Advertisement

Dhananjay: ಮದುವೆಗೆ ಸಿದ್ದವಾದ್ರು ಡಾಲಿ; ದುರ್ಗದ ಹುಡುಗಿಯ ಕೈ ಹಿಡಿಯಲಿದ್ದಾರೆ ಧನಂಜಯ

10:28 AM Nov 01, 2024 | Team Udayavani |

ಕನ್ನಡ ಪ್ರತಿಭಾವಂತ ನಟ, ನಿರ್ಮಾಪಕ ಡಾಲಿ ಧನಂಜಯ (Dhananjay) ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ಆದರೆ ಡಾಲಿ ಅವರು ಯಾವಾಗ ಮದುವೆಯಾಗುತ್ತಾರೆ ಎಂಬ ಪ್ರಶ್ನೆ ಅಭಿಮಾನಿಗಳು ಕೇಳುತ್ತಿರುತ್ತಿದ್ದರು. ಇದೀಗ ಇದಕ್ಕೆ ಉತ್ತರ ಸಿಕ್ಕಿದೆ.

Advertisement

ಹೌದು, ಡಾಲಿ ಧನಂಜಯ ಅವರು ಮದುವೆಗೆ ಸಿದ್ದವಾಗಿದ್ದಾರೆ. ಚಿತ್ರದುರ್ಗದ ಡಾ.ಧನ್ಯತಾ ಅವರನ್ನು ಧನಂಜಯ ಕೈಹಿಡಿಯಲಿದ್ದಾರೆ. ಹಲವು ವರ್ಷಗಳಿಂದ ಸ್ನೇಹಿತರಾಗಿದ್ದ ಧನ್ಯತಾ ಮತ್ತು ಧನಂಜಯ ಅವರ ಪ್ರೀತಿಗೆ ಮನೆಯವರ ಒಪ್ಪಿಗೆ ಸಿಕ್ಕಿದೆ.

ಧನಂಜಯ ಮತ್ತು ಧನ್ಯತಾ ಅವರ ಕಾರ್ಯಕ್ರಮ ಮುಂದಿನ ಫೆಬ್ರವರಿಯಲ್ಲಿ ನಡೆಯಲಿದೆ. ಇದೀಗ ಒಟ್ಟಿಗೆ ಫೋಟೋಶೂಟ್‌ ಮಾಡಿರುವ ಜೋಡಿ ದೀಪಾವಳಿ ಹಬ್ಬದಂದು ಶುಭ ಸುದ್ದಿ ನೀಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next