ಲೇಹ್ – ಲಡಾಖ್‌ಗೆ ಸ್ಥಳಾಂತರಗೊಂಡಿದ್ದ ಇಂಡೋ ಬಾರ್ಡರ್ ಪೊಲೀಸ್ (ಐಟಿಬಿಪಿ) ಈಗ ಕಾರ್ಯನಿರ್ವಹಣೆ ಆರಂಭಿಸಿದೆ. ಈ ಭಾಗದಲ್ಲಿ ಗಡಿಯಾಚೆಗೆ ಚೀನಾ ತನ್ನ ಸೇನಾ ಬಲ ಹೆಚ್ಚಿಸಿಕೊಂಡಿರುವ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ಈ ನಿರ್ಧಾರ ಕೈಗೊಂಡಿತ್ತು. ಲಡಾಖ್‌ನಲ್ಲಿ ಈಗಾಗಲೇ ಇರುವ ಕೇಂದ್ರ ಕಚೇರಿಯಲ್ಲೇ ಹೊಸ ತುಕಡಿ ಕೆಲಸ ಮಾಡಲಿದೆ. ಇನ್ಸ್‌ಪೆಕ್ಟರ್ ಜನರಲ್ ಶ್ರೇಣಿಯ ಪೊಲೀಸ್ ಅಧಿಕಾರಿಯ ನೇತೃತ್ವದಲ್ಲಿ ಈ ತಂಡ ಕೆಲಸ ಮಾಡಲಿದೆ. ಹೊಸ ಕಮಾಂಡ್ ಸೆಂಟರ್ ಸ್ಥಾಪನೆಗೆ ಅನುಮೋದನೆ ನೀಡಲಾಗಿದ್ದು, ಶೀಘ್ರದಲ್ಲೇ ನಿರ್ಮಾಣ ಕಾರ್ಯ ಆರಂಭವಾಗಲಿದೆ. ಹಲವು ವರ್ಷಗಳಿಂದಲೂ ಈ ಕಮಾಂಡ್ ಸೆಂಟರ್‌ಗೆ ಸೇನೆ ಬೇಡಿಕೆ ಸಲ್ಲಿಸಿತ್ತು. ಆದರೆ ಆಡಳಿತಾತ್ಮಕ ಕಾರಣಗಳಿಂದ ಇದು ಚಾಲ್ತಿಗೆ ಬಂದಿರಲಿಲ್ಲ.
Advertisement