Advertisement

ಹುಟ್ಟುಹಬ್ಬದ ಸಂಭ್ರಮದಲ್ಲಿ ಜಗ್ಗೇಶ್: ಬರ್ತ್‌ಡೇಗೆ ‘ತೋತಾಪುರಿ’ಪೋಸ್ಟರ್‌ ಗಿಫ್ಟ್

09:53 AM Mar 17, 2021 | Team Udayavani |

ಬೆಂಗಳೂರು: ನವರಸ ನಾಯಕ ಜಗ್ಗೇಶ್‌ ಇಂದು ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಕೋವಿಡ್‌ ಎರಡನೇ ಆತಂಕ ದಟ್ಟವಾಗಿರುವುದರಿಂದ ಜಗ್ಗೇಶ್‌ ಈ ಬಾರಿ ಸರಳವಾಗಿ ತಮ್ಮ ಜನ್ಮದಿನವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಇನ್ನು ಜಗ್ಗೇಶ್‌ ಬರ್ತ್‌ಡೇ ಪ್ರಯುಕ್ತ “ತೋತಾಪುರಿ’ ಚಿತ್ರತಂಡ ಚಿತ್ರದ ಪೋಸ್ಟರ್‌ ಬಿಡುಗಡೆ ಮಾಡಲು ಪ್ಲಾನ್‌ ಮಾಡಿಕೊಂಡಿದೆ.

Advertisement

“ಸುರೇಶ್‌ ಆರ್ಟ್ಸ್ ಪ್ರೈ. ಲಿ’ ಬ್ಯಾನರ್‌ನಲ್ಲಿ ಕೆ. ಎ ಸುರೇಶ್‌ ನಿರ್ಮಿಸುತ್ತಿರುವ “ತೋತಾಪುರಿ’ ಚಿತ್ರಕ್ಕೆ ವಿಜಯ್‌ ಪ್ರಸಾದ್‌ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ಚಿತ್ರಕ್ಕೆ ನಿರಂಜನ್‌ ಬಾಬು ಛಾಯಾ ಗ್ರಹಣ, ಸುರೇಶ್‌ ಅರಸ್‌ ಸಂಕಲನವಿದೆ. ಚಿತ್ರದ ಹಾಡುಗಳಿಗೆ ಜೆ. ಅನೂಪ್‌ ಸೀಳಿನ್‌ ಸಂಗೀತ ಸಂಯೋಜಿಸಿದ್ದಾರೆ.

ಇದನ್ನೂ ಓದಿ: ಪುನೀತ್‌ ಗೆ ಇಂದು ಜನ್ಮದಿನದ ಸಂಭ್ರಮ

“ತೋತಾಪುರಿ’ ಚಿತ್ರದಲ್ಲಿ ಜಗ್ಗೇಶ್‌ ಅವರೊಂದಿಗೆ ನಟ ಧನಂಜಯ್‌ ಕೂಡ ಪ್ರಮುಖ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಅದಿತಿ ಪ್ರಭುದೇವ, ಸುಮನ್‌ ರಂಗನಾಥ್‌, ದತ್ತಣ್ಣ ಮೊದಲಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಸದ್ಯ “ತೋತಾಪುರಿ’ ಚಿತ್ರದ ಪೋಸ್ಟ್‌ ಪ್ರೊಡಕ್ಷನ್‌ ಕೆಲಸಗಳಲ್ಲಿ ನಿರತವಾಗಿರುವ ಚಿತ್ರತಂಡ, ಏಪ್ರಿಲ್‌ – ಮೇ ವೇಳೆಗೆ ಚಿತ್ರವನ್ನು ಪ್ರೇಕ್ಷಕರ ಮುಂದೆ ತರುವ ಯೋಚನೆಯಲ್ಲಿದೆ.

ಇದರ ನಡುವೆಯೇ ಜಗ್ಗೇಶ್‌-ಗುರುಪ್ರಸಾದ್‌ ಕಾಂಬಿನೇಷನ್‌ನಲ್ಲಿ ರಂಗನಾಯಕ ಚಿತ್ರ ಕೂಡ ಬರಲಿದ್ದು, ವಿಖ್ಯಾತ್‌ ಈ ಸಿನಿಮಾದ ನಿರ್ಮಾಪಕರು. ಈ ಚಿತ್ರದ ಮೇಲೆ ನಿರೀಕ್ಷೆ ಹೆಚ್ಚಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next