Advertisement

Sandalwood; ಡಬ್ಬಿಂಗ್ ಮುಗಿಸಿದ ‘ಜಲಂಧರ’

06:33 PM Sep 24, 2023 | Team Udayavani |

ಜಲಂಧರ ಚಿತ್ರತಂಡ ಮಾತಿನ ಡಬ್ಬಿಂಗ್‌ ಪೂರ್ಣಗೊಳಿಸಿದ ಖುಷಿಯಲ್ಲಿದ್ದಾರೆ. ಸ್ಟೇಪ್‌ ಅಪ್‌ ಲೋಕೇಶ್‌ ನಟಿಸಿ, ಕತೆ ಬರೆದು ಸ್ಟೇಪ್‌ ಅಪ್‌ ಪಿಚ್ಚರ್‌ ಬ್ಯಾನರ್‌ನಲ್ಲಿ ನಿರ್ಮಾಣ ಮಾಡುತ್ತಿರುವ ಜಲಂಧರ ಚಿತ್ರಕ್ಕೆ ಮದನ್‌ ಎಸ್‌, ಚಂದ್ರ ಮೋಹನ್‌ ಸಿ ಎಲ್, ರಮೇಶ್‌ ರಾಮಚಂರ್ದ ಹಾಗೂ ಪದ್ಮನಾಭನ್‌ ಹಣ ಹಾಕಿ ಕೈ ಜೋಡಿಸಿದ್ದಾರೆ. ಹಲವು ಚಿತ್ರಗಳಲ್ಲಿ ಸಹ ನಿರ್ದೇಶಕರಾಗಿ ಕೆಲಸ ಮಾಡಿ ಮೊದಲ ಬಾರಿಗೆ ವಿಷ್ಣು ವಿ ಪ್ರಸನ್ನ ನಿರ್ದೇಶನ ಮಾಡಿದ್ದಾರೆ.

Advertisement

ರಶ್ಮಿತ್‌ ಕುಮಾರ್‌ ನಿರ್ಮಾಣ ನಿರ್ವಹಣೆಯ ಕಾರ್ಯವನ್ನು ವಹಿಸಿಕೊಂಡಿದ್ದು ಇನ್ನು ಚಿತ್ರಕ್ಕೆ ನುರಿತ ಸಂಕಲನಕಾರ ವೆಂಕಿ ಕತ್ತರಿ ಹಾಕಿದ್ದಾರೆ. ಕೇರಳ ಮೂಲದ ಛಾಯಾಗ್ರಹಕರಾದ ವಿದ್ಯಾಶಂಕರ್‌ ಮತ್ತು ಸರಿನ್‌ ರವೀಂದ್ರನ್‌ ಚಿತ್ರದಲ್ಲಿ ಕೆಲಸ ಮಾಡಿದ್ದಾರೆ.

ಯುವ ಸಂಗೀತ ನಿರ್ದೇಶಕ ಜತಿನ್‌ ದರ್ಶನ್‌ ಸಂಗೀತ ನೀಡಿರುವ ಜಲಂಧರ ಚಿತ್ರದಲ್ಲಿ ಸಹ ನಿರ್ದೇಶಕನಾಗಿ ಅಕ್ಷಯ್‌ ಕುಮಾರ್‌ ಕೆಲಸ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next