ಶೃಂಗೇರಿ: ದಕ್ಷಿಣಾಮ್ನಾಯ ಶಾರದಾ ಪೀಠದ ಕಿರಿಯ ಜಗದ್ಗುರು ಶ್ರೀ ವಿಧುಶೇಖರ ಭಾರತಿ ಸ್ವಾಮೀಜಿಗಳು ವಿಜಯ ಯಾತ್ರೆ ಕೈಗೊಂಡಿದ್ದಾರೆ.
ಜಗದ್ಗುರುಗಳು ಉತ್ತರ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಪ್ರವಾಸ ಮಾಡಲಿದ್ದು, ಶ್ರೀಗಳು ಪಟ್ಟಾಭಿಷಿಕ್ತರಾದ
ನಂತರ 3ನೇ ಬಾರಿಗೆ ವಿಜಯಯಾತ್ರೆ ಕೈಗೊಂಡಿದ್ದಾರೆ.
ಸೋಮವಾರ ಯಾತ್ರೆ ಆರಂಭಿಸಿದ್ದು, 2019ರ ಶಿವರಾತ್ರಿಯಂದು ಆಗಮಿಸಲಿದ್ದಾರೆ. ಕಳೆದ ವರ್ಷ ಶ್ರೀಗಳು ತೆಲಂಗಾಣ, ತಮಿಳುನಾಡು, ಕೇರಳ ರಾಜ್ಯದ ಪ್ರವಾಸ ಕೈಗೊಂಡಿದ್ದರು. ಶೃಂಗೇರಿ ಪೀಠದಿಂದ ಯಾತ್ರೆ ಆರಂಭಿಸುವ ಮುನ್ನ ಸ್ವಾಮೀಜಿಯವರು ಶ್ರೀ ಭಾರತೀತೀರ್ಥ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ಶ್ರೀಗಳ ಯಾತ್ರೆ ವಿವರ: ಸೋಮವಾರ ದಾವಣಗೆರೆ ಜಿಲ್ಲೆಯ ಕರೂರಿನಲ್ಲಿ ವಾಸ್ತವ್ಯ ಮಾಡಲಿದ್ದು, ನ.6 ರಂದು ಹಾವೇರಿ ಜಿಲ್ಲೆಯ ರಾಣೆಬೆನ್ನೂರಿಗೆ ತೆರಳಿ ಮೂರು ದಿನ ವಾಸ್ತವ್ಯ ಮಾಡಲಿದ್ದಾರೆ.
ನ.9 ರಿಂದ 13 ರವರೆಗೆ ಹುಬ್ಬಳ್ಳಿ-ಧಾರವಾಡದಲ್ಲಿ ಇರಲಿದ್ದಾರೆ.ನ.14 ರಂದು ಗದಗ, 15 ರಂದು ಬಾದಾಮಿ, 16 ರಂದು ಇಳಕಲ್, 17 ರಂದು ಬಾಗಲ ಕೋಟೆ, 18 ಸುರಪುರ, 19 ರಂದು ಕಲಬುರಗಿಗೆ ತೆರಳಲಿದ್ದು ಅಲ್ಲಿ ಮೂರು ದಿನ ಇರಲಿದ್ದಾರೆ. 21ಕ್ಕೆ ಗಂಗಾಪುರ, 22ರಂದು ಅಫ್ಜಲ್‌ಪುರ, 23ರಂದು ಸಿಂಧಗಿ, 24ರಂದು ವಿಜಯಪುರ, 26ರಂದು ಬಾಗಲಕೋಟೆ ಜಿಲ್ಲೆ ಜಮಖಂಡಿ, 27ರಂದು ಮುಧೋಳ್, 28ರಿಂದ ಎರಡು ದಿನ ಬೆಳಗಾವಿಯಲ್ಲಿ ಇರಲಿದ್ದಾರೆ.