ಬ್ಯೂನಸ್ ಐರಿಸ್: ಇಟಲಿ, ನೈಜೀರಿಯ, ಕೊಲಂಬಿಯ ಮತ್ತು ಬ್ರಝಿಲ್ ತಂಡವು ಅಂಡರ್-20 ವಿಶ್ವಕಪ್ ಫುಟ್‌ಬಾಲ್ ಕೂಟದ ಕ್ವಾರ್ಟರ್‌ಫೈನಲ್ ಹಂತಕ್ಕೇರಿದೆ.
ಆತಿಥೇಯ ಆರ್ಜೆಂಟೀನಾ ತಂಡವು ಸಾನ್ ಜುವಾನ್‌ನಲ್ಲಿ 30 ಸಾವಿರದಷ್ಟು ಅಭಿಮಾನಿಗಳ ಸಮ್ಮುಖ ನಡೆದ ಪಂದ್ಯದಲ್ಲಿ ನೈಜೀರಿಯ ವಿರುದ್ಧ 0-2 ಗೋಲುಗಳಿಂದ ಸೋತು ಆಘಾತ ಅನುಭವಿಸಿತು. ಇದೇ ವೇಳೆ ಇಟಲಿ ತಂಡವು ಇಂಗ್ಲೆಂಡ್ ತಂಡವನ್ನು 2-1 ಗೋಲುಗಳಿಂದ ಕೆಡಹಿ ಅಂತಿಮ ಎಂಟರ ಸುತ್ತಿಗೇರಿದೆ. ಕೊನೆ ಹಂತದಲ್ಲಿ ಗೋಲು ಹೊಡೆಯುವ ಮೂಲಕ ಇಟಲಿ ಜಯಭೇರಿ ಬಾರಿಸಿತ್ತು.
ಬ್ರಝಿಲ್ ಟ್ಯುನಿಶಿಯವನ್ನು 4-1 ಗೋಲುಗಳಿಂದ ಪರಾಭವಗೊಳಿಸಿದರೆ ಕೊಲಂಬಿಯ ತಂಡವು ಸ್ಲೋವಾಕಿಯ ತಂಡವನ್ನು 5-1 ಗೋಲುಗಳಿಂದ ಸೋಲಿಸಿ ಸಂಭ್ರಮಿಸಿತು.