Advertisement

ಜನವರಿ 22ರಿಂದ 24ನೇ ಕೋಟಿ ಗಾಯತ್ರಿ ಜಪ ಮಹಾಯಜ್ಞ

11:03 AM Oct 27, 2017 | Team Udayavani |

ಬೆಂಗಳೂರು: ಗಾಯತ್ರಿ ತಪೋಭೂಮಿ ಚಾರಿಟಬಲ್‌ ಟ್ರಸ್ಟ್‌ ಮತ್ತು ಗಾಯತ್ರಿ ಸೇವಾ ಸಮಿತಿಯಿಂದ 2018ರ ಜನವರಿ 22ರಿಂದ 29ರವರೆಗೆ 24ನೇ ಕೋಟಿ ಗಾಯತ್ರಿ ಜಪ ಮಹಾಯಜ್ಞ ಹಮ್ಮಿಕೊಳ್ಳಲಾಗಿದೆ. 

Advertisement

ಸಮಾಜದ ಏಳಿಗೆಗಾಗಿ ಹಾಗೂ ನೈಸರ್ಗಿಕ ವಿಕೋಪ ಸಂಭವಿಸದಿರಲಿ ಎಂಬ ಉದ್ದೇಶಕ್ಕಾಗಿ 45 ಹೋಮಕುಂಡಗಳಲ್ಲಿ ಈ ಮಹಯಜ್ಞ ಹಮ್ಮಿಕೊಳ್ಳಲಾಗಿದ್ದು, ಉಡುಪಿಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ, ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಸೇರಿದಂತೆ ರಾಜ್ಯದ ವಿವಿಧೆಡೆಯಿಂದ ಅನೇಕ ಸ್ವಾಮೀಜಿಗಳು ಈ ಮಹಾಯಜ್ಞಕ್ಕೆ ಸಾಕ್ಷಿಯಾಗಲಿದ್ದಾರೆ ಎಂದು ಗಾಯತ್ರಿ ಸೇವಾ ಸಮಿತಿ ಅಧ್ಯಕ್ಷ ವಿನಾಯಕ ಆಕಳವಾಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. 

ಒಟ್ಟಾರೆ ಎರಡು ಲಕ್ಷ ಚದರಡಿ ಮಹಾಯಜ್ಞ ಉತ್ಸವಕ್ಕೆ ಮೀಸಲಿಡಲಾಗಿದ್ದು, ಇದರಲ್ಲಿ 30 ಸಾವಿರ ಚದರಡಿಯಲ್ಲಿ ಯಜ್ಞ ಮಂಟಪ ಸಿದ್ಧಗೊಳ್ಳಲಿದೆ. ಯಾಗಕ್ಕೆ ಸಂಪೂರ್ಣ ಸಾವಯವ ಪದಾರ್ಥಗಳನ್ನು ಬಳಸಲಾಗುವುದು. ಸುಮಾರು ಎರಡು ಲಕ್ಷ ಜನ ಭಾಗವಹಿಸುವ ನಿರೀಕ್ಷೆ ಇದೆ. ಎಂಟು ದಿನಗಳ ಉತ್ಸವದಲ್ಲಿ ನಿತ್ಯ 25 ಸಾವಿರ ಜನರಿಗೆ ಊಟದ ವ್ಯವಸ್ಥೆ ಮಾಡಲಾಗುವುದು.

ಎರಡು ಸಾವಿರ ಜನರಿಗೆ ಉಳಿದುಕೊಳ್ಳುವ ವ್ಯವಸ್ಥೆ ಮಾಡಲಾಗುವುದು. ಸುಮಾರು 5ರಿಂದ 6 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ ಎಂದು ಅವರು ವಿವರಿಸಿದರು. ಸುದ್ದಿಗೋಷ್ಠಿಯಲ್ಲಿ ಶ್ರೀರಂಗಪಟ್ಟಣದ ವೇದಮೂರ್ತಿ ಡಾ.ಭಾನುಪ್ರಕಾಶ್‌ ಶರ್ಮಾ, ಸಮಿತಿ ಉಪಾಧ್ಯಕ್ಷ ಅಶೋಕ ಹರಪನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next