Advertisement
ಬಹಳ ದಿನಗಳ ಮಾತ್ರವಲ್ಲ ಬಹು ವರ್ಷದಿಂದ ಗಟ್ಟಿ ಮಳೆಯನ್ನೇ ನೋಡದ ಜನರು ಮಳೆ ಕಂಡು ನೆಮ್ಮದಿ ಉಸಿರುಬಿಟ್ಟರು. ಮಳೆಯಿಂದಾಗಿ ರಸ್ತೆಗಳಲ್ಲಿ ನೀರು ನಿಂತಿದ್ದು ಅದರಲ್ಲೇ ದ್ವಿಚಕ್ರ, ಆಟೋ ರಿಕ್ಷಾ, ಬಸ್, ಕಾರು ಚಾಲಕರು ಸರ್ಕಸ್ ಮಾಡುತ್ತಲೇ ಮುಂದೆ ಸಾಗಿದರು. ಮಹಾನಗರ ಪಾಲಿಕೆ ಮುಂದಿರುವ ರೈಲ್ವೆ ಕೆಳ ಸೇತುವೆ, ಎಪಿಎಂಸಿ ಬಳಿಯ ರೈಲ್ವೆ ಮೇಲ್ಸೇತುವೆ ಇತರೆ ಭಾಗಗಳು ಜಲಾವೃತ್ತಗೊಂಡಿದ್ದವು. ರೈಲ್ವೆ ಕೆಳ ಸೇತುವೆ ದಾಟಲು ವಾಹನ ಸವಾರರು ಎಂದಿನಂತೆ ಸಮಸ್ಯೆ ಅನುಭವಿಸಿದರು. ಅಂತೂ ಇಂತೂ ದಾವಣಗೆರೆಯಲ್ಲಿ ಬಹಳ ದಿನಕ್ಕೆ ಗಟ್ಟಿ ಮಳೆಯಾಯಿತು. ಸಂಜೆ ಕೆಲ ಕಾಲ ವಿರಾಮ ನೀಡಿದ ಮಳೆ ಮತ್ತೆ ಜಿನುಗುಲಾರಂಭಿಸಿತು. Advertisement
ಅಂತೂ ಇಂತೂ ಬಂತಲ್ಲ ಜೋರು ಮಳೆ!
11:44 AM Jul 19, 2017 | Team Udayavani |
Advertisement
Udayavani is now on Telegram. Click here to join our channel and stay updated with the latest news.