Advertisement

ವೆಸ್ಟ್ ಇಂಡೀಸ್ ತಂಡದಲ್ಲಿ 17ರ ಹರೆಯದ ಜೇಡನ್‌ ಸೀಲ್ಸ್‌

05:04 PM Jun 06, 2021 | Team Udayavani |

ಪೋರ್ಟ್‌ ಆಫ್ ಸ್ಪೇನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಎರಡು ಪಂದ್ಯಗಳ ಟೆಸ್ಟ್‌ ಸರಣಿಗಾಗಿ ವೆಸ್ಟ್‌ ಇಂಡೀಸ್‌ 17 ಕ್ರಿಕೆಟಿಗರ ಸಂಭಾವ್ಯ ತಂಡ ಪ್ರಕಟಿಸಿದೆ. ಇದರಲ್ಲಿ ಯುವ ವೇಗಿ ಜೇಡನ್‌ ಸೀಲ್ಸ್‌ ಅವರಿಗೆ ಸ್ಥಾನ ನೀಡಲಾಗಿದೆ.

Advertisement

ಜೂನ್‌ 10ರಿಂದ ಈ ಟೆಸ್ಟ್‌ ಸರಣಿ ಆರಂಭವಾಗಲಿದ್ದು, ಸೋಮವಾರ ತಂಡದ ಆಟಗಾರರ ಸಂಖ್ಯೆಯನ್ನು 13ಕ್ಕೆ ಇಳಿಸುವ ನಿರೀಕ್ಷೆಯಿದೆ.

“ಗಾಯದ ಕಾರಣ ವೇಗಿ ಕೆಮರ್‌ ಹೋಲ್ಡರ್‌ ಆಯ್ಕೆಗೆ ಲಭ್ಯರಿಲ್ಲ. ಹೀಗಾಗಿ ಸಂಭಾವ್ಯ ತಂಡದಲ್ಲಿ ಮೊದಲ ಬಾರಿಗೆ 19ರ ಹರೆಯದ ವೇಗಿ ಜೇಡನ್‌ ಸೀಲ್ಸ್‌ಗೆ ಅವಕಾಶ ನೀಡಲಾಗಿದೆ’ ಎಂದು “ಕ್ರಿಕೆಟ್‌ ವೆಸ್ಟ್‌ ಇಂಡೀಸ್‌’ ಪ್ರಕಟನೆಯಲ್ಲಿ ತಿಳಿಸಿದೆ

Advertisement

Udayavani is now on Telegram. Click here to join our channel and stay updated with the latest news.

Next