Advertisement

ಸೂರ್ಯನ ಬಳಿಗೆ ಭೂಮಿ ಹೋದರೆ ಏನಾಗುತ್ತೆ?

02:16 AM May 28, 2022 | Team Udayavani |

ಹೊಸದಿಲ್ಲಿ: “ನಾವಿರುವ ಭೂಮಿ ಸೂರ್ಯನ ಹತ್ತಿರಕ್ಕೆ ಹೋದರೆ ಏನಾದೀತು? ಇನ್ನೇನಾಗುತ್ತೆ, ಸುಟ್ಟು ಬೂದಿಯಾಗುತ್ತದೆ ಎಂಬ ಸರಳ ಉತ್ತರ ಹೇಳಬಹುದು. ಆದರೆ ಅದನ್ನು ಹೊರತುಪಡಿಸಿದಂತೆ ಭೂಮಿ ಯಲ್ಲಿ ಆಗುವ ಬದಲಾ ವಣೆಗಳೇನು’ ಎಂಬುದರ ಅನ್ವೇಷಣೆಗೆ ಖಗೋಳ ವಿಜ್ಞಾನಿಗಳು ಮುಂದಾಗಿದ್ದಾರೆ.

Advertisement

ಈ ಅನ್ವೇಷಣೆಗಾಗಿ, ಇತ್ತೀಚೆಗಷ್ಟೇ ಹಾರಿಬಿಡ ಲಾಗಿರುವ ಅತ್ಯಂತ ಶಕ್ತಿಶಾಲಿ ದೂರದರ್ಶಕವಾದ ಜೇಮ್ಸ್‌ ವೆಬ್‌ ಟೆಲಿಸ್ಕೋಪ್‌ಗೆ ಈ ಜವಾಬ್ದಾರಿಯನ್ನು ಹೊರಿಸಲಾಗಿದೆ. ಈ ದೂರ ದರ್ಶ ಕವು, ಸೂರ್ಯನಿಗೆ ಅತ್ಯಂತ ಸಮೀಪದಲ್ಲಿ ಸುತ್ತು ತ್ತಿರುವ ಭೂಮಿಯ ವಾತಾವರಣವನ್ನೇ ಹೋಲುವ ಎರಡು ಸೂಪರ್‌ ಅರ್ತ್‌ ಗಳಾದ “55 ಕ್ಯಾಂಕ್ರಿ ಇ’ ಹಾಗೂ “ಎಲ್‌ಎಚ್‌ಎಸ್‌ 3844 ಬಿ’ ಗ್ರಹಗಳನ್ನು ಆಯ್ದುಕೊಳ್ಳಲಾಗಿದೆ.

ಈ ಎರಡೂ ಗ್ರಹಗಳ ಅಧ್ಯಯ ನದಿಂದ ಯಾವ ವಿಚಾರಗಳು ತಿಳಿದು ಬರಬಹುದು ಎಂಬ ಬಗ್ಗೆ ವಿಜ್ಞಾನಿಗಳೂ ಈಗಲೇ ಒಂದು ಊಹೆಯನ್ನು ಮಾಡಿಕೊಂಡಿದ್ದಾರೆ. ಭೂಮಿಯು ಸೂರ್ಯನ ಬಳಿಗೆ ಹೋದರೆ ಅದರಲ್ಲಿನ ಜೀವಿಗಳು ಸುಟ್ಟು ಕರಕಲಾಗುತ್ತವೆ ನಿಜ. ಆದರ ಜತೆಯಲ್ಲೇ ಭೂಮಿ ಯಲ್ಲಿನ ತಾಪಮಾನ ನಿಧಾನಕ್ಕೆ ಏರಿಕೆಯಾಗಿ ಭೂಮಿಯೊಳಗಿನ ಲಾವಾ ಆಚೆ ಬರುತ್ತದೆ.

a ಆಗ ಇಡೀ ಭೂಮಿಯೇ ಲಾವಾ ಗೋಳವಾಗಿ ಬದಲಾಗುತ್ತದೆ. ಆದರೆ ಭೂಮಿಯು ತನ್ನನ್ನು ತಾನು ಸುತ್ತಿಕೊಳ್ಳುವುದರಿಂದ ಸೂರ್ಯನಿಗೆ ಅಭಿಮುಖವಾಗಿರುವ ಭಾಗ ಮಾತ್ರ ಬಿಸಿಯಾಗದೇ ಉಳಿದ ಭಾಗಗಳೂ ಬಿಸಿಯಾಗುತ್ತವೆ ಎಂದು ವಿಜ್ಞಾನಿಗಳು ಊಹಿಸಿದ್ದಾರೆ.

ಆದರೆ ಜೇಮ್ಸ್‌ ದೂರದರ್ಶಕವು ಇದಕ್ಕಿಂತ ವಿಭಿನ್ನವಾದ ಅಧ್ಯಯನ ವರದಿಯನ್ನು ಸಲ್ಲಿಸ ಬಹುದೇ ಎಂದು ವಿಜ್ಞಾನಿಗಳು ನಿರೀಕ್ಷಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next