Advertisement

ಸೋಫಿಯಾ ಓಪನ್‌ ಟೆನಿಸ್‌:  ಜೆನ್ನಿಕ್‌ ಸಿನ್ನರ್‌ ಚಾಂಪಿಯನ್‌

08:41 AM Nov 16, 2020 | keerthan |

ಸೋಫಿಯಾ (ಬಲ್ಗೇರಿಯಾ): ಇಟಲಿಯ 19 ವರ್ಷದ ಜೆನ್ನಿಕ್‌ ಸಿನ್ನರ್‌ “ಸೋಫಿಯಾ ಓಪನ್‌’ ಎಟಿಪಿ ಟೆನಿಸ್‌ ಕೂಟದ ಚಾಂಪಿಯನ್‌ ಆಗಿ ಹೊರ ಹೊಮ್ಮಿದ್ದಾರೆ. ಇದರೊಂದಿಗೆ ಅವರು ಕಳೆದ 12 ವರ್ಷಗಳ ಎಟಿಪಿ ಇತಿಹಾಸದಲ್ಲಿ ಪ್ರಶಸ್ತಿ ಎತ್ತಿದ ಅತೀ ಕಿರಿಯ ಆಟಗಾರನೆಂಬ ಹಿರಿಮೆಗೆ ಪಾತ್ರರಾಗಿದ್ದಾರೆ.

Advertisement

ರವಿವಾರದ ಪ್ರಶಸ್ತಿ ಸಮರದಲ್ಲಿ ಜೆನ್ನಿಕ್‌ ಸಿನ್ನರ್‌ ಕೆನಡಾದ ವಾಸೆಕ್‌ ಪಾಸ್ಪಿಸಿಲ್‌ ವಿರುದ್ಧ ಭಾರೀ ಹೋರಾಟ ನಡೆಸಿ 6-4, 3-6, 7-6 (3) ಅಂತರದ ಗೆಲುವು ಕಾಣುವಲ್ಲಿ ಯಶಸ್ವಿಯಾದರು. ಇದು ಸಿನ್ನರ್‌ ಆಡಿದ ಮೊದಲ ಎಟಿಪಿ ಫೈನಲ್‌ ಎಂಬುದು ವಿಶೇಷ.

ಇದನ್ನೂ ಓದಿ:ಯುವ ದೇವದತ್ತ ಪಡಿಕ್ಕಲ್‌ಗೆ ಸ್ಫೂರ್ತಿ ತುಂಬಿದ ಎ.ಬಿ.ಡಿವಿಲಿಯರ್ಸ್

2008ರ “ಡೆಲ್ರೆ ಬೀಚ್‌ ಟೂರ್ನಿ’ ಯಲ್ಲಿ ಜಪಾನಿನ ಕೀ ನಿಶಿಕೊರಿ 18ರ ಹರೆಯದಲ್ಲಿ ಚಾಂಪಿಯನ್‌ ಆದ ಬಳಿಕ ಕಿರಿಯನೊಬ್ಬ ಎಟಿಪಿ ಪ್ರಶಸ್ತಿ ಎತ್ತಿದ ಮೊದಲ ನಿದರ್ಶನ ಇದಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next