Advertisement

ಗೋಹತ್ಯೆ: ಇಂದಿರಾ ಕಾಲದಲ್ಲೂ ಸಿಕ್ಕಿರಲಿಲ್ಲ ವರದಿ!

02:35 PM Jun 12, 2017 | Karthik A |

ಹೊಸದಿಲ್ಲಿ: ಗೋಹತ್ಯೆ ನಿಷೇಧ ಕುರಿತ ಚರ್ಚೆ ಇಂದು ನಿನ್ನೆಯದಲ್ಲ. ಸುಮಾರು ಐವತ್ತು ವರ್ಷಗಳಿಂದಲೂ ಇದೆ. ಹಿಂದೆ ಪ್ರಧಾನಿ ಇಂದಿರಾ ಗಾಂಧಿಯವರು ನೇಮಿಸಿದ್ದ ಸಮಿತಿಗೂ ಈ ಬಗ್ಗೆ ತೀರ್ಮಾನಕ್ಕೆ ಬರಲಾಗಿಲ್ಲ. ಅಚ್ಚರಿ ಎಂದರೆ ಇದರಲ್ಲಿ ಆರೆಸ್ಸೆಸ್‌ನ ಮುಖ್ಯಸ್ಥರಾಗಿದ್ದ ಗೋಳ್ವಲ್ಕರ್‌ ಅವರೂ ಇದ್ದರು! ಕಾಂಗ್ರೆಸ್‌ ನೇತಾರ ಜೈರಾಂ ರಮೇಶ್‌ ಅವರು ಇಂದಿರಾ ಗಾಂಧಿ ಕುರಿತಂತೆ ಹೊಸ ಪುಸ್ತಕ ಬರೆದಿದ್ದು, ಇದರಲ್ಲಿ, ಈ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ. ಈ ಪುಸ್ತಕವನ್ನು ಇಂದಿರಾ ಅವರ ಜನ್ಮಶತಮಾನೋತ್ಸವ ನಿಮಿತ್ತ ಬಿಡುಗಡೆ ಮಾಡಲಾಗಿದೆ.

Advertisement

1966, ನ.7ರಂದು ಸಾಧುಗಳು ಸಂಸತ್ತಿನ ಮೇಲೆ ದಾಳಿ ಮಾಡಿದ್ದು, ಗೋಹತ್ಯೆ ನಿಷೇಧಕ್ಕೆ ಆಗ್ರಹಿಸಿದ್ದರು. ಅದರಂತೆ, ಇಂದಿರಾ ಅವರ ಸರಕಾರ ಶಂಕರಾಚಾರ್ಯ ಪರಂಪರೆಯ ಪ್ರಮುಖ ಯತಿಗಳು, ಹಿಂದೂ ನಾಯಕರು, ಆರೆಸ್ಸೆಸ್‌ ಸರಸಂಘ ಚಾಲಕ ಗೋಳ್ವಲ್ಕರ್‌, ಡಾ| ವಿ.ಕುರಿಯನ್‌ ಮುಂತಾದವರಿದ್ದ, ಎ.ಕೆ.ಸರ್ಕಾರ್‌ ನೇತೃತ್ವದಲ್ಲಿ ಸಮಿತಿ ನೇಮಕ ಮಾಡಿತ್ತು. 6 ತಿಂಗಳಲ್ಲಿ ವರದಿ ನೀಡುವಂತೆ ಸೂಚಿಸಿತ್ತು. ಆದರೆ, ಬರೋಬ್ಬರಿ 12 ವರ್ಷಗಳ ಕಾಲ ಅಸ್ತಿತ್ವದಲ್ಲಿದ್ದ ಈ ಸಮಿತಿ, ಗೋಹತ್ಯೆ ನಿಷೇಧ ಕುರಿತಂತೆ ಏನೊಂದೂ ವರದಿ ಕೊಟ್ಟಿರಲಿಲ್ಲ! 1979ರಲ್ಲಿ ಮೊರಾರ್ಜಿ ದೇಸಾಯಿ ಸರಕಾರ ಈ ಸಮಿತಿಯನ್ನು ಬರ್ಖಾಸ್ತುಗೊಳಿಸಿತ್ತು. 1996ರಲ್ಲಿ ಸಾವಿರಕ್ಕೂ ಮಿಕ್ಕು ಸಾಧುಗಳು, ಕೇಸರಿ ಪಡೆ ಯವರು ಸಂಸತ್‌ಗೆ ನುಗ್ಗಿ ಕೂಡಲೇ ಗೋಹತ್ಯೆ ನಿಷೇಧ ಕಾಯ್ದೆ ಜಾರಿಗೆ ಒತ್ತಾಯಿಸಿದ್ದರು. ಈ ವೇಳೆ ಹಲವರು ಪೊಲೀಸ್‌ ಗುಂಡಿಗೆ ಬಲಿಯಾಗಿದ್ದರು. ಕೂಡಲೇ ಇಂದಿರಾ ಅವರು ಗೃಹ ಸಚಿವ ಗುಲ್ಜರಿ ಲಾಲ್‌ ನಂದಾರ ರಾಜೀನಾಮೆ ಪಡೆದು ಹಿಂದೂಗಳ ಸಮಾಧಾನಕ್ಕೆ ಮುಂದಾಗಿದ್ದರು ಎಂದಿದ್ದಾರೆ ಜೈರಾಂ .

Advertisement

Udayavani is now on Telegram. Click here to join our channel and stay updated with the latest news.

Next