Advertisement

ಮರ್ಡರ್‌ ಮಿಸ್ಟ್ರಿಯಲ್ಲಿ ಹೇಮಂತ್‌, ಜನಾರ್ಧನ್‌

11:33 AM Mar 14, 2022 | Team Udayavani |

“ಗುಲ್ಟು’ ಖ್ಯಾತಿಯ ನಿರ್ದೇಶಕ ಜನಾರ್ದನ್‌ ಚಿಕ್ಕಣ್ಣ ಶೀಘ್ರದ ಲ್ಲಿಯೇ ಸಸ್ಪೆನ್ಸ್‌-ಥ್ರಿಲ್ಲರ್‌ ಮರ್ಡರ್‌ ಮಿಸ್ಟರಿ ಕಥೆಯೊಂದನ್ನು ಪ್ರೇಕ್ಷಕರ ಮುಂದೆ ಹೇಳಲು ಹೊರಡುತ್ತಿದ್ದಾರೆ.

Advertisement

90ರ ದಶಕದ ಹಿನ್ನೆಲೆಯ ಮರ್ಡರ್‌ ಮಿಸ್ಟರಿ ಕಥೆಯೊಂದಕ್ಕೆ ಜನಾರ್ದನ್‌ ಚಿಕ್ಕಣ್ಣ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದು, ನಿರ್ದೇಶಕ ಮತ್ತು ನಿರ್ಮಾಪಕ ಹೇಮಂತ್‌ ಎಂ. ರಾವ್‌ ಈ ಸಿನಿಮಾಗೆ “ಲಾಸ್ಟ್‌ ಅಂಡ್‌ ಫೌಂಡ್‌ ಫಿಲಂಸ್‌’ ಬ್ಯಾನರ್‌ನಲ್ಲಿ ಬಂಡವಾಳ ಹೂಡುತ್ತಿದ್ದಾರೆ.

ಇದನ್ನೂ ಓದಿ:ಆರ್‌ಆರ್‌ಆರ್‌ ಪ್ರೀ ರಿಲೀಸ್‌ ಇವೆಂಟ್‌ಗೆ ಸಿದ್ಧತೆ; ಚಿಕ್ಕಬಳ್ಳಾಪುರದಲ್ಲಿ ಅದ್ದೂರಿ ಸಮಾರಂಭ

ಈ ಬಗ್ಗೆ “ಉದಯವಾಣಿ’ ಜೊತೆ ಮಾತನಾ ಡಿದ ನಿರ್ಮಾಪಕ ಹೇಮಂತ್‌ ರಾವ್‌. “ಬಹಳ ಸಮಯದಿಂದ ನಾವಿಬ್ಬರು ಸೇರಿ ಸಿನಿಮಾ ಮಾಡಲುಕಾಯು ತ್ತಿ¨ªೆವು, ಆ ಕನಸು ಇಂದು ಅಂತಿಮವಾಗಿ ನೇರವೇರುತ್ತಿದೆ. ಇದೊಂದು 1990 ದಶಕದಲ್ಲಿ ನಡೆಯುವ ಮರ್ಡರ್‌ ಮಿಸ್ಟ್ರಿ ಕಥಾಹಂದರದ ಸಿನಿಮಾ. ಇಡೀ ಸಿನಿಮಾ ಚಿಕ್ಕಮಗಳೂರು, ಮಡಿಕೇರಿ ಹಿನ್ನೆಲೆಯಲ್ಲಿ ಕಥೆ ನಡೆಯುತ್ತದೆ. ಸದ್ಯ ಸಿನಿಮಾದ ಸ್ಕ್ರಿಪ್ಟ್ ಕೆಲಸಗಳು ಮುಗಿದಿದ್ದು, ಕಲಾವಿದರು ಮತ್ತು ತಂತ್ರಜ್ಞರ ಆಯ್ಕೆ ನಡೆಯುತ್ತಿದೆ. ಈ ತಿಂಗಳ ಕೊನೆಯೊಳಗೆ ಸಿನಿಮಾದ ಟೈಟಲ್‌ ಫೈನಲ್‌ ಆಗಲಿದ್ದು, ಚಿತ್ರೀಕರಣಕ್ಕೆ ಹೊರಡುವ ಯೋಚನೆಯಿದೆ’ ಎನ್ನುತ್ತಾರೆ.

ಇನ್ನು ಹೆಸರಿಡದ ಈ ಚಿತ್ರಕ್ಕೆ ಚರಣ್‌ ರಾಜ್‌ ಸಂಗೀತ, ಅದ್ವೈತ ಗುರುಮೂರ್ತಿ ಛಾಯಾಗ್ರಹಣವಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next