Advertisement

ಜಗಜ್ಯೋತಿ ಕಲಾವೃಂದ ಮುಂಬಯಿ ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರದಾನ

12:26 PM Jan 17, 2019 | Team Udayavani |

ಮುಂಬಯಿ: ಜಗಜ್ಯೋತಿ ಕಲಾವೃಂದ ಮುಂಬಯಿ ಇದರ  33 ನೇ ವಾರ್ಷಿಕೋತ್ಸವ ಸಂಭ್ರಮ ಮತ್ತು ವಾರ್ಷಿಕ ಸಾಹಿತ್ಯ ಪ್ರಶಸ್ತಿ ಪ್ರಧಾನ ಸಮಾರಂಭವು ಜ. 13 ರಂದು ಸಂಜೆ ಉಪನಗರ ಡೊಂಬಿವಲಿ ಪಶ್ಚಿಮದ ಠಾಕೂರ್‌ ಸಭಾಗೃಹದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ನಡೆಯಿತು.

Advertisement

ಓಂ ಶಕ್ತಿ ಮಹಿಳಾ ಸಂಸ್ಥೆ ಕಲ್ಯಾಣ್‌ ಇದರ ಕಾರ್ಯಾಧ್ಯಕ್ಷೆ ಮತ್ತು ಬಂಟರ ಸಂಘ ಮುಂಬಯಿ ಇದರ ಮಹಿಳಾ ವಿಭಾಗದ ಗೌರವ ಕಾರ್ಯದರ್ಶಿ ಚಿತ್ರಾ ಆರ್‌. ಶೆಟ್ಟಿ ಇವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಜಗಜ್ಯೋತಿ ಕಲಾ ವೃಂದವು ವಾರ್ಷಿಕವಾಗಿ ಕೊಡಮಾಡುವ ಸ್ವರ್ಗೀಯ ಶ್ರೀಮತಿ ಸುಶೀಲಾ ಎಸ್‌. ಶೆಟ್ಟಿ ಕಥಾ ಪ್ರಶಸ್ತಿಯನ್ನು  ಅತಿಥಿ-ಗಣ್ಯರು ಕ್ರಮವಾಗಿ  ಆಶಾ ಜಗದೀಶ ಗೌರಿಬಿದನೂರು  ಚಿಕ್ಕಬಳ್ಳಾಪುರ ಮತ್ತು ಕಾವ್ಯ ಪ್ರಶಸ್ತಿಯನ್ನು ಸ್ಮಿತಾ ಅಮೃತರಾಜ ಸಂಪಾಜೆ ಕೊಡಗು  ಇವರಿಗೆ ಪ್ರದಾನಿಸಿ ಶುಭಹಾರೈಸಿದರು.

