Advertisement

ಜಮ್ಮು-ಕಾಶ್ಮೀರ:ಮೂರು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ಪಾಕ್ ನ ನಾಲ್ವರು ಸೇರಿ ಏಳು ಉಗ್ರರ ಸಾವು

12:09 PM Jun 20, 2022 | Team Udayavani |

ನವದೆಹಲಿ: ಜಮ್ಮು-ಕಾಶ್ಮೀರದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಮೂರು ಪ್ರತ್ಯೇಕ ಎನ್ ಕೌಂಟರ್ ನಲ್ಲಿ ನಾಲ್ವರು ಪಾಕಿಸ್ತಾನಿ ಪ್ರಜೆ ಸೇರಿದಂತೆ ಏಳು ಮಂದಿ ಉಗ್ರರನ್ನು ಹೊಡೆದುರುಳಿಸಲಾಗಿದೆ ಎಂದು ಸೋಮವಾರ (ಜೂನ್ 20) ಅಧಿಕಾರಿಗಳು ತಿಳಿಸಿದ್ದಾರೆ.

Advertisement

ಇದನ್ನೂ ಓದಿ:ಎಂಟು ತಿಂಗಳಲ್ಲಿ ಆರು ಮಂದಿ ಕ್ಯಾಪ್ಟನ್ ಗಳ ಜೊತೆ ಕೆಲಸ ಮಾಡಿದೆ; ದ್ರಾವಿಡ್ ಅಸಹಾಯಕತೆ

ಕಾಶ್ಮೀರ, ಕುಪ್ವಾರ ಮತ್ತು ಕುಲ್ಗಾಮ್ ನಲ್ಲಿ ಜಮ್ಮು ಕಾಶ್ಮೀರ ಪೊಲೀಸರು ಮತ್ತು ಸೇನೆಯ ಜಂಟಿ ಕಾರ್ಯಾಚರಣೆಯಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಏಳು ಮಂದಿ ಉಗ್ರರು ಸಾವನ್ನಪ್ಪಿರುವುದಾಗಿ ವರದಿ ತಿಳಿಸಿದೆ.

20 ದಿನಗಳಲ್ಲಿ 24 ಭಯೋತ್ಪಾದಕರನ್ನು ಹತ್ಯೆಗೈಯಲಾಗಿದೆ. ಈ ವರ್ಷದಲ್ಲಿ ಈವರೆಗೆ 32 ಪಾಕಿಸ್ತಾನಿ ಉಗ್ರರು ಸೇರಿದಂತೆ ಒಟ್ಟು 114 ಉಗ್ರರು ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವುದಾಗಿ ಐಜಿಪಿ ವಿಜಯ್ ಕುಮಾರ್ ತಿಳಿಸಿದ್ದಾರೆ.

ಕುಪ್ವಾರಾದ ಲೋಲಬ್ ನಲ್ಲಿ ನಡೆದ ಎನ್ ಕೌಂಟರ್ ನಲ್ಲಿ ಲಷ್ಕರ್ ಎ ತೊಯ್ಬಾ ಸಂಘಟನೆಗೆ ಸೇರಿದ ನಾಲ್ವರು ಪಾಕಿಸ್ತಾನಿ ಉಗ್ರರು ಬಲಿಯಾಗಿದ್ದಾರೆ. ಈ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಕುಲ್ಗಾಮ್ ನಲ್ಲಿ ಇಬ್ಬರು ಹಾಗೂ ಪುಲ್ವಾಮಾದಲ್ಲಿ ಓರ್ವ ಉಗ್ರ ಎನ್ ಕೌಂಟರ್ ನಲ್ಲಿ ಸಾವನ್ನಪ್ಪಿರುವುದಾಗಿ ವಿಜಯ್ ಕುಮಾರ್ ವಿವರಿಸಿದ್ದಾರೆ.

Advertisement

ಸಾವನ್ನಪ್ಪಿರುವ ಏಳು ಉಗ್ರರಲ್ಲಿ, ಐವರಿಗೆ ಲಷ್ಕರ್ ಎ ತೊಯ್ಬಾ ಸಂಘಟನೆ ಜೊತೆ ಸಂಪರ್ಕ ಇದ್ದು, ಓರ್ವ ಜೈಶ್ ಎ ಮೊಹಮ್ಮದ್ ಸಂಘಟನೆ ಉಗ್ರನಾಗಿದ್ದಾನೆ. ಇದರಲ್ಲಿ ನಾಲ್ವರು ಪಾಕಿಸ್ತಾನಿಯರು ಹಾಗೂ ಮೂವರು ಸ್ಥಳೀಯರು ಎಂದು ಗುರುತಿಸಲಾಗಿದೆ ಎಂಬುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next