Advertisement

ಇಟಲಿ: ಅಂತಾರಾಷ್ಟ್ರೀಯ ವಿಮಾನ ಸೇವೆಗಳು ಪ್ರಾರಂಭ

04:19 PM May 03, 2020 | mahesh |

ರೋಮ್‌: ಸುಮಾರು ಎರಡು ತಿಂಗಳ ಇಟಲಿಯ 2 ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳು ಮೇ 4 ರಿಂದ ಕಾರ್ಯಾರಂಭ ಮಾಡಲಿವೆ. ರೋಮ್‌ನ ಸಿಯಾಂಪಿನೊ ಮತ್ತು ಫ್ಲಾರೆನ್ಸ್‌ನ ಪೆರೆಟೋಲಾ ವಿಮಾನ ನಿಲ್ದಾಣಗಳು ಸೇವೆ ಆರಂಭಿಸಲಿವೆ. ಇಲ್ಲಿಯೂ ಸೋಂಕಿನ ಪರೀಕ್ಷೆಗಳನ್ನು ನಡೆಸಲಾಗುತ್ತದೆ. ಅಂತಾರಾಷ್ಟ್ರೀಯ ಪ್ರಯಾಣದ ಸಂದರ್ಭ ಹಾಗೂ ಪ್ರಯಾಣಿಕರ ಆಗಮನದ ಸಂದರ್ಭ ಸ್ಕ್ರೀನಿಂಗ್‌ ಗಳು ಕಡ್ಡಾಯವಾಗಿ ನಡೆಯಲಿವೆ.

Advertisement

ಸಿಯಾಂಪಿನೊ ರೋಮ್‌ನ ಎರಡನೇ ಅತ್ಯುನ್ನತ ವಿಮಾನ ನಿಲ್ದಾಣ.ಆದರೆ ಇದುವರೆಗೆ ಯಾವ ವಿಮಾನಯಾನ ಸಂಸ್ಥೆಗಳು ಸೇವೆಯನ್ನು ಆರಂಭಿಸಲಿವೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಕೋವಿಡ್‌-19 ಕಾರಣದಿಂದ ಬಹುತೇಕ ರಾಷ್ಟ್ರಗಳು ಅಂತಾರಾಷ್ಟ್ರೀಯ ವಿಮಾನಯಾನ ಸೇವೆಗಳನ್ನು ಸ್ಥಗಿತಗೊಳಿಸಿದೆ. ಇಟಲಿ ಮಾರ್ಚ್‌ 13ರ ಬಳಿಕ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳನ್ನು ಮುಚ್ಚಿತ್ತು. ಆದರೆ ದೇಶಿಯ ವಿಮಾನಯಾನ ಸೇವೆಗಳು ಚಾಲ್ತಿಯಲ್ಲಿತ್ತು. ಮೇ 4ರ ಬಳಿಕ ಎರಡನೇ ಹಂತದ ಲಾಕ್‌ಡೌನ್‌ ಜಾರಿಯಲಿದ್ದು, ಕೆಲವು ಸೇವೆಗಳು ಷರತ್ತಿನ ಮೇರೆಗೆ ಆರಂಭಗೊಳ್ಳಲಿವೆ. ಹಂತ ಹಂತವಾಗಿ ನಿರ್ಬಂಧಗಳು ತೆರವುಗೊಳ್ಳಲಿದ್ದು, ರೈಲು ಸೇವೆಗಳೂ ಕ್ರಮೇಣ ಆರಂಭವಾಗುವ ಸಂಭವವಿದೆ.

Advertisement

Udayavani is now on Telegram. Click here to join our channel and stay updated with the latest news.

Next