Advertisement

“ಪೊಗರು’ಗೆ ಜಗಪತಿ ಬಾಬು ವಿಲನ್‌

05:36 AM Feb 13, 2019 | |

ನಟ ಧ್ರುವ ಸರ್ಜಾ ಅಭಿನಯದ ಬಹುನಿರೀಕ್ಷಿತ “ಪೊಗರು’ ಚಿತ್ರದ ಚಿತ್ರೀಕರಣ ಹೈದರಾಬಾದ್‌ನಲ್ಲಿ ಭರದಿಂದ ನಡೆಯುತ್ತಿದೆ. ಇದರ ನಡುವೆ “ಪೊಗರು’ ಚಿತ್ರದಲ್ಲಿ ಧ್ರುವ ಸರ್ಜಾ ಎದುರು ಖಳ ನಾಯಕನಾಗಿ ಯಾರು ಅಬ್ಬರಿಸುತ್ತಾರೆ ಎನ್ನುವ ಪ್ರಶ್ನೆಗೂ ಈಗ ಉತ್ತರ ಸಿಕ್ಕಿದೆ.

Advertisement

ಹೌದು, ಈ ಬಾರಿ “ಪೊಗರು’ ಹುಡುಗನಾಗಿ ತೆರೆಮೇಲೆ ಬರುತ್ತಿರುವ ಧ್ರುವ ಸರ್ಜಾಗೆ ವಿಲನ್‌ ಆಗಿ ತೆರೆಮೇಲೆ ಬಹುಭಾಷಾ ನಟ ಜಗಪತಿ ಬಾಬು ಮುಖಾಮುಖೀಯಾಗಲಿದ್ದಾರೆ. ಈ ಮೊದಲು “ಪೊಗರು’ ಚಿತ್ರದಲ್ಲಿ ಯಾರು ಖಡಕ್‌ ವಿಲನ್‌ ಆಗುತ್ತಾರೆ ಎಂಬ ಬಗ್ಗೆ ಹಲವು ಹೆಸರುಗಳು ಹರಿದಾಡಿದ್ದರೂ, ಕೊನೆಗೆ ಚಿತ್ರತಂಡ ಜಗಪತಿ ಬಾಬು ಅವರನ್ನು ಚಿತ್ರಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

ಸದ್ಯ ಹೈದರಾಬಾದ್‌ನಲ್ಲಿ ಧ್ರುವ ಸರ್ಜಾ ಮತ್ತು ಜಗಪತಿ ಬಾಬು ಅವರ ನಡುವಿನ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲು ಪ್ಲಾನ್‌ ಮಾಡಿಕೊಂಡಿರುವ ಚಿತ್ರತಂಡ, ಅದಾದ ಬಳಿಕ ಬೆಂಗಳೂರಿಗೆ ವಾಪಾಸಾಗಿ ಬಾಕಿ ಇರುವ ದೃಶ್ಯಗಳನ್ನು ಚಿತ್ರೀಕರಿಸಲಿದೆ.

ಒಟ್ಟಾರೆ ಜಗಪತಿ ಬಾಬು ಎಂಟ್ರಿಯಿಂದಾಗಿ “ಪೊಗರು’ ಚಿತ್ರದ ಖದರ್‌ ಮತ್ತಷ್ಟು ಹೆಚ್ಚಿದ್ದು, ಚಿತ್ರದಲ್ಲಿ ದ್ರುವ ಮತ್ತು ಜಗಪತಿ ಬಾಬು ಜುಗಲ್‌ಬಂದಿ ಎಷ್ಟರ ಮಟ್ಟಿಗೆ ವರ್ಕೌಟ್‌ ಆಗಲಿದೆ ಅನ್ನೋದು “ಪೊಗರು’ ತೆರೆಗೆ ಬಂದ ಮೇಲಷ್ಟೇ ಗೊತ್ತಾಗಲಿದೆ. 

Advertisement

Udayavani is now on Telegram. Click here to join our channel and stay updated with the latest news.

Next