Advertisement
ಬಿಕೆಎಸ್ ಅಯ್ಯಂಗಾರ್ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ನೇತೃತ್ವದಲ್ಲಿ ಆಯೋಜನೆಗೊಂಡಿರುವ ಈ ಕಾರ್ಯಾಗಾರದಲ್ಲಿ ಚಿಕ್ಕಮಗಳೂರು, ದಕ್ಷಿಣಕನ್ನಡ, ಉತ್ತರಕನ್ನಡ ಮತ್ತು ಉಡುಪಿ ಜಿಲ್ಲೆಯ ಆಸಕ್ತರು ಭಾಗವಹಿಸಬಹುದಾಗಿದೆ.ಯೋಗಾಭ್ಯಾಸದ ಕುರಿತು ಆರಂಭಿಕ ಜ್ಞಾನವುಳ್ಳವರು, ಈಗಾಗಲೇ ಯೋಗಾಭ್ಯಾಸದಲ್ಲಿ ನಿರತರಾಗಿರುವ ಅನುಭವಿಗಳು ಇದರಲ್ಲಿ ಪಾಲ್ಗೊಳ್ಳಬಹುದಾಗಿದೆ. ಪುರುಷರಿಗೆ ಮತ್ತು ಮಹಿಳೆಯರಿಗೆ ಮುಕ್ತ ಅವಕಾಶವಿದೆ. “ಕರೆಕ್ಟ್ ಎಲೈನ್‌ಮೆಂಟ್’ನೊಂದಿಗೆ ಯೋಗಾಸನಗಳ ಪರಿಚಯ, ನಿಖರ ಭಂಗಿ ಮತ್ತು ಉಸಿರಾಟದ ತಂತ್ರಗಳೊಂದಿಗೆ ಪ್ರಾಣಾಯಾಮದ ಮೂಲಪಾಠ, ದೇಹವನ್ನು ಕಾಡುವ ಸಾಮಾನ್ಯ ನೋವುಗಳ ನಿವಾರಣೆಗೆ ಮುಂಜಾಗರೂಕತೆ, ಯೋಗಾಭ್ಯಾಸದ ಸಮಸ್ಯೆಗಳ ಕುರಿತ ಪ್ರಶ್ನೋತ್ತರ- ಹೀಗೆ ಹಲವು ಕಲಾಪಗಳನ್ನು ಎರಡು ದಿನಗಳ ಕಾರ್ಯಾಗಾರಗಳಲ್ಲಿ ಅಳವಡಿಸಲಾಗಿದೆ.
Related Articles
ಬಿಕೆಎಸ್ ಅಯ್ಯಂಗಾರ್ ಅವರ ಶಿಷ್ಯೆ ಶೋಭಾ ಶೆಟ್ಟಿಯವರ ಯೋಗ ತರಗತಿಗೆ ನಾನು ಸೇರಿದ್ದು ಎಂಟು ವರ್ಷಗಳ ಹಿಂದೆ. ಆಗ ನನಗೆ ಬೆನ್ನುನೋವು ಕಾಡುತ್ತಿತ್ತು. ಯೋಗ ತರಗತಿಗೆ ಸೇರಿದ ಆರಂಭದಲ್ಲಿ ಕೆಲವು ಆಸನಗಳನ್ನು ಮಾಡಲು ಕಷ್ಟವಾಗುತ್ತಿತ್ತು. ಗುರುಗಳ ಸೂಚನೆಯಂತೆ ಕಷ್ಟಪಟ್ಟು ಆಸನಗಳನ್ನು ಮಾಡಿದೆ. ಈಗ ಬೆನ್ನುನೋವು ತುಂಬ ಕಡಿಮೆಯಾಗಿ ಆರೋಗ್ಯದಲ್ಲಿ ತುಂಬಾ ಸುಧಾರಣೆಯಾಗಿದೆ. ಯೋಗಾಸನಗಳನ್ನು ಆತ್ಮವಿಶ್ವಾಸದಿಂದ ಮಾಡಲು ಕೂಡಾ ಸಾಧ್ಯವಾಗಿದೆ.
ಮೀರಾ ರಾಜೇಶ್, ಚಿಟಾ³ಡಿ, ಉಡುಪಿ
Advertisement
ಎರಡು ವರ್ಷಗಳಿಂದ ನನ್ನ ಭುಜಗಳಲ್ಲಿ ನೋವು ಕಾಡುತ್ತಿತ್ತು. ನಾನು ಪ್ರತಿದಿನವೆಂಬಂತೆ ನೋವುನಿವಾರಕ ಗುಳಿಗೆಗಳನ್ನು ತೆಗೆದುಕೊಳ್ಳಬೇಕಾಗಿತ್ತು. ಅಯ್ಯಂಗಾರ್ ಯೋಗವನ್ನು ಅಭ್ಯಾಸ ಮಾಡಿದ ಮೇಲೆ ನೋವು ಕಡಿಮೆಯಾಯಿತು. ನಿಜವಾಗಿ ನಾನು ನನ್ನ ಯೋಗ ಗುರುಗಳಾದ ಶೋಭಾ, ವನಿತಾ, ಸುಚಿತ್ರಾ ಅವರಿಗೆ ಕೃತಜ್ಞತೆ ಹೇಳಬೇಕು!ಸೋನಿಯಾ ರಾಜೇಶ್, ಮಣಿಪಾಲ್ ನಾಲ್ಕು ವರ್ಷಗಳ ಹಿಂದೆ ಬೆನ್ನುನೋವಿನಿಂದ ಬಳಲುವುದನ್ನು ಕಂಡ ಪರಿಚಿತರೊಬ್ಬರು ಉಡುಪಿಯ “ಅಯ್ಯಂಗಾರ್ ಯೋಗಶಿಕ್ಷಕಿ’ ಶೋಭಾ ಶೆಟ್ಟಿಯವರನ್ನು ಪರಿಚಯಿಸಿದರು. ಅಂದಿನಿಂದ ನಿಯತವಾಗಿ ನಾನು ಅವರ ಮಾರ್ಗದರ್ಶನದಲ್ಲಿ ಯೋಗಾಭ್ಯಾಸ ನಡೆಸುತ್ತಿದ್ದು ನನ್ನ ಬೆನ್ನುನೋವಿನ ತೊಂದರೆಯಿಂದ ಮುಕ್ತಳಾಗಿದ್ದೇನೆ. ಯೋಗಾಭ್ಯಾಸ ನನ್ನ ದೈಹಿಕ, ಮಾನಸಿಕ ಆರೋಗ್ಯದ ಸುಧಾರಣೆಗೆ ಕಾರಣವಾಗಿದೆ. ಯೋಗಾಸನದ ಸೂಕ್ಷ್ಮ ವಿವರಗಳಿಗೂ ಒತ್ತು ನೀಡಿ ತರಬೇತಿ ನೀಡುವ ಶೋಭಾ ಶೆಟ್ಟಿಯವರು ಯೋಗದ ಹೊಸ ಆಯಾಮವನ್ನು ನನಗೆ ಪರಿಚಯಿಸಿದ್ದಾರೆ.
ಪದ್ಮಾವತಿ ತಲ್ಲೂರು