ಎಲ್ಲ ರೀತಿಯ ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವ ಕೈಗಾರಿಕೆಗಳು ನಗರದಲ್ಲಿ ಇನ್ನೂ ಆರಂಭವಾಗಿಲ್ಲ. ಎಲೆಕ್ಟ್ರಿಕ್ ಮತ್ತು ವಯರಿಂಗ್ ಕ್ಷೇತ್ರದಲ್ಲಿ ಇಲ್ಲಿ ಸಾಕಷ್ಟು ಉದ್ಯೋಗಾವಕಾಶಗಳು ಲಭ್ಯವಿವೆ.
Advertisement
. ಐಟಿಐ ಕಲಿಕೆ ಮತ್ತು ಭವಿಷ್ಯದ ಬಗ್ಗೆ ಏನು ಹೇಳುತ್ತೀರಿ?ಐಟಿಐ ಕಲಿಕೆಯಿಂದ ಭವಿಷ್ಯದಲ್ಲಿ ಜೀವನವನ್ನು ಸುಭದ್ರವಾಗಿಸಿಕೊಳ್ಳಬಹುದು. ಇತ್ತೀಚಿನ ದಿನಗಳಲ್ಲಿ ಎಂಜಿನಿಯರಿಂಗ್ ಓದಿದವರಿಗೆ ಉದ್ಯೋಗಾವಕಾಶಗಳು ಕಡಿಮೆ ಇವೆ. ಏಕೆಂದರೆ ಅವರ ಸಂಬಳದ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ಐಟಿಐ ಮತ್ತು ಡಿಪ್ಲೊಮಾ ಕಲಿತವರ ಸಂಬಳ ನಿರೀಕ್ಷೆ ಕಡಿಮೆ ಇರುವುದರಿಂದ ಕಂಪೆನಿಗಳು ಇವರನ್ನೇ ಹೆಚ್ಚು ಉದ್ಯೋಗಕ್ಕೆ ಆಯ್ಕೆ ಮಾಡಿಕೊಳ್ಳುತ್ತವೆ. ಮುಂದಿನ ದಿನಗಳಲ್ಲಿ ಈ ಟ್ರೆಂಡ್ ಇನ್ನಷ್ಟು ಬದಲಾಗಬಹುದು.
ಎಸೆಸೆಲ್ಸಿ, ಪಿಯುಸಿಯಲ್ಲೇ ವಿದ್ಯಾಭ್ಯಾಸ ಮೊಟಕುಗೊಳಿಸುವವರು, ಫೇಲಾದರೆ ಭವಿಷ್ಯವಿಲ್ಲ ಎಂದು ತಿಳಿದುಕೊಳ್ಳುವವರು ಯೋಚನೆ ಮಾಡಬೇಕು. ಅನುತ್ತೀರ್ಣರಾದರೂ ಕಡಿಮೆ ಅಂಕ ಬಂದರೂ ಭವಿಷ್ಯಕ್ಕೆ ಪೂರಕವಾದ ವಿದ್ಯಾಭ್ಯಾಸ ಮುಂದುವರಿಸಲು ಸಾಕಷ್ಟು ಅವಕಾಶಗಳಿವೆ. ಐಟಿಐ ಕೋರ್ಸ್ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಸದೃಢವಾಗಿಸಿಕೊಳ್ಳಬಹುದು.
Related Articles
ಎಸೆಸೆಲ್ಸಿ, ಪಿಯುಸಿ ಬಳಿಕ ಯಾವುದೇ ವೃತ್ತಿಪರ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದಿದ್ದರೂ, ಮೊದಲು ಕ್ಷೇತ್ರಜ್ಞಾನ ಪಡೆದುಕೊಳ್ಳಬೇಕು. ಐಟಿಐ ಕ್ಷೇತ್ರದಲ್ಲಿ ಭವಿಷ್ಯವಿದೆ. ಹೊರಗಡೆ ಹೋಗಿ ದುಡಿಯುವ ಧೈರ್ಯ ಇದ್ದಲ್ಲಿ ಬೇರೆ ಕೋರ್ಸ್ ಮಾಡಬಹುದು. ಮಂಗಳೂರಿನಲ್ಲೇ ಅಥವಾ ತನ್ನದೇ ಊರಲ್ಲಿಯೇ ಇರಬೇಕೆಂದರೆ ಅಲ್ಲಿಗೆ ಹೊಂದಿಕೆಯಾಗುವ ವೃತ್ತಿ ಕೋರ್ಸ್ ಆಯ್ಕೆ ಮಾಡಿಕೊಳ್ಳುವುದು ಉತ್ತಮ.
Advertisement