ಫೈನಲ್ ಪಂದ್ಯದಲ್ಲಿ ಕರ್ಮನ್ ಚೀನದ ಕ್ಸಿನ್ಯುನ್ ಹಾನ್ ವಿರುದ್ಧ 4-2, 6-2, 4-6 ಸೆಟ್‌ಗಳಿದ ಸೋತು ಪ್ರಶಸ್ತಿ ವಂಚಿತರಾದರು. ಈ ಋತುವಿನಲ್ಲಿ ಎರಡನೇ ಬಾರಿ ಫೈನಲ್ ಪ್ರವೇಶಿಸಿದ ಕರ್ಮನ್ ಈ ಕೂಟದ ಫೈನಲ್ ಪ್ರವೇಶಿಸಲು ಅಗ್ರ 200ರೊಳಗಿರುವ ಆಟಗಾರ್ತಿಯರನ್ನೆಲ್ಲ ಸೋಲಿಸಿದ್ದರು. ಅವರು ಜೂಲಿಯಾ ಗುಸ್ಕೋ (123), ಕೇಟಿ ಸ್ವಾನ್ (163), ಕರೋಲ್ ಜೂವೊ (189) ವಿರುದ್ಧ ಜಯಿಸಿದ್ದರು. ಕರ್ಮನ್ ರ್‍ಯಾಂಕಿಂಗ್‌ನಲ್ಲಿ 215ನೇ ಸ್ಥಾನದಲ್ಲಿದ್ದಾರೆ.
“ರ್‍ಯಾಂಕಿಂಗ್‌ನಲ್ಲಿ ನನಗಿಂತ ಮೇಲಿನ ಆಟಗಾರ್ತಿಯನ್ನು ಸೋಲಿಸಿರುವುದು ನನಗೆ ಪ್ರೇರಣೆ ನೀಡಿದೆ. ಎಲ್ಲ ಪಂದ್ಯಗಳು ಕಠಿನವಾಗಿದ್ದವು. ಪ್ರತಿಯೊಂದು ಪಂದ್ಯದಲ್ಲಿ ನನ್ನ ಸಾಮರ್ಥ್ಯದಂತೆ ಆಡಿದ್ದೇನೆ. ಫೈನಲ್‌ನಲ್ಲಿ ನನ್ನ ಪ್ರದರ್ಶನ ತೃಪ್ತಿ ನೀಡಿಲ್ಲ. ಆಟದ ತೀವ್ರತೆ ಉತ್ತಮ ಮಟ್ಟದಲ್ಲಿತ್ತು. ಇದನ್ನು ಧನಾತ್ಮಕವಾಗಿ ಸ್ವೀಕರಿಸಿ ಮುಂಬರುವ ಚಾಲೆಂಜರ್‌ಗಳಲ್ಲಿ ಮತ್ತಷ್ಟು ಉತ್ತಮ ಪ್ರದರ್ಶನ ನೀಡುತ್ತೇನೆ’ ಎಂದು ಕರ್ಮನ್ ಪ್ರತಿಕ್ರಿಯಿಸಿದ್ದಾರೆ. ಕರ್ಮನ್ ಕೌರ್ ಥಾಂಡಿ ಇನ್ನು ಡಬ್ಲ್ಯುಟಿಎ ಮುಂಬಯಿ ಓಪನ್ ಕೂಟದಲ್ಲಿ
ಭಾಗವಹಿಸಲಿದ್ದಾರೆ.
Advertisement