Advertisement

ಜಮ್ಮು ಕಾಶ್ಮೀರ : ಉಗ್ರರಿಂದ ಮೂವರು ಪೊಲೀಸರ ಹತ್ಯೆ

03:51 PM Dec 11, 2018 | udayavani editorial |

ಹೊಸದಿಲ್ಲಿ : ಜಮ್ಮು ಕಾಶ್ಮೀರದಲ್ಲಿ ಇಂದು ಮಂಗಳವಾರ ಶೋಪಿಯಾನ್‌ ಜಿಲ್ಲೆಯಲ್ಲಿ ಉಗ್ರರು ಮೂವರು ಪೊಲೀಸರನ್ನು ಕೊಂದಿರುವುದಾಗಿ ಮಾಧ್ಯಮ ವರದಿ ತಿಳಿಸಿದೆ.

Advertisement

ಪೊಲೀಸರು ಅಲ್ಪಸಂಖ್ಯಾಕರ ಪ್ರದೇಶವನ್ನು ಕಾವಲು ಕಾಯುತ್ತಿರುವಾಗ ಉಗ್ರರು ಅವರ ಮೇಲೆ ದಾಳಿ ನಡೆಸಿ ಮೂವರನ್ನು ಕೊಂದರೆಂದು ವರದಿಗಳು ತಿಳಿಸಿವೆ.

ಶೋಪಿಯಾನ್‌ ಜಿಲ್ಲೆಯ ಝೈನ್‌ಪೋರಾ ದಲ್ಲಿ ಈ ಘಟನೆ ನಡೆದಿದೆ. ಉಗ್ರರು ಗಾರ್ಡ್‌ ಗಳ ಕೊಠಡಿಯನ್ನು ಪ್ರವೇಶಿಸಿ ಅಲ್ಲಿದ್ದ  ನಾಲ್ವರು ಪೊಲೀಸರ ಮೇಲೆ ಗುಂಡಿನ ದಾಳಿ ನಡೆಸಿದರು. ನಾಲ್ಕನೇ ಪೊಲೀಸ್‌ ಸಿಬಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವುದಾಗಿ ವರದಿ ತಿಳಿಸಿದೆ. 

ಮೃತರನ್ನು ಅಬ್ದುಲ್‌ ಮಜೀದ್‌, ಮನ್ಸೂರ್‌ ಅಹ್ಮದ್‌ ಮತ್ತು ಮೊಹಮ್ಮದ್‌ ಅಮೀನ್‌ ಎಂದು ಗುರುತಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next