Advertisement
ತಂಡದಲ್ಲಿ ಅವರ ಅವಳಿ ಸಹೋದರ ಕ್ರೆಗ್ ಓವರ್ಟನ್ ಕೂಡ ಇರುವುದು ವಿಶೇಷ. ಇವರಿಬ್ಬರೂ ಒಟ್ಟಿಗೇ ಆಡಿದರೆ 145 ವರ್ಷಗಳ ಸುದೀರ್ಘ ಟೆಸ್ಟ್ ಇತಿಹಾಸದಲ್ಲಿ ಮೊದಲ ಸಲ ಅವಳಿ ಕ್ರಿಕೆಟಿಗರು ಇಂಗ್ಲೆಂಡ್ ತಂಡವನ್ನು ಪ್ರತಿನಿಧಿಸಿದಂತಾಗುತ್ತದೆ.
Related Articles
Advertisement
ಇದನ್ನೂ ಓದಿ:ದ್ವಿತೀಯ ಏಕದಿನ: ಮಳೆ ಪಂದ್ಯ ಗೆದ್ದ ಶ್ರೀಲಂಕಾ; ಆಸ್ಟ್ರೇಲಿಯಕ್ಕೆ 26 ರನ್ ಸೋಲು
ವಿಶ್ವವಿಖ್ಯಾತ ಅವಳಿಗಳುಕ್ರಿಕೆಟಿನ ಖ್ಯಾತ ಅವಳಿಗಳಲ್ಲಿ ಆಸ್ಟ್ರೇಲಿಯದ ಸ್ಟೀವ್ ವೋ ಮಾರ್ಕ್ ವೋ ವಿಶೇಷ ಸ್ಥಾನವಿದೆ. ಇವರಿಬ್ಬರು 1991ರಲ್ಲಿ ವೆಸ್ಟ್ ಇಂಡೀಸ್ ಪ್ರವಾಸದ ವೇಳೆ ಒಟ್ಟಿಗೇ ಟೆಸ್ಟ್ ಆಡಿದ್ದರು. ಹಾಗೆಯೇ ನ್ಯೂಜಿಲ್ಯಾಂಡಿನ ಹಾಮಿಶ್ ಮಾರ್ಷಲ್ ಮತ್ತು ಜೇಮ್ಸ್ ಮಾರ್ಷಲ್ 2005ರಲ್ಲಿ ಒಂದೇ ಟೆಸ್ಟ್‌ನಲ್ಲಿ ಕಾಣಿಸಿಕೊಂಡಿದ್ದರು. ವನಿತಾ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯದ ಫೆರ್ನಿ ಶೆವಿಲ್ ರೆನೆ ಶೆವಿಲ್ ಹೆಸರನ್ನು ಉಲ್ಲೇಖಿಸದೆ ಇರುವಂತಿಲ್ಲ. ಇವರಿಬ್ಬರು 1934ರಷ್ಟು ಹಿಂದೆಯೇ ಇಂಗ್ಲೆಂಡ್ ವಿರುದ್ಧ ಟೆಸ್ಟ್ ಪಂದ್ಯ ಆಡಿದ್ದರು. ಬಳಿಕ 1984ರಲ್ಲಿ ನ್ಯೂಜಿಲ್ಯಾಂಡ್‌ನ ಎಲಿಜಬೆತ್ ಸಿಗ್ನಲ್ ಮತ್ತು ರೋಸ್ ಸಿಗ್ನಲ್ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಕಾಣಿಸಿಕೊಂಡಿದ್ದರು.