Advertisement

ಪ್ರಾಚೀನ ಆಚರಣೆಗಳ ಹಿಂದೆ ಜಗತ್‌ ಕಲ್ಯಾಣದ ಸಂಕಲ್ಪ: ಶ್ರೀಪಾದ ನಾಯಕ್‌

01:00 AM Feb 26, 2019 | Team Udayavani |

ಕುಂಬಳೆ : ಭಾರತದ  ಪ್ರಾಚೀನ ಆಚರಣೆಗಳ ಹಿಂದೆ ಜಗತ್‌ ಕಲ್ಯಾಣದ ಸಂಕಲ್ಪ ಅಡಗಿದೆ. ಆ ಕಾರಣದಿಂದ ವಿಶಾಲ, ಪ್ರಾಚೀನ ಈ ಪರಂಪರೆ ಇಷ್ಟು ಸುಧೀರ್ಘ‌ ಕಾಲ ಬೆಳೆದುಬಂದಿದೆ. ರಾಷ್ಟ್ರವನ್ನು ಮತ್ತು ಜಗದ್ಗುರುವಾಗಿಸುವ ಕನಸಿಗೆ ಪ್ರೇರಣೆಯಾಗಿ ಮತ್ತೆ ಪ್ರಾಚೀನ ಸದಾಶಯದ ಆಚರಣೆಗಳನ್ನು ನೆನಪಿಸುವ ಚಟುವಟಿಕೆಗಳಾಗಬೇಕು. ಕೊಂಡೆವೂರು ಆಶ್ರಮದ ಮೂಲಕ ಈ ಯತ್ನಕ್ಕೆ ತೊಡಗಿಸಿಕೊಂಡಿರುವುದು ಭರವಸೆ ಮೂಡಿಸಿದೆ ಎಂದು ಕೇಂದ್ರ ಆಯುಷ್‌ ಖಾತೆ ಸಚಿವ ಶ್ರೀಪಾದ ಎಸೊÕà ನಾಯಕ್‌ ಹೇಳಿದರು. ಕೊಂಡೆವೂರು ಶ್ರೀ ನಿತ್ಯಾನಂದ ಯೋಗಾಶ್ರಮದಲ್ಲಿ ಲೋಕಕಲ್ಯಾಣಾರ್ಥವಾಗಿ ಜರಗಿದ ಅರುಣ ಕೇತುಕ ಚಯನಪೂರ್ವಕ ವಿಶ್ವಜಿತ್‌ ಅತಿರಾತ್ರ ಸೋಮಯಾಗದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

Advertisement

ದೇಶದ ಪ್ರತಿ ಮನೆಗಳಲ್ಲೂ ಪ್ರಾಚೀನ ಕಾಲದಲ್ಲಿ ಯಾಗಗಳು ನಡೆಯುತ್ತಿದ್ದವು.ಇದರ ಪರಿಣಾಮ ವಿದೇಶಿ ರಾಷ್ಟ್ರಗಳು ಭರತಖಂಡದ ಆಧ್ಯಾತ್ಮಿಕ ಪ್ರಭೆಗೆ ಮರುಳಾಗಿದ್ದವು. ಆದರೆ ಆಧುನಿಕ ತಂತ್ರ ಜ್ಞಾನದ ವಿಸ್ಮತಿಗೊಳಗಾಗಿರುವ ಯುವ ಸಮೂಹಕ್ಕೆ ಮತ್ತೆ ಪರಂಪರೆಯನ್ನು ಪರಿಚಯಿಸುವ, ಜಾಗತಿಕ ಹಿತದ ಕನಸುಗಳೊಂದಿಗೆ ಕೊಂಡೆವೂರಿನ ಅತಿರಾತ್ರ ಸೋಮಯಾಗ ವಿಶಿಷ್ಟವಾಗಿ ಮೂಡಿಬಂದಿದೆ ಎಂದು ಸಚಿವರು ತಿಳಿಸಿದರು.

ಸಮಾರಂಭದಲ್ಲಿ ಉಪಸ್ಥಿತರಿದ್ದು ಮಾತನಾಡಿದ ಧಾರ್ಮಿಕ ನಾಯಕ, ಕಲ್ಲಡ್ಕ ಶ್ರೀರಾಮ ವಿದ್ಯಾಲಯದ ಸಂಚಾಲಕ ಡಾ| ಪ್ರಭಾಕರ ಭಟ್‌ ಅವರು ಭಾರತವು ಬಲಿಷ್ಠ ರಾಷ್ಟ್ರ. ಇಲ್ಲಿರುವಷ್ಟು ಜ್ಞಾನ ವಿಜ್ಞಾನ ಬೇರೆಡೆ ಇಲ್ಲ. ಆದರೆ ನಮ್ಮಲ್ಲಿನ ಮಾನಸಿಕ ಹಿನ್ನಡೆಯಿಂದಾಗಿ ಹಿಂದುಳಿಯಲು ಕಾರಣವಾಯಿತು. 

Advertisement

Udayavani is now on Telegram. Click here to join our channel and stay updated with the latest news.

Next