Advertisement
ಭೂಕಂಪದ ತೀವ್ರತೆಗೆ ಹಲವು ಹಳ್ಳಿಗಳೇ ನಿರ್ನಾಮಗೊಂಡಿದ್ದು, ಅವಶೇಷಗಳಡಿ ಸಿಲುಕಿರುವವರಿಗಾಗಿ ಶೋಧ ಕಾರ್ಯ ನಡೆದಿದೆ. ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ. ಚೀನಾದ ಸ್ವಾಯತ್ತ ಪ್ರದೇಶವಾದ ಟಿಂಗ್ರಿ ಕೌಂಟಿಯ ಶಿಗಾತ್ಸೆ ನಗರ ಸಮೀಪದ ಸೇಗೋ ಟೌನ್ಶಿಪ್ನಲ್ಲಿ ಭೂಕಂಪದ ಕೇಂದ್ರ ಬಿಂದು ವರದಿಯಾಗಿದೆ. ಈ ಪ್ರದೇಶದಿಂದ 20 ಕಿ.ಮೀ.ವ್ಯಾಪ್ತಿಯಲ್ಲೇ 6,900ಕ್ಕೂ ಅಧಿಕ ಮಂದಿ ವಾಸವಿದ್ದು, ಅಪಾರ ಪ್ರಮಾಣದ ಆಸ್ತಿ ಹಾನಿಯಾಗಿದೆ. ಮನೆಗಳು, ಕಟ್ಟಡಗಳು ನೆಲಸಮವಾಗಿದ್ದರೆ. ರಸ್ತೆ ಬದಿಯಲ್ಲಿದ್ದ ಕಾರುಗಳು ನಿಂತಲ್ಲೇ ಹೂತು ಹೋಗಿವೆ.
ಶಿಗಾತ್ಸೆ ಭಾರತದ ಗಡಿಗೆ ಸಮೀಪವಿರುವ ಪ್ರದೇಶ. ಟಿಬೆಟ್ನ ಪುಣ್ಯಭೂಮಿ ಎಂದೂ ಖ್ಯಾತಿ ಪಡೆದಿದ್ದು, ಅತಿ ಹೆಚ್ಚು ಪ್ರವಾಸಿಗರು ಭೇಟಿ ನೀಡುವ ಸ್ಥಳವೂ ಆಗಿದೆ.
Related Articles
ಭಾರತದ ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ ಸೇರಿ ದಂತೆ ಉತ್ತರ ಭಾರ ತದ ಹಲವೆಡೆ ಕಂಪನದ ಅನುಭವವಾಗಿದೆ. ಜತೆಗೆ ನೇಪಾಳದ ಸಿಂಧುಪಾಲಂಚೋಕ್ ಧಾಂಡಿಂಗ್ ಹಾಗೂ ಸೋಲುಖುಂಬು ಜಿಲ್ಲೆಗಳಲ್ಲಿ ಪ್ರಬಲ ಭೂಕಂಪನದ ಅನುಭವ ಆಗಿದೆ. ರಾಜಧಾನಿ ಕಠ್ಮಂಡುವಿನಲ್ಲೂ ಜನರು ಮನೆಗಳಿಂದ ಹೊರಗೆ ಓಡಿಬಂದಿದ್ದಾರೆ. ಭೂಕಂಪದ ಕೇಂದ್ರಬಿಂದುವಿನಿಂದ 400 ಕಿ.ಮೀ.ದೂರದಲ್ಲಿರುವ ನೇಪಾಳಾದ ಕಿಮಾತಾಂಕಾ ಎಂಬಲ್ಲಿ ಕಲ್ಲಿನಿಂದ ನಿರ್ಮಿಸಲಾದ 2 ಅಂತಸ್ತಿನ ಕಟ್ಟಡ ಹಾನಿಗೊಳಗಾಗಿದೆ.
Advertisement
A massive earthquake of 7.1 magnitude struck the Tibet-Nepal border, till now more than 30 people reported dead many injured…more updates awaited #Tibet #nepal #earthquake pic.twitter.com/qFTXX9ukwC
— Surabhi Tiwari Rathi🇮🇳 (@surabhi_tiwari_) January 7, 2025
ಮುಂಜಾನೆ ಕಣ್ಣು ಬಿಡುವ ಮುಂಚೆಯೇ ಭೂಕಂಪ ಸಂಭವಿಸಿ ಮನೆಗಳು ನೆಲಕ್ಕುರುಳುತ್ತಿರುವ ಅತ್ಯಂತ ಭೀಕರ ಸನ್ನಿವೇಶಕ್ಕೆ ಟಿಬೆಟ್ ಜನತೆ ಸಾಕ್ಷಿಯಾಗಿದ್ದಾರೆ. ಮನೆಗಳಲ್ಲಿನ ವಸ್ತು ಗಳು, ಹಲವೆಡೆ ಸೂಪರ್ ಮಾರ್ಕೆಟ್ಗಳಲ್ಲಿ ವಸ್ತುಗಳು ತಾನಾಗೆ ಉರುಳಿ ಬಿದ್ದಿವೆ. ಹಲವು ಸನ್ನಿವೇಶಗಳನ್ನು ನೆಟ್ಟಿಗರು ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, 2015ರ ಬಳಿಕ ಸುದೀರ್ಘ 1 ನಿಮಿಷ ಕಾಲ ಅನುಭವಕ್ಕೆ ಬಂದ ಮೊದಲ ಭೂಕಂಪನ ಇದೇ ಎಂದೂ ಅಭಿಪ್ರಾಯಪಟ್ಟಿದ್ದಾರೆ. ಎವರೆಸ್ಟ್ ವೀಕ್ಷಣಾ ಸ್ಥಳಕ್ಕೆ ಚೀನಾ ನಿರ್ಬಂಧ
ಭೂಕಂಪ ಹಿನ್ನೆಲೆಯಲ್ಲಿ ಚೀನಾ ತನ್ನ ಬದಿಯಲ್ಲಿರುವ ಎವರೆಸ್ಟ್ ಶಿಖರದ ರಮಣೀಯ ದೃಶ್ಯ ವೀಕ್ಷಣಾ ಸ್ಥಳವಾದ “ಮೌಂಟ್ ಕೋಮಾಲಾಂಗ್ಮಾಗೆ’ ಪ್ರವೇಶ ನಿರ್ಬಂಧಿಸಿದೆ. ಇಲ್ಲಿಗೆ ಸಾವಿರಾರು ಪ್ರವಾಸಿಗರು ಭೇಟಿ ನೀಡುತ್ತಾರೆ. ಅವರ ಹಿತದೃಷ್ಟಿಯಿಂದ ಪ್ರವೇಶ ರದ್ದುಗೊಳಿಸಿದ್ದಾಗಿ ಆಡಳಿತ ಹೇಳಿದೆ.