ಕಲಾವೃಂದದ ಅಧ್ಯಕ್ಷ ರಮೇಶ್‌ ಎ. ಶೆಟ್ಟಿ ಅವರು ಮಾತನಾಡಿ, ಮೂರು ದಶಕಗಳ ಹಿಂದೆ ರಾತ್ರಿ ಕಾಲೇಜು ಶಿಕ್ಷಣವನ್ನು ಪಡೆಯುತ್ತಿದ್ದ ವಿದ್ಯಾರ್ಥಿ ಮಿತ್ರರ ತಂಡವೊಂದು ಕನ್ನಡ ಭಾಷೆ, ಸಾಹಿತ್ಯ ಹಾಗೂ ಸಮಾಜಕ್ಕೆ ತಮ್ಮ ಕೊಡುಗೆಯನ್ನು ನೀಡಬೇಕು ಎಂಬ ಉದ್ಧೇಶದಿಂದ ಸ್ಥಾಪಿಸಿದ ಜಗಜ್ಯೊತಿ ಕನ್ನಡವೃಂದವು ಕನ್ನಡ ಮಾಧ್ಯಮಿಕ ಶಾಲಾ ವಿದ್ಯಾರ್ಥಿಗಳಿಗೆ ಅಂತರ್‌ಶಾಲಾ ಪ್ರತಿಭಾ ಸ್ಪರ್ಧೆ,  ಸುಶೀಲಾ ಸೀತಾರಾಮ ಶೆಟ್ಟಿ ಸ್ಮಾರಕ ಫಲಕಕ್ಕಾಗಿ ನಡೆಸುತ್ತಾ ಬಂದಿದೆ. ಹಿರಿಯ ಶಿಕ್ಷಕರನ್ನು ಗೌರವಿಸುವುದು, ಯಕ್ಷಗಾನ ಕಲೆಗೆ ಪ್ರೋತ್ಸಾಹ ನೀಡುವ ಉದ್ಧೇಶದಿಂದ ಪ್ರತೀ ವರ್ಷ ಊರಿನ ಕಲಾವಿದರಿಂದ ತಾಳಮದ್ದಳೆ, ಯಕ್ಷಗಾನ ಕಲಾವಿದರನ್ನು ಸಮ್ಮಾನಿಸುವುದು, ಆರ್ಥಿಕವಾಗಿ ಹಿಂದುಳಿದ ಮಕ್ಕಳಿಗೆ ಶೈಕ್ಷಣಿಕ ನೆರವು, ಅಖೀಲ ಭಾರತ ಮಟ್ಟದಲ್ಲಿ ಕಥಾ ಹಾಗೂ ಕಾವ್ಯ ಪ್ರಶಸ್ತಿಯನ್ನು ಆಯೋಜಿಸುವುದು ಇನ್ನಿತರ ವೈವಿಧ್ಯಮಯ ಕಾರ್ಯಕ್ರಮಗಳಿಂದ ಸಂಸ್ಥೆಯು ಹೆಸರುವಾಸಿಯಾಗಿದೆ. ಸಂಸ್ಥೆಯ ಅಭಿವೃದ್ಧಿಯಲ್ಲಿ ಮಾಜಿ ಅಧ್ಯಕ್ಷರುಗಳು, ಪ್ರಸ್ತುತ ಕಾರ್ಯಕಾರಿ ಸಮಿತಿಯ ಸಹಕಾರವನ್ನು ಮರೆಯುವಂತಿಲ್ಲ. ಕಲಾವೃಂದದ  ನಾಡು-ನುಡಿ ಸೇವೆಗೆ ಎಲ್ಲರ ಸಹಕಾರ ಅಗತ್ಯವಾಗಿದೆ ಎಂದು ನುಡಿದರು.

ಬಂಟರ ಸಂಘ ಮುಂಬಯಿ ಇದರ ಡೊಂಬಿವಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ದಿನೇಶ್‌ ಎನ್‌. ಶೆಟ್ಟಿ, ಅಕ್ಷಯ ಕೋ. ಆಪರೇಟಿವ್‌ ಕ್ರೆಡಿಟ್‌ ಸೊಸೈಟಿಯ ಕಾರ್ಯಾಧ್ಯಕ್ಷ ವಾಸು ಎಸ್‌.ದೇವಾಡಿಗ, ಪ್ರಧಾನ ಅಭ್ಯಾಗತರಾಗಿ ಉಪಸ್ಥಿತ ಬಂಟರ ಸಂಘ ಮುಂಬಯಿ ಇದರ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಧ್ಯಕ್ಷ ಸುಬ್ಬಯ್ಯ ಎ. ಶೆಟ್ಟಿ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪಡುಕುಡೂರು ಜಯಕರ ಶೆಟ್ಟಿ, ಗೌ| ಪ್ರ| ಕಾರ್ಯದರ್ಶಿ ಬಾಬು ಕೆ. ಮೊಗವೀರ, ಕೋಶಾಧಿಕಾರಿ ಚಂದ್ರ ಎನ್‌. ನಾಯ್ಕ, ಜತೆ ಕೋಶಾಧಿಕಾರಿ ಸಂದೀಪ್‌ ಕೋಟ್ಯಾನ್‌, ಸದಾಶಿವ ಶ್ರೀಯಾನ್‌ ಅವರು ಅತಿಥಿಗಳನ್ನು ಗೌರವಿಸಿದರು. ಮಾಜಿ ಅಧ್ಯಕ್ಷ ಸುಕುಮಾರ್‌ ಎನ್‌. ಶೆಟ್ಟಿ ಅವರು ಕಲಾವೃಂದದ 22ನೇ ವಾರ್ಷಿಕ ಪ್ರಶಸ್ತಿಗಳ  ಬಗ್ಗೆ ತಿಳಿಸಿ ಪುರಸ್ಕೃತರನ್ನು ಪರಿಚಯಿಸಿದರು. ಮಾಜಿ ಅಧ್ಯಕ್ಷ  ವಸಂತ್‌ ಎನ್‌. ಸುವರ್ಣ ಕಾರ್ಯಕ್ರಮ ನಿರೂಪಿಸಿ ವಂದಿಸಿದರು. ಜತೆ ಕಾರ್ಯದರ್ಶಿ ತಾರನಾಥ್‌ ಅಮೀನ್‌, ಸ್ಥಾಪಕ ಸದಸ್ಯ ರಾಜು ಆರ್‌. ಸುವರ್ಣ, ಸಂಘಟನಾ ಕಾರ್ಯದರ್ಶಿ ಸಂತೋಷ್‌ ಪಿ. ಶೆಟ್ಟಿ, ಸುರೇಂದ್ರ ನಾಯಕ್‌ ಅತಿಥಿಗಳನ್ನು ಪರಿಚಯಿಸಿದರು. ಕಲಾವೃಂದದ ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು ಸಹಕರಿಸಿದರು.

ಮುಂಬಯಿ ವಾತಾವರಣವೇ ಅತ್ಮೀಯವಾದುದು. ಇಲ್ಲಿನ ಅನ್ಯೋನ್ಯತೆ ಮತ್ತು ಕೌಟುಂಬಿಕ ಪರಿವೆಷ್ಟನೆ  ಸಾಮರಸ್ಯತ್ವದ್ದು. ನಾನು ಸಾಹಿತ್ಯದ ವಾತಾವರಣದಲ್ಲಿ ಬೆಳೆದವಳಲ್ಲ. ಆದರೆ ಸಾಹಿತ್ಯಾಸಕ್ತ ಸಾಧನೆಗಳ ಬಹುಮಾನಗಳೇ ನನ್ನನ್ನು ಬೆಳೆಸಿದೆ. ಮಹಿಳೆಯರಿಗೆ ಇಂತಹ ಪ್ರಶಸ್ತಿಗಳು ಉತ್ತೇಜನ ನೀಡುತ್ತವೆ. ಜಗಜ್ಯೋತಿ ಕಲಾವೃಂದದ ಸಾಹಿತ್ಯಕ ಸೇವೆ ನಿಜವಾಗಿಯೂ ಅನುಪಮವಾಗಿದೆ.
 – ಆಶಾ ಜಗದೀಶ್‌, ಕಥಾ ಪ್ರಶಸ್ತಿ ಪುರಸ್ಕೃತರು

Advertisement

ಕನ್ನಡದ ಮಣ್ಣು ನನ್ನಂತಹ ಕವಯತ್ರಿರ ಕನಸು ನನಸಾಗಿಸಿದೆ. ಕಾವ್ಯಲೋಕದಲ್ಲಿ ಧಕ್ಕಿದ ಅವಕಾಶ, ಅದೃಷ್ಟ ನನ್ನನ್ನು ಬೆಳೆಸಿದೆ. ಮಹಿಳೆಯರು ಮನಸ್ಸು ಮಾಡಿದರೆ ಕನಸುಗಳನ್ನು  ಈಡೇರಿಸುವುದು ತ್ರಾಸದಾಯಕವಲ್ಲ. ಈ ಗೌರವ ಸ್ತ್ರೀಯರ ಸ್ವಮೌಲ್ಯಮಾಪನಕ್ಕೆ ಪ್ರೋತ್ಸಾಹಕರವಾಗಿದೆ.
– ಸ್ಮಿತಾ ಅಮೃತರಾಜ್‌, ಕಾವ್ಯ ಪ್ರಶಸ್ತಿ ಪುರಸ್ಕೃತರು

ಚಿತ್ರ-ವರದಿ : ರೋನ್ಸ್‌ ಬಂಟ್ವಾಳ್‌

Advertisement

Udayavani is now on Telegram. Click here to join our channel and stay updated with the latest news.

Next