ಹೊಸದಿಲ್ಲಿ: ತಮ್ಮ ದೇಶದ ನಾಯಕಿ ಸ್ಥಾನದಿಂದ ಕೆಳಗಿಳಿಯುವುದಾಗಿ ಘೋಷಿಸಿರುವ ನ್ಯೂಜಿಲೆಂಡ್ ಪ್ರಧಾನಿ ಜಸಿಂಡಾ ಆರ್ಡರ್ನ್ ಅವರ ನಡೆಯನ್ನು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಶ್ಲಾಘಿಸಿದ್ದಾರೆ. ಅಲ್ಲದೆ ‘ಭಾರತದ ರಾಜಕೀಯಕ್ಕೆ ಅವರಂತಹವರು ಬೇಕು’ ಎಂದು ಹೇಳಿದ್ದಾರೆ.
ಫೆಬ್ರವರಿ 7 ತನ್ನ ಕಚೇರಿಯಲ್ಲಿ ಕೊನೆಯ ದಿನವಾಗಿರುತ್ತದೆ ಎಂದು ಆರ್ಡರ್ನ್ ನೇಪಿಯರ್‌ನಲ್ಲಿ ಸುದ್ದಿಗಾರರಿಗೆ ತಿಳಿಸಿದರು. ಅಕ್ಟೋಬರ್ 14 ರಂದು ನಡೆಯಲಿರುವ ಸಾರ್ವತ್ರಿಕ ಚುನಾವಣೆಯವರೆಗೆ ಅವರು ಶಾಸಕರಾಗಿ ಮುಂದುವರಿಯಲಿದ್ದಾರೆ.
ಇದನ್ನೂ ಓದಿ:ಬಂಟ್ವಾಳದಲ್ಲೊಂದು ಅನುಮಾನಸ್ಪದ ಕಾರು ಪತ್ತೆ; ಸ್ಯಾಂಟ್ರೋ ರವಿ ಕಾರು ಶಂಕೆ
” ವೃತ್ತಿಜೀವನದ ಉತ್ತುಂಗದಲ್ಲಿ ನಿವೃತ್ತಿ ಹೊಂದುವ ಬಗ್ಗೆ ಲೆಜೆಂಡರಿ ಕ್ರಿಕೆಟ್ ಕಾಮೆಂಟೇಟರ್ ವಿಜಯ್ ಮರ್ಚೆಂಟ್ ಅವರು ಒಮ್ಮೆ ಹೇಳಿದ್ದರು. ಯಾಕೆ ಹೋಗುತ್ತಿಲ್ಲ ಎನ್ನುವ ಬದಲು ಯಾಕೆ ಬಿಟ್ಟು ಹೋಗುತ್ತಿದ್ದಾರೆ ಎಂದು ಜನ ಕೇಳುವಂತಾಗಬೇಕು. ಆಗ ವಿದಾಯ ಹೇಳಬೇಕು. ಇದರಂತೆ, ಕಿವೀಸ್ ಪಿಎಂ ಜಸಿಂಡಾ ಅರ್ಡರ್ನ್ ಅವರು ಪ್ರಧಾನಿ ಹುದ್ದೆ ತ್ಯಜಿಸುತ್ತಿರುವುದಾಗಿ ಹೇಳಿದ್ದಾರೆ. ಭಾರತೀಯ ರಾಜಕೀಯಕ್ಕೆ ಅವಳಂತಹ ಹೆಚ್ಚಿನವರು ಬೇಕು” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ರಮೇಶ್ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.
ಕೋವಿಡ್ ಸೋಂಕು ಎದುರಿಸುವಲ್ಲಿ ಜೆಸಿಂಡಾ ಅರ್ಡರ್ನ್ ಅವರ ನಡೆಯ ಬಗ್ಗೆ ಅಂತಾರರಾಷ್ಟ್ರೀಯ ಮಟ್ಟದಲ್ಲಿ ಮನ್ನಣೆ ಪಡೆಯುದಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಅವರು ಮತ್ತು ಅವರ ಪಕ್ಷದ ಜನಪ್ರಿಯತೆ ಕುಸಿದಿತ್ತು.