ಚೆನ್ನೈ: ಕೋವಿಡ್-19 ಕಾರಣದಿಂದ ಕ್ರಿಕೆಟ್ ವಲಯ ಸ್ಥಬ್ಧವಾಗಿದೆ. ಮುಂದೆ ಯಾವಾಗ ಕ್ರಿಕೆಟ್ ಆಟ ನಡೆಯುತ್ತದೆ ಎನ್ನುವುದು ಕೂಡಾ ಸದ್ಯಕ್ಕೆ ತಿಳಿದಿಲ್ಲ. ಆದರೆ ಸದ್ಯ ಚೆಂಡಿಗೆ ಎಂಜಲು ಸವರುವುದನ್ನು ನಿಷೇಧಿಸುವ ಬಗ್ಗೆ ಚರ್ಚೆಗಳಾಗುತ್ತಿದೆ.
ಕ್ರಿಕೆಟ್ ನಲ್ಲಿ ಚೆಂಡಿನ ಹೊಳಪು ಹೆಚ್ಚಿಸುವ ಕಾರಣ ಎಂಜಲು ಸವರುವುದು ಕೆಲವು ಸಮಯದಿಂದ ನಡೆದುಕೊಂಡು ಬಂದಿದೆ. ಆದರೆ ಕೋವಿಡ್-19 ಸಮಯದಲ್ಲಿ ಚೆಂಡಿಗೆ ಎಂಜಲು ಸವರುವುದನ್ನು ನಿಷೇಧಿಸುವ ಮಾತುಕತೆ ನಡೆಯುತ್ತಿದೆ. ಐಸಿಸಿಯೂ ಇದರ ಬಗ್ಗೆ ಚರ್ಚೆ ನಡೆಸುತ್ತಿದೆ.
ಟೀ ಇಂಡಿಯಾ ದ ಕೇರಮ್ ಸ್ಪಿನ್ ಸ್ಪೆಷಲಿಸ್ಟ್ ರವಿಚಂದ್ರನ್ ಅಶ್ವಿನ್ ಈ ನಡೆಯ ಬಗ್ಗೆ ಮಾತನಾಡಿದ್ದಾರೆ. ಇನ್ನು ಯಾವಾಗ ಮೈದಾನದಲ್ಲಿ ಬೌಲಿಂಗ್ ನಡೆಸುತ್ತೇನೆ ಎಂದು ಗೊತ್ತಿಲ್ಲ. ಆದರೆ ಚೆಂಡಿಗೆ ಎಂಜಲು ಸವರುವುದು ನನಗೆ ಸ್ವಾಭಾವಿಕವಾಗಿ ಬಂದ ಅಭ್ಯಾಸ ಎಂದಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಜೊತೆಗೆ ಇನ್ಸ್ಟಾಗ್ರಾಮ್ ಚಾಟ್ ನಲ್ಲಿ ಮಾತನಾಡಿದ ಅಶ್ವಿನ್, ನೀವು 1970ರ ಪಂದ್ಯಗಳನ್ನು ನೋಡಿದರೆ ವಿಕೆಟ್ ಬಿದ್ದಾಗ ಸಂಭ್ರಮಾಚರಣೆಗಳು ವಿಭಿನ್ನವಾಗಿದ್ದವು. ಆಗ ದೂರ ದೂರ ನಿಂತು ಚಪ್ಪಾಳೆ ತಟ್ಟುತ್ತಿದ್ದರು. ಆದರೆ ಈಗ ವಿಭಿನ್ನವಾಗಿದೆ ಎಂದರು.
ಕಳೆದ ಬಾರಿ ಕಿಂಗ್ಸ್ ಇಲೆವೆನ್ ಪಂಜಾಬ್ ನಾಯಕರಾಗಿದ್ದ ಅಶ್ವಿನ್ ಈ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.