ವಾಷಿಂಗ್ಟನ್: ಗೋಲ್ಡನ್ ಗ್ಲೋಬ್ ಅವಾರ್ಡ್ ಗೆದ್ದು ಸಂತಸದಲ್ಲಿರುವ ʼಆರ್ ಆರ್ ಆರ್ʼ ಚಿತ್ರ ತಂಡ ಇದೀಗ ಆಸ್ಕರ್ ಗೆ ನಾಮಿನೇಟ್ ಆಗಿ ಪ್ರೇಕ್ಷಕರ ಗಮನ ತನ್ನತ್ತ ಸೆಳೆದಿದೆ. ಒಂದು ವೇಳೆ ಆಸ್ಕರ್ ನಲ್ಲಿ ಪ್ರಶಸ್ತಿ ಗೆದ್ದರೆ ʼಆರ್ ಆರ್ ಆರ್ʼ ಮತ್ತೊಂದು ಇತಿಹಾಸ ಬರೆಯೋದು ಖಂಡಿತ.
ಇತ್ತೀಚೆಗೆ ರಾಜಮೌಳಿ ಹಾಲಿವುಡ್ ನಲ್ಲಿ ಮಾಸ್ಟರ್ ಆಫ್ ಸ್ಟೋರಿ ಟೆಲ್ಲಿಂಗ್ ಎಂದೇ ಖ್ಯಾತರಾಗಿರುವ ನಿರ್ದೇಶಕ ಸ್ಟೀವನ್ ಸ್ಪೀಲ್ಬರ್ಗ್ ಅವರನ್ನು ಭೇಟಿಯಾಗಿದ್ದರು. ಆದಾದ ಬಳಿಕ ʼಅವತಾರ್ʼ ಸರಣಿಯ ನಿರ್ದೇಶಕ ಜೇಮ್ಸ್ ಕ್ಯಾಮೆರಾನ್ ಅವರನ್ನು ಭೇಟಿಯಾಗಿದ್ದರು.
ಈ ವೇಳೆ ಸಿನಿಮಾದ ಬಗ್ಗೆ ಜೇಮ್ಸ್ ಕ್ಯಾಮೆರಾನ್ ಅವರು ಆರ್ ಆರ್ ಆರ್ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದರು. ʼಆರ್ ಆರ್ ಆರ್ʼ ಸಿನಿಮಾವನ್ನು ಎರಡು ಬಾರಿ ನೋಡಿದ್ದೇನೆ ಎಂದು ಹೇಳಿದ್ದರು.
ಇದನ್ನೂ ಓದಿ: “ರಿಷಬ್ ʼಕಾಂತಾರ-2” ಕಥೆ ಬರೆಯುತ್ತಿದ್ದಾರೆ.. ಬಿಗ್ ಅಪ್ಡೇಟ್ ಕೊಟ್ಟ ವಿಜಯ್ ಕಿರಗಂದೂರು
ಹಾಲಿವುಡ್ ನಲ್ಲಿ ದಿಗ್ಗಜ ನಿರ್ದೇಶಕರಲ್ಲಿ ಒಬ್ಬರಾಗಿರುವ ಜೇಮ್ಸ್ ಕ್ಯಾಮೆರಾನ್ ರಾಜಮೌಳಿ ಅವರೊಂದಿಗೆ ʼಆರ್ ಆರ್ ಆರ್ʼ ಬಗ್ಗೆ ಮಾತನಾಡುತ್ತಾ “ಒಂದು ವೇಳೆ ನೀವು ಸಿನಿಮಾ ಮಾಡಲು ಬಯಸಿದರೆ ಖಂಡಿತ ಅಲ್ಲಿ (ಭಾರತದಲ್ಲಿ) ಸಿನಿಮಾ ಮಾಡುವ ಎಂದು ಜೇಮ್ಸ್ ಕ್ಯಾಮೆರಾನ್ ಹೇಳಿದ್ದಾರೆ.
ಅವರು ಮಾತನಾಡಿರುವ ತುಣುಕನ್ನು ʼಆರ್ ಆರ್ ಆರ್ʼ ಸಿನಿಮಾ ತಂಡ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.
ರಾಜಮೌಳಿ ಸದ್ಯ ಮಹೇಶ್ ಬಾಬು ಅವರ ‘SSMB29’ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ.