 03, 2024 | Team Udayavani |

ಟೊಕಿಯೊ: 2ನೇ ಮಹಾಯುದ್ಧ ಸಂದರ್ಭದಲ್ಲಿ ಸ್ಫೋಟಗೊಳ್ಳದೇ ಜಪಾನ್‌ನಲ್ಲಿ ಭೂಮಿ ಒಳಗೆ ಹೂತು ಹೋಗಿದ್ದ ಅಮೆರಿಕದ ಬರೋಬ್ಬರಿ 500 ಪೌಂಡ್‌ (226 ಕೆ.ಜಿ.) ತೂಕದ ಬಾಂಬ್‌ 85 ವರ್ಷದ ಬಳಿಕ ಇದೀಗ ಇದಕ್ಕಿದ್ದಂತೆ ಜಪಾನ್‌ ವಿಮಾನ ನಿಲ್ದಾಣದಲ್ಲಿ ಸ್ಫೋಟಗೊಂಡಿದೆ!.

Advertisement

ಅದೃಷ್ಟವಶಾತ್‌ ಸ್ಫೋಟದ ಸಂದರ್ಭದಲ್ಲಿ ಯಾವುದೇ ವಿಮಾನಗಳು ಘಟನ ಸ್ಥಳದಲ್ಲಿಲ್ಲದ ಕಾರಣ ದೊಡ್ಡ ಅನಾಹುತ ತಪ್ಪಿದೆ. ಆದಾಗ್ಯೂ, 80 ವಿಮಾನಗಳ ಪ್ರಯಾಣ ರದ್ದು ಗೊಳಿಸಲಾಗಿದೆ.

ಮಿಯಾಜಾಕಿ ವಿಮಾನ ನಿಲ್ದಾಣದ ಟ್ಯಾಕ್ಸಿ ವೇನಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟದ ತೀವ್ರತೆಗೆ ರಸ್ತೆಯ ಡಾಂಬರು ಕಿತ್ತು 6-7 ಅಡಿ ಎತ್ತರದ ವರೆಗೆ ಕಾರಂಜಿಯಂತೆ ಚಿಮ್ಮಿವೆ. ವಿಮಾನ ನಿಲ್ದಾಣದ ಸಮೀಪವಿರುವ ವಿಮಾನಯಾನ ಶಾಲೆಯಿಂದ ಈ ದೃಶ್ಯ ಸೆರೆ ಹಿಡಿಯಲಾಗಿದ್ದು, ಜಾಲತಾಣಗಳಲ್ಲೂ ಇದು ಭಾರೀ ವೈರಲ್‌ ಆಗಿದೆ. ಅಲ್ಲದೇ, ಸ್ಫೋಟ ದಿಂದಾಗಿ ಟ್ಯಾಕ್ಸಿ ವೇನಲ್ಲಿ 7 ಮೀಟರ್‌ ಸುತ್ತಳತೆಯ 3 ಅಡಿ ಆಳದ ಬೃಹತ್‌ ಗುಂಡಿ ಆಗಿದೆ. ಯಾವುದೇ ಸಾವು- ನೋವು ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಇದನ್ನೂ ಓದಿ: World War 3…?: ಇಸ್ರೇಲ್‌ ಮೇಲೆ ಇರಾನ್‌ ದಾಳಿ 3ನೇ ಮಹಾಯುದ್ಧಕ್ಕೆ ಮುನ್ನುಡಿ: ಚರ್ಚೆ

Advertisement

Udayavani is now on Telegram. Click here to join our channel and stay updated with the latest news.

Next