Advertisement

ಹೊಸಬರ ‘ಜನುಮದ ಜಾತ್ರೆ’ಗೆ ಮೆಚ್ಚುಗೆ

02:53 PM Sep 27, 2021 | Team Udayavani |

“ಜನುಮದ ಜಾತ್ರೆ’ – ಹೀಗೊಂದು ಶೀರ್ಷಿಕೆಯ ಸಂಪೂರ್ಣ ಹೊಸಬರ ಚಿತ್ರ ಕಳೆದ ವಾರ ಬಿಡುಗಡೆಯಾಗಿತ್ತು. ಹಳ್ಳಿ ಹಿನ್ನೆಲೆಯಲ್ಲಿ ನಡೆಯುವ ಈ ಸಿನಿಮಾಕ್ಕೆ ಮೆಚ್ಚುಗೆ ವ್ಯಕ್ತವಾಗುವ ಮೂಲಕ ಹೊಸಬರ ತಂಡ ಖುಷಿಯಾಗಿದೆ. ಈ ಚಿತ್ರವನ್ನು ದೊಡ್ಮನೆ ಮಂಜುನಾಥ್‌ ಎಂ ನಿರ್ಮಿಸಿದ್ದಾರೆ. ಆಟೋ ಆನಂದ್‌ ಈ ಚಿತ್ರದ ನಿರ್ದೇಶಕರು.

Advertisement

ಜನ ಚಿತ್ರಮಂದಿರಕ್ಕೆ ಬರಬೇಕಾದರೆ ಪಕ್ಕಾ ಹಳ್ಳಿ ಸೊಗಡಿನ ದೇಸಿ ಸಿನಿಮಾ ಕೊಡಬೇಕೆಂಬ ಉದ್ದೇಶದಿಂದ “ಜನುಮದ ಜೋಡಿ’ ಚಿತ್ರ ಮಾಡಿದ್ದು, ಗ್ರಾಮೀಣ ಶೈಲಿಯನ್ನು ಸಿನಿಮಾದಲ್ಲಿ ಪ್ರಸ್ತುತ ಪಡಿಸಿದ್ದಾರೆ. ಮಾಟ, ಮಂತ್ರ, ಅದರಿಂದಾಗುವ ತೊಂದರೆ, ಪರಿಹಾರ… ಹೀಗೆ ಹಲವು ವಿಚಾರಗಳನ್ನು ಚಿತ್ರದಲ್ಲಿ ಹೇಳಲಾಗಿದೆ. ಬಹುತೇಕ ಚಿತ್ರೀಕರಣ ಕೂಡಾ ಹಳ್ಳಿಯಲ್ಲೇ ನಡೆದಿದೆ.

ಇದನ್ನೂ ಓದಿ:ಹೈ ಸ್ಪೀಡ್‌ ನಲ್ಲಿ ಮೇಘಾ ಶೆಟ್ಟಿ ಸಿನಿ ರೈಡ್‌

ದುಷ್ಟಶಕ್ತಿಯೊಂದು ನಾಯಕನ ಕುಟುಂಬಕ್ಕೆ ಯಾವ ರೀತಿ ತೊಂದರೆ ಕೊಡುತ್ತದೆ ಮತ್ತು ಅದರಿಂದ ಆ ಕುಟುಂಬ ಹಾಗೂ ತನ್ನ ಪ್ರೀತಿಯನ್ನು ನಾಯಕ ಹೇಗೆ ಉಳಿಸಿಕೊಳ್ಳುತ್ತಾನೆ ಎಂಬ ಅಂಶದೊಂದಿಗೆ ಚಿತ್ರ ಸಾಗುತ್ತದೆಯಂತೆ. ಜೊತೆಗೆ ಸುಖ ಬಂದಾಗ ಹಿಂದಿನ ಕಷ್ಟವನ್ನು ಮರೆಯಬೇಡಿ ಎನ್ನುವ ಸಂದೇಶ ಕೂಡಾ ಈ ಚಿತ್ರದಲ್ಲಿದೆ.

ನಾಯಕನಾಗಿ ಮದನ್‌ಕುಮಾರ್‌, ನಾಯಕಿಯಾಗಿ ಚೈತ್ರಾ ಅಭಿನುಸಿದ್ದು, ಮತ್ತೂಂದು ಜೋಡಿಯಾಗಿ ಮಂಡ್ಯ ಕೆಂಪ ಹಾಗೂ ಅಂಜಲಿ ನಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next