ಜಮ್ಮು: ಸೋಮವಾರ ರಾತ್ರಿ ಅತ್ಯಂತ ಶೀತ ರಾತ್ರಿಯನ್ನು ಜಮ್ಮು ನಗರ ಕಂಡಿದೆ. ಸುಮಾರು 11 ವರ್ಷಗಳ ಬಳಿಕ ಜಮ್ಮುವಲ್ಲಿ ಅತ್ಯಂತ ಕಡಿಮೆ 3.6 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ಫೆ.8,2012 ರ ರಾತ್ರಿ ಸುಮಾರು 3.2 ಡಿಗ್ರಿ ಸೆಲ್ಸಿಯಸ್‌ಗೆ ಇಳಿದಿದ್ದು ಈ ಹಿಂದಿನ ದಾಖಲೆಯಾಗಿತ್ತು. ಅದಾದ ಬಳಿಕ ಸೋಮವಾರ ರಾತ್ರಿ 3.6 ಗೆ ಇಳಿಕೆಯಾಗಿದ್ದೇ ಅತ್ಯಂತ ಕಡಿಮೆ ತಾಪಮಾನವಾಗಿದ್ದು, ಸುಮಾರು 11 ವರ್ಷಗಳ ಬಳಿಕ ಇದೇ ಮೊದಲು ಎಂದು ಹವಾಮಾನ ಇಲಾಖೆ ಅಧಿಕಾರಿಯೊಬ್ಬರು ಹೇಳಿದ್ದಾರೆ.
ಅಷ್ಟೇ ಅಲ್ಲದೆ ಮುಂದಿನ 24 ಗಂಟೆಗಳ ಕಾಲ ಜಮ್ಮುವಿನ ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವೂ ಇರಲಿದೆ ಎಂದು ಅಧಿಕಾರಿ ಹೇಳಿದ್ದಾರೆ.
ಶ್ರೀ ನಗರದಲ್ಲಿ ಮೈನಸ್ 1.6, ಪಹಲ್ಗಾಮ್‌ನಲ್ಲಿ ಮೈನಸ್ 4.6 ಮತ್ತು ಗುಲ್‌ಮಾರ್ಗ್‌ನಲ್ಲಿ ಮೈನಸ್ 7.2 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದ್ದು, ಲಡಾಖ್ ಭಾಗದ ದ್ರಾಸ್‌ನಲ್ಲಿ ಮೈನಸ್ 16.3 ಕಾರ್ಗಿಲ್‌ನಲ್ಲಿ ಮೈನಸ್ 17.4 ಲೇಹ್‌ನಲ್ಲಿ ಮೈನಸ್ 12.2 ಸೆಲ್ಸಿಯಸ್ ತಾಪಮಾನ ಕನಿಷ್ಠ ಉಷ್ಣಾಂಶ ದಾಖಲಾಗಿದೆ.
ಅಲ್ಲದೆ ಜಮ್ಮುವಿನಲ್ಲಿ 7.2, ಕತ್ರಾದಲ್ಲಿ 8 ,ಬಾಟೋಟೆ 3.8, ಬನಿಹಾಲ್ 0.8, ಭದೆರ್‌ವಾಹ್ 1.4 ಕನಿಷ್ಠ ಉಷ್ಣಾಂಶ ದಾಖಲಾಗಿದೆ.