Advertisement

Italy: ಒನ್‌ ಬೆಲ್ಟ್‌ನಿಂದ ಹೊರಬಿದ್ದ ಇಟಲಿ-ಚೀನಾಕ್ಕೆ ಭಾರೀ ಆಘಾತ

10:29 PM Dec 06, 2023 | Team Udayavani |

ರೋಮ್‌: ಚೀನಾದ ಮಹತ್ವಾಕಾಂಕ್ಷೆಯ ಮೂಲಸೌಕರ್ಯಯೋಜನೆ ಒನ್‌ ಬೆಲ್ಟ್- ಒನ್‌ ರೋಡ್‌ ಯೋಜನೆಯಿಂದ ಇಟಲಿ ನಿರ್ಗಮಿಸಿದೆ. ಭಾರತದ ಸುತ್ತ ಆರ್ಥಿಕಪಥ ನಿರ್ಮಿಸಿ ಹಿಡಿತ ಸಾಧಿಸುವ ಚೀನಾದ ಹುನ್ನಾರಕ್ಕೆ ಇಟಲಿ ನಿರ್ಗಮನ ಭಾರೀ ಹೊಡೆತ ನೀಡಿದಂತಾಗಿದೆ. ಯೂರೋಪ್‌ ಮತ್ತು ಏಷ್ಯಾಗಳನ್ನು ಸಂಪರ್ಕಿಸುವ ಪುರಾತನ ವ್ಯಾಪಾರ ಮಾರ್ಗಗಳನ್ನು ಪುನರುಜ್ಜೀವನಗೊಳಿಸುವ ಜಾಗತಿಕ ಮೂಲಸೌಕರ್ಯ ಯೋಜನೆ ಇದಾಗಿದ್ದು, ಚೀನಾದ ಜತೆಗೆ ಈ ಒಪ್ಪಂದಕ್ಕೆ ಕೈಜೋಡಿಸಿದ ಏಕೈಕ ಜಿ-7 ರಾಷ್ಟ್ರ ಇಟಲಿ ಮಾತ್ರವೇ ಆಗಿತ್ತು.

Advertisement

ಹೂಡಿಕೆಗಳನ್ನು ಆಕರ್ಷಿಸಲು ಮತ್ತು ಚೀನಾದ ಮಾರುಕಟ್ಟೆಗೆ ರಫ್ತು ಪ್ರವೇಶವನ್ನು ವಿಸ್ತರಿಸುವ ನಿಟ್ಟಿನಲ್ಲಿ ನಾಲ್ಕು ವರ್ಷಗಳ ಹಿಂದೆ ಒನ್‌ ಬೆಲ್ಟ್-ಒನ್‌ ರೋಡ್‌ ಉಪಕ್ರಮಕ್ಕೆ ಇಟಲಿ ಪಾಲುದಾರನಾಗಲು ಸಹಿ ಹಾಕಿತ್ತು. ಆದರೆ, ಈ ಉಪಕ್ರಮಕ್ಕೆ ಸೇರಿದಾಗಿನಿಂದ ಚೀನಾಗೆ ಹೋಗುತ್ತಿರುವ ಇಟಲಿಯ ರಫ್ತು ಪ್ರಮಾಣ 14.5 ಶತಕೋಟಿ ಯೂರೋಗಳಿಂದ 18.5 ಶತಕೋಟಿ ಯುರೋಗಳಿಗೆ ಏರಿಕೆಯಾದರೆ, ಚೀನಾದಿಂದ ಇಟಲಿಗೆ ಕಳುಹಿಸುತ್ತಿರುವ ರಫ್ತು ಪ್ರಮಾಣ ಮಾತ್ರ 33.5 ಶತಕೋಟಿ ಯುರೋಗಳಿಂದ 50.9 ಶತಕೋಟಿ ಯೂರೋಗಳಿಗೆ ಹೆಚ್ಚಾಗಿದೆ. ಇದರಿಂದ ಚೀನಾದೊಂದಿಗೆ ಇಟಲಿ ವ್ಯಾಪಾರ ಕೊರತೆ ಎದುರಿಸುವ ಸ್ಥಿತಿ ಎದುರಾಗಿರುವ ಹಿನ್ನೆಲೆಯಲ್ಲಿ ಇಟಲಿ ಉಪಕ್ರಮದಿಂದ ನಿರ್ಗಮಿಸುವುದಾಗಿ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next