Advertisement

Sirsi: ಆಂತರಿಕ ಜಗಳ, ದುರಾಡಳಿತವೇ ಬಿಜೆಪಿ ಸೋಲಿಗೆ ಕಾರಣ: ಐವನ್ ಡಿಸೋಜಾ

04:34 PM Nov 25, 2024 | Team Udayavani |

ಶಿರಸಿ: ಆಂತರಿಕ ಜಗಳ, ದುರಾಡಳಿತ ಬಿಜೆಪಿ ಸೋಲಿಗೆ ಕಾರಣ, ಕನ್ನಡಿ ಮುಂದೆ ನಿಂತು ಬೇರೆಯವರಿಗೆ ಕಲ್ಲು ಹೊಡೆಯುವದು ಬಿಜೆಪಿ ಬಿಡಬೇಕು ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ ಸಲಹೆ ಮಾಡಿದರು.

Advertisement

ಸೋಮವಾರ ನಗರದ ಜಿಲ್ಲಾ‌ ಕಾಂಗ್ರೆಸ್ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ, ಬಿಜೆಪಿ ತಮ್ಮ‌ ಮಾತುಗಳನ್ನು ತಿರುಗಿ ನೋಡಬೇಕು. ಗ್ಯಾರೆಂಟಿ ನಿಲ್ಲಿಸುವುದಿಲ್ಲ. ಸಿಎಂ ಸಿದ್ದರಾಮಯ್ಯ ಅವರೂ ಇಳಿಯುವದಿಲ್ಲ, ಬಿಜೆಪಿ ಜನರ ದಾರಿ ತಪ್ಪಿಸುತ್ತಿದೆ ಎಂದರು.

ಸಿದ್ದರಾಮಯ್ಯ ಅವರದ್ದು ಯಾವುದೂ ತಪ್ಪಿಲ್ಲ ಎಂದು ಮೊನ್ನೆ ನಡೆದ ಉಪ ಚುನಾವಣೆಯ ಫಲಿತಾಂಶದಲ್ಲೆ ಸಾಬೀತಾದಂತಾಗಿದೆ. ಜನತಾ ನ್ಯಾಯಾಲಯದಲ್ಲಿ ಸಾಬೀತದ ಬಳಿಕವಾದರೂ ಬಿಜೆಪಿಗರು ತಿಳಿದುಕೊಳ್ಳಬೇಕಿತ್ತು ಎಂದರು.

ಗ್ಯಾರೆಂಟಿಗೆ ಜನರಿಗೆ ನೀಡಲು ಸರಕಾರ ಬದ್ಧವಾಗಿದೆ. ಯಾವುದೇ ಅಪ ಪ್ರಚಾರಕ್ಕೆ ಕಿವಿಗೊಡಬಾರದು. ಬಿಜೆಪಿ ನಾಯಕರು ಕ್ಷುಲ್ಲಕ ಕಾರಣ ನೀಡಿ ವಿರೋಧ ಮಾಡುವದು ಸರಿಯಲ್ಲ. ವಿರೋಧಕ್ಕೋಸ್ಕರ ವಿರೋಧ ಮಾಡುವ ವಿರೋಧ ಪಕ್ಷ ಆಗಬಾರದು. ಅದನ್ನು ಕೈ ಬಿಡಬೇಕು ಎಂದರು.

ಮೂರು ಕಡೆ ಚುನಾವಣೆಯಲ್ಲಿ ಸೋಲು ಯಾಕೆ ಆಯ್ತು‌ ಎಂಬುದಕ್ಕೆ ಬಿಜೆಪಿಗೆ ಆತ್ಮ ವಿಮರ್ಶೆ ಅಗತ್ಯವಿಲ್ಲ. ಯತ್ನಾಳ್ ಅವರೇ ಬಿಜೆಪಿ ಸೋಲಿಗೆ ಅಪ್ಪ ಮಗನ ಭ್ರಷ್ಟಾಚಾರ ಕಾರಣ ಎಂದು ಹೇಳಿದ್ದಾರೆ. ಬಿಜೆಪಿಗಳಲ್ಲೇ ಇರುವ ಒಳ ವಿರೋಧಿಗಳೇ ಕಾರಣ ಎಂದಿದ್ದಾರೆ.

Advertisement

ಬೆಳಗಾವಿಯಲ್ಲಿ ಕಾಂಗ್ರೆಸ್ ಅಧಿವೇಶನ ನಡೆಸಿದ ಶತಮಾನೋತ್ಸವ ಸಂಭ್ರಮ ಹಿನ್ನಲೆಯಲ್ಲಿ ನೂರು ಕಡೆ ಕಾಂಗ್ರೆಸ್ ಭವನ ಟ್ರಸ್ಟ್ ಅಡಿಯಲ್ಲಿ ನಿರ್ಮಾಣ ಮಾಡುತ್ತೇವೆ. ಗಾಂಧಿ ಭಾರತ‌ ಒಂದೇ ಬಾರಿ ನೂರು ಕಡೆ ಸುಸಜ್ಜಿತ ಭವನ ನಿರ್ಮಾಣಕ್ಕೆ ರಾಹುಲ್ ಗಾಂಧಿ ಶಿಲಾನ್ಯಾಸ ನೆಡಸಲಿದ್ದಾರೆ. ಶಿರಸೀಯಲ್ಲೂ ಒಂದು‌ ಭವನ ಆಗಲಿದೆ ಎಂದರು.

ಇ ಸ್ವತ್ತಿನ ಸಮಸ್ಯೆ ಆದಷ್ಟು ಬೇಗ ಬಗೆ ಹರಿಸುತ್ತೇವೆ. ಉಸುಕಿನ ಸಮಸ್ಯೆ ನಿವಾರಿಸಲು ಮುಂದಾಗುತ್ತೇವೆ. ಕಸ್ತೂರಿ ರಂಗನ್ ವರದಿ ರಾಹುಲ್ ಗಾಂಧಿ ಸಂಸತ್ತಿನಲ್ಲಿ‌ ಪ್ರಸ್ತಾಪ‌ ಮಾಡುತ್ತಾರೆ ಎಂದರು.

ಜಿಲ್ಲಾ ಅಧ್ಯಕ್ಷ ಸಾಯಿ ಗಾಂವಕರ, ಪ್ರಮುಖರಾದ ವೆಂಕಟೇಶ ಹೊಸಬಾಳೆ, ಅಬ್ಬಾಸ ತೋನಸೆ, ಸಿ.ಎಫ್.ನಾಯ್ಕ, ಸುಜಾತಾ ಗಾಂವಕರ, ಜ್ಯೋತಿ ಗೌಡ ಇತರರು ಇದ್ದರು.

ಇದನ್ನೂ ಓದಿ: Andaman: ಕೋಸ್ಟ್ ಗಾರ್ಡ್ ಕಾರ್ಯಾಚರಣೆ… ಮೀನುಗಾರಿಕಾ ದೋಣಿಯಲ್ಲಿದ್ದ 5ಟನ್ ಮಾದಕ ವಸ್ತು ವಶ

Advertisement

Udayavani is now on Telegram. Click here to join our channel and stay updated with the latest news.

Next