Advertisement

ಸಂಪುಟ ವಿಸ್ತರಣೆ

09:30 AM May 01, 2018 | Team Udayavani |

ಜಮ್ಮು: ಜಮ್ಮು-ಕಾಶ್ಮೀರ ವಿಧಾನಸಭೆ ಸ್ಪೀಕರ್‌ ಕವಿಂದರ್‌ ಗುಪ್ತಾ ಹಾಗೂ 7 ಬಿಜೆಪಿ ಶಾಸಕರು ಸಚಿವರಾಗಿ ಸೋಮವಾರ ಪ್ರಮಾಣ ಸ್ವೀಕರಿಸಿದ್ದಾರೆ. ಈ ಪೈಕಿ ಗುಪ್ತಾ ಭಾನುವಾರ ರಾಜೀನಾಮೆ ನೀಡಿದ ಡಿಸಿಎಂ ನಿರ್ಮಲ್‌ ಸಿಂಗ್‌ ಅವರ ಸ್ಥಾನ ತುಂಬಲಿದ್ದಾರೆ. ನಿರ್ಮಲ್‌ ಸಿಂಗ್‌ ಸ್ಪೀಕರ್‌ ಆಗಲಿದ್ದಾರೆ. ಕಥುವಾ ಅತ್ಯಾಚಾರ, ಹತ್ಯೆ ಆರೋಪಿಗಳ ಪರ ನಡೆದಿದ್ದ ರ್ಯಾಲಿಯಲ್ಲಿ ಪಾಲ್ಗೊಂಡಿದ್ದ ಶಾಸಕರೊಬ್ಬರಿಗೆ ಸಚಿವ ಸ್ಥಾನ ನೀಡಲಾಗಿದೆ ಎಂದು ಸಿ.ಎನ್‌.ಎನ್‌. ನ್ಯೂಸ್‌18 ವರದಿ ಮಾಡಿದೆ. ಮತ್ತೂಂದು ಬೆಳವಣಿಗೆಯಲ್ಲಿ, ಡಿಸಿಎಂ ಸ್ಥಾನ ಅಲಂಕರಿಸಿದ ಬೆನ್ನಲ್ಲೇ ಕವಿಂದರ್‌ ಗುಪ್ತಾ ಅವರು, ‘ಕಥುವಾ ಅತ್ಯಾಚಾರ, ಹತ್ಯೆ ವಿಚಾರವು ಕ್ಷುಲ್ಲಕ ವಿಚಾರ’ ಎನ್ನುವ ಮೂಲಕ ಹೊಸ ವಿವಾದ ಸೃಷ್ಟಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next