Advertisement

ಜಾಬ್ರಾ ಎಲೈಟ್‌ 4 ಆ್ಯಕ್ಟಿವ್‌ ಬಿಡುಗಡೆ; 7 ಗಂಟೆ ಬ್ಯಾಟರಿ ಲೈಫ್ ಇರುವ ಇಯರ್‌ಬಡ್‌

08:56 PM Jan 05, 2022 | Team Udayavani |

ಜಾಬ್ರಾ ಸಂಸ್ಥೆಯು ಜಾಬ್ರಾ ಎಲೈಟ್‌ 4 ಆ್ಯಕ್ಟಿವ್‌ ಇಯರ್‌ಬಡ್‌ ಬಿಡುಗಡೆ ಮಾಡಿದೆ. ಅದು ವಿಂಗ್‌ ಫ್ರೀ ಡಿಸೈನ್‌ ಹೊಂದಿದೆ.

Advertisement

ಇದು 7 ತಾಸು ಬ್ಯಾಟರಿ ಲೈಫ್ ನೀಡಬಲ್ಲದು ಎಂದು ಸಂಸ್ಥೆ ಹೇಳಿಕೊಂಡಿದೆ. ಐಪಿ57 ಪ್ರೊಟೆಕ್ಟಿವ್‌ ರೇಟಿಂಗ್‌ ಇದಕ್ಕಿದ್ದು, ಬೆವರು ಮತ್ತು ನೀರಿನಿಂದ ರಕ್ಷಿಸಬಲ್ಲದ್ದಾಗಿದೆ.

ಸ್ಟೀರಿಯೋ ಮೋಡ್‌ ಆಯ್ಕೆಯೂ ಇದರಲ್ಲಿದ್ದು, ಒಂದು ಇಯರ್‌ಬಡ್‌ನ್ನು ಬಾಕ್ಸ್‌ನಲ್ಲಿಟ್ಟು ಒಂದನ್ನು ಮಾತ್ರ ಬಳಕೆ ಮಾಡುವುದಕ್ಕೂ ಅವಕಾಶವಿದೆ.

ನೇವಿ, ಮಿಂಟ್‌ ಮತ್ತು ಕಪ್ಪು ಬಣ್ಣಗಳಲ್ಲಿ ಈ ಇಯರ್‌ಬಡ್‌ ಲಭ್ಯ. ಇದರ ಬೆಲೆ 10,999 ರೂ. ಆನ್‌ಲೈನ್‌ ಮತ್ತು ಆಫ್ ಲೈನ್‌ ಮಾರುಕಟ್ಟೆಗಳಲ್ಲಿ ಇದು ಲಭ್ಯವಿದೆ.

ಇದನ್ನೂ ಓದಿ:ಕೂಲಿ ಕಾರ್ಮಿಕರ ಮೇಲೆ ಗ್ರಾ.ಪಂ. ಅಧ್ಯಕ್ಷೆ‌ಯ ಪತಿಯಿಂದ ದಬ್ಬಾಳಿಕೆ : ರಕ್ಷಣೆ ನೀಡುವಂತೆ ಮನವಿ

Advertisement

 

Advertisement

Udayavani is now on Telegram. Click here to join our channel and stay updated with the latest news.

Next