Advertisement

ಬದ್ಗಾಮ್ ನಲ್ಲಿ ಜೈಶ್ ಉಗ್ರ ತಾರಿಕ್ ಅಹ್ಮದ್ ಭಟ್ ಬಂಧನ

01:23 PM Dec 10, 2020 | keerthan |

ಬದ್ಗಾಮ್ (ಜಮ್ಮು ಕಾಶ್ಮೀರ): ಜೈಶ್ ಎ ಮೊಹಮ್ಮದ್ ಸಂಘಟನೆಯ ಉಗ್ರ ತಾರಿಕ್ ಅಹ್ಮದ್ ಭಟ್ ನನ್ನಿ ಜಮ್ಮು ಕಾಶ್ಮೀರ ಪೊಲೀಸರು ಬುಧವಾರ ರಾತ್ರಿ ಬಂಧಿಸಿದ್ದಾರೆ. ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದ ಸಂದರ್ಭದಲ್ಲಿ ಉಗ್ರನನ್ನು ಸೆರೆ ಹಿಡಿಯಲಾಗಿದೆ ಎಂದು ವರದಿಗಳು ತಿಳಸಿದೆ.

Advertisement

ಈ ಬಗ್ಗೆ ಕಾಶ್ಮೀರ್ ಜೋನ್ ಪೊಲೀಸರು ಟ್ವೀಟರ್ ನಲ್ಲಿ ಸ್ಪಷ್ಟಪಡಿಸಿದ್ದು, ಸಕ್ರಿಯವಾಗಿದ್ದ ಉಗ್ರ ತಾರಿಕ್ ಅಹ್ಮದ್ ಭಟ್ ನನ್ನು ಬಂಧಿಸಲಾಗಿದೆ. ಬದ್ಗಾಮ್ ನಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾಗ ಈತನನ್ನು ಸೆರೆಹಿಡಿಯಲಾಗಿದೆ ಎಂದಿದೆ.

ಬಂಧಿತ ಉಗ್ರನಿಂದ ಪಿಸ್ತೂಲು ಮತ್ತು ಮದ್ದುಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ.

ಇದನ್ನೂ ಓದಿ:ತನ್ನ ಕೈಯಿಂದ ಹಣ ಕಿತ್ತು ಓಡುತ್ತಿದ್ದ ಕಳ್ಳನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ ವೃದ್ಧೆ

ಜಮ್ಮು ಕಾಶ್ಮೀರದ ಪುಲ್ವಾಮ ಜಿಲ್ಲೆಯ ಟಿಕೆನ್ ಪ್ರದೇಶದಲ್ಲಿ ಇಬ್ಬರು ಭಯೋತ್ಪಾದಕರನ್ನು ಬುಧವಾರ ನಸುಕಿನ ವೇಳೆ ಭದ್ರತಾಪಡೆಗಳು ಹೊಡೆದುರುಳಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